WPL: ಮಹಿಳಾ ಐಪಿಎಲ್‌ ಗೆದ್ದ ಆರ್‌ಸಿಬಿ, ಈ ಸಲ ಕಪ್‌ ನಮ್ದೇ

Virat Kohli special message to RCB win 2nd WPL title

ಬೆಂಗಳೂರು: ಈ ಸಲ ಕಪ್ ನಮ್ದು ಅನ್ನೋದನ್ನ ಆರ್‌ಸಿಬಿ ಮಹಿಳಾ ತಂಡ ಮತ್ತೆ ಸಾಬೀತು ಮಾಡಿದೆ. ಗುರುವಾರ ರಾತ್ರಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ (WPL) 2026 ರ ಫೈನಲ್‌ನಲ್ಲಿ ಆರ್‌ಸಿಬಿ (RCB) ತಂಡ ಗೆಲುವು ಸಾಧಿಸಿದೆ.

2024ರಲ್ಲೂ ಗೆಲುವು ಸಾಧಿಸಿದ್ದ ಆರ್‌ಸಿಬಿ

2024 ರಲ್ಲಿ ಆರ್‌ಸಿಬಿಯ ಮಹಿಳಾ ತಂಡ ಗೆಲುವು ಸಾಧಿಸಿತ್ತು, ಈ ಮೂಲಕ ಆರ್‌ಸಿಬಿ ಅಭಿಮಾನಿಗಳ ಕನಸನ್ನ ನನಸು ಮಾಡಿತ್ತು. ಈ ಬಾರಿ ಸಹ ಮತ್ತೆ ಕಪ್‌ ಎತ್ತಿದೆ. ವಿಶ್ವದ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ತಂಡಗಳಲ್ಲಿ ಒಂದಾದ ಆರ್‌ಸಿಬಿ ತಂಡ ಮತ್ತೊಮ್ಮೆ ತನ್ನ ಪವರ್‌ ತೋರಿಸಿದೆ.

ನಿನ್ನೆ ವಡೋದರಾದ ಬಿಸಿಎ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯವು ಅತ್ಯಂತ ರೋಮಾಂಚಕಾರಿ ಪಂದ್ಯವಾಗಿತ್ತು. ಸತತ ನಾಲ್ಕನೇ ಫೈನಲ್‌ಗೆ ಪ್ರವೇಶಿಸಿದ ಡೆಲ್ಲಿ ಕ್ಯಾಪಿಟಲ್ಸ್, ಜೆಮಿಮಾ ರೊಡ್ರಿಗಸ್ ಅವರ 57 ರನ್‌ಗಳ ನೆರವಿನಿಂದ 4 ವಿಕೆಟ್‌ಗೆ 203 ರನ್ ಗಳಿಸಿತು. ಇದು WPL ಫೈನಲ್‌ನಲ್ಲಿ ದಾಖಲಾದ ಅತ್ಯಧಿಕ ಮೊತ್ತವಾಗಿದ್ದು, RCB ಈ ಮೊತ್ತವನ್ನ ಬೆನ್ನತ್ತಿದೆ.

ಇನ್ನು ಆರ್‌ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದರು.  ಕೇವಲ 41 ಎಸೆತಗಳಲ್ಲಿ 87 ರನ್ ಗಳಿಸಿದರು. ಜಾರ್ಜಿಯಾ ವೋಲ್ (79) ಜೊತೆಗೆ, ಮಂಧಾನ 165 ರನ್‌ಗಳನ್ನ ಗಳಿಸಿದ್ದಾರೆ.

ಶುಭಾಶಯ ತಿಳಿಸಿದ ಕೊಹ್ಲಿ

ಇನ್ನು ಆರ್‌ಸಿಬಿ ಮಹಿಳಾ ತಂಡದ ಈ ಗೆಲುವಿಗೆ ವಿರಾಟ್‌ ಕೊಹ್ಲಿ ಸಹ ಟ್ವೀಟ್‌ ಮಾಡಿ ಶುಭಾಶಯ ತಿಳಿಸಿದ್ದಾರೆ. ಮತ್ತೆ ಚಾಂಪಿಯನ್‌ಗಳಾಗಿದ್ದಾರೆ. ಆರ್‌ಸಿಬಿ ಧ್ವಜವನ್ನು ಎತ್ತರಕ್ಕೆ ಹಾರಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆ ತಂದಿದೆ” ಎಂದು ಕೊಹ್ಲಿ ಬರೆದುಕೊಂಡಿದ್ದಾರೆ. ಸ್ಮೃತಿ ಮತ್ತು ಇಡೀ ತಂಡಕ್ಕೆ, ಈ ಅದ್ಭುತ ಗೆಲುವಿಗೆ ಅಭಿನಂದನೆಗಳು. ನೀವು ಖಂಡಿತವಾಗಿಯೂ ಇದಕ್ಕೆ ಅರ್ಹರು. ಈ ಕ್ಷಣವನ್ನು ಆನಂದಿಸಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇದೇ ಕಾರಣಕ್ಕೆ ಭಾರತ ಜೊತೆಗೆ ಆಡಲ್ವಂತೆ ಪಾಕ್‌, ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದೇನು?

Leave a Reply

Your email address will not be published. Required fields are marked *