ಜ್ಯೋತಿಷ್ಯದಲ್ಲಿ ಕೆಲವೊಂದು ಸಾರಿ ಗ್ರಹಗಳ ಸಂಚಾರದಿಂದ ಒಂದೇ ದಿನ ಅನೇಕ ಯೋಗಗಳು ಸೃಷ್ಟಿ ಆಗುತ್ತದೆ. ಈ ಯೋಗದ ಕಾರಣದಿಂದ ಅನೇಕ ಬದಲಾವಣೆಗಳು ಸಹ ಆಗುತ್ತದೆ. ಇದೀಗ ಒಂದೇ ದಿನ ಸರ್ವಾರ್ಥ ಸಿದ್ಧಿ ಯೋಗ, ಜೊತೆಗೆ ತ್ರಿ ಏಕಾದಶಿ ಯೋಗ ಮತ್ತು ಚಂದ್ರಾಧಿ ಯೋಗಗಳಂತಹ (Chandrandri Yoga) ವಿಶೇಷ ಯೋಗಗಳು ಸೃಷ್ಟಿ ಆಗುತ್ತದೆ. ಈ ಅದ್ಭುತವಾದ ಯೋಗಗಳ ಕಾರಣದಿಂದ ಈ 5 ರಾಶಿಯವರ ಜೀವನದಲ್ಲಿ ಮ್ಯಾಜಿಕ್ ಆಗುತ್ತದೆ. ಆ ಲಕ್ಕಿ ರಾಶಿಗಳು ಯಾವುವು ಎಂಬುದು ಇಲ್ಲಿದೆ.
ವೃಷಭ ರಾಶಿ: ನಿಮ್ಮ ವೃತ್ತಿಜೀವನದಲ್ಲಿ ನೀವು ಕೆಲವು ದೊಡ್ಡ ಬದಲಾವಣೆ ಆಗುತ್ತದೆ. ಇದರಿಂದ ನಿಮಗೆ ಅನೇಕ ವಿಚಾರವಾಗಿ ಗೆಲುವು ಸಿಗುತ್ತದೆ. ಇಷ್ಟೇ ಅಲ್ಲದೇ, ಮನಸ್ಸಿಗೆ ನೆಮ್ಮದಿ ಸಿಗಲಿದೆ. ಆರ್ಥಿಕ ಲಾಭದ ಸಾಧ್ಯತೆಗಳಿವೆ. ಈ ಸಮಯದಲ್ಲಿ ಹಣಕಾಸಿನ ವ್ಯವಹಾರ ಮಾಡುವವರಿಗೆ ಅದೃಷ್ಟ ಒಲಿದು ಬರಲಿದೆ ಎನ್ನಬಹುದು.
ಕಟಕ ರಾಶಿ: ಜೀವನದಲ್ಲಿ ಧನಾತ್ಮಕ ಬದಲಾವಣೆಗಳನ್ನು ತರುತ್ತದೆ. ವ್ಯಾಪಾರ ಮಾಡುವವರು ವಿಶೇಷ ಲಾಭವನ್ನು ಪಡೆಯುತ್ತಾರೆ. ವೃತ್ತಿ ಜೀವನದಲ್ಲಿ ಪ್ರಗತಿ ಕಾಣಲಿದೆ. ಬೇರೆಡೆ ಸಿಲುಕಿರುವ ಹಣವನ್ನು ಪಡೆಯುವ ಮೂಲಕ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ. ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ. ಹಣದ ಒಳಹರಿವಿಗೆ ಮಾರ್ಗಗಳು ಸೃಷ್ಟಿಯಾಗಲಿವೆ.
ತುಲಾ ರಾಶಿ: ಈ ಯೋಗವು ತುಲಾ ರಾಶಿಯವರಿಗೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. ಸಂಗಾತಿಗೆ ಪ್ರೀತಿಯನ್ನು ನೀಡುವಿರಿ ಮತ್ತು ಪ್ರೀತಿಯನ್ನು ಸ್ವೀಕರಿಸುವಿರಿ. ಕೆಲಸದಲ್ಲಿ ಯಶಸ್ಸು ಕಾಣುವಿರಿ. ನಿಮ್ಮ ಜೀವನದಲ್ಲಿ ಆರ್ಥಿಕ ಸ್ಥಿರತೆ ಇರುತ್ತದೆ ಮತ್ತು ಆರ್ಥಿಕ ಲಾಭವಿರುತ್ತದೆ. ನಿಮ್ಮ ವೃತ್ತಿಯಲ್ಲಿ ಪ್ರಗತಿ ಇರುತ್ತದೆ.
ಧನಸ್ಸು ರಾಶಿ: ಈ ಯೋಗವು ಉದ್ಯೋಗ ಮತ್ತು ವ್ಯವಹಾರದಲ್ಲಿ ಲಾಭವನ್ನು ನೀಡುತ್ತದೆ. ಕೌಟುಂಬಿಕ ವಾತಾವರಣ ಆಹ್ಲಾದಕರವಾಗಿರುತ್ತದೆ. ನೀವು ಸ್ಮರಣೀಯ ಸಮಯವನ್ನು ಕಳೆಯುತ್ತೀರಿ. ನೀವು ಸಹೋದ್ಯೋಗಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ನಿರ್ಧಾರಗಳು ಸರಿಯಾಗಿವೆ ಎಂದು ಸಾಬೀತುಪಡಿಸುತ್ತದೆ. ಒಂದರ ನಂತರ ಒಂದರಂತೆ ಆರ್ಥಿಕ ಲಾಭದ ಅವಕಾಶಗಳನ್ನು ಪಡೆಯುತ್ತೀರಿ.
ಮೀನ ರಾಶಿ: ಈ ಯೋಗದ ಸಮಯದಲ್ಲಿ ಮೀನ ರಾಶಿಯವರು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತಾರೆ. ಅದೃಷ್ಟದ ಸಹಾಯದಿಂದ ನೀವು ಪ್ರತಿಯೊಂದು ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ. ಹೊಸ ಉದ್ಯೋಗ ಸಿಗಬಹುದು ಜೊತೆಗೆ ಹೊಸ ಕಾರು, ಮನೆಯನ್ನೂ ಖರೀದಿಸಬಹುದು.
