Crime: ವಸಂತ್‌ ನಾಯ್ಕ್‌ ಕೊಲೆ ಪ್ರಕರಣಕ್ಕೆ ಬಿಗ್‌ ಟ್ವಿಸ್‌, ಟಾರ್ಗೆಟ್‌ ಗಂಡ ಅಲ್ವಾ?

Crime big twist in Vasanth naik case uttar kannada

ಉತ್ತರ ಕನ್ನಡ: ಸಿದ್ದಾಪುರದ ವಸಂತ್‌ ನಾಯ್ಕ್‌ ಕೊಲೆ (Crime) ಪ್ರಕರಣದಲ್ಲಿ ಸದ್ಯ ಖ್ಯಾತ ಜ್ಯೋತಿಷಿ ಕಮಲಾಕರ್‌ ಭಟ್‌ ಹಾಗೂ ಸುಚಿತ್ರಾ ಎನ್ನುವ ಮಹಿಳೆ ಬಂಧನ ಮಾಡಲಾಗಿದೆ. ಈ ಪ್ರಕರಣ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದು, ದಿನಕ್ಕೊಂದು ಟ್ವಿಸ್ಟ್‌ ಪಡೆದುಕೊಳ್ಳುತ್ತಿದೆ.

ಟಾರ್ಗೆಟ್‌ ಗಂಡ ಅಲ್ಲ ಮಗಳು

ಸುಚಿತ್ರಾ ಹಾಗೂ ಜ್ಯೋತಿಷಿ ಕಮಲಾಕರ್‌ ಭಟ್‌ ನಡುವೆ ಅನೈತಿಕ ಸಂಬಂಧ ಇರುವುದು ಸದ್ಯ ಎಲ್ಲರ ಮುಂದೆ ಬಯಲಾಗಿದೆ. ಈ ಅಕ್ರಮ ಸಂಬಂಧಕ್ಕೆ ಗಂಡ ಅಡ್ಡಿ ಆಗಿದ್ದ ಎನ್ನುವ ಕಾರಣಕ್ಕೆ ಗಂಡನನ್ನ ಕೊಲೆ ಮಾಡಲು ಸ್ಕೆಚ್‌ ಹಾಕಿದ್ದರು ಎನ್ನಲಾಗಿದೆ. ಆದರೆ ಇದೀಗ ಬಯಲಾಗಿರುವ ಶಾಕಿಂಗ್‌ ಮಾಹಿತಿ ಪ್ರಕಾರ, ಹಂತಕರ ನಿಜವಾದ ಟಾರ್ಗೆಟ್‌ ಇದ್ದಿದ್ದು ಗಂಡನಲ್ಲ ಮಗಳು ಎನ್ನಲಾಗುತ್ತಿದೆ.

ಸತ್ಯ ಬಯಲು ಮಾಡಿದ ಆಡಿಯೋ

ಸದ್ಯ ಆಡಿಯೋ ಒಂದು ವೈರಲ್‌ ಆಗುತ್ತಿದ್ದು ಅದರಲ್ಲಿ ಈ ಕೊಲೆಯ ಹಿಂದಿನ ಅಸಲಿ ಸತ್ಯ ಬಯಲಾಗುತ್ತಿದೆ. ಈ ಆಡಿಯೋದಲ್ಲಿ ಸುಚಿತ್ರಾ, ಕಮಲಾಕರ್‌ ಭಟ್‌ ಅವರಿಗೆ ತನ್ನ ಮಗಳು ಇಲ್ಲದಿದ್ದರೆ ನಾವು ಹೇಗೆ ಬೇಕಾದರೂ ಇರಬಹುದು ಎಂದು ಹೇಳಿದ್ದಾರೆ. ಈ ಆಡಿಯೋ ಕೇಳಿದ ನಂತರ ಕೊಲೆ ಮಾಡಲು ಪ್ಲ್ಯಾನ್‌ ಮಾಡಿದ್ದು, ಗಂಡನನ್ನ ಅಲ್ಲ ಮಗಳನ್ನ ಎನ್ನಲಾಗಿದೆ.

ಹೌದು, ಮಾಹಿತಿಗಳ ಪ್ರಕಾರ ಸುಚಿತ್ರಾ ಮಗಳಿಗೆ ಕಮಲಾಕರ್‌ ಭಟ್‌ ಹಾಗೂ ತನ್ನ ತಾಯಿಯ ನಡುವಿನ ಸಂಬಂಧದ ವಿಚಾರ ತಿಳಿದಿದ್ದು, ಆಕೆಯ ಮೂಲಕವೇ ಸುಚಿತ್ರಾ ಪತಿ ಮಹೇಶ್‌ ನಾಯ್ಕ್‌ಗೆ ಸಹ ಮಾಹಿತಿ ಹೋಗಿತ್ತು. ಈ ಇಬ್ಬರ ನಡುವಿನ ಅನೈತಿಕ ಸಂಬಂಧವನ್ನ ಮಗಳು ಕಣ್ಣಾರೆ ಕಂಡಿದ್ದಳು. ಈ ಕಾರಣದಿಂದಲೇ ಮಗಳನ್ನ ದೂರ ಮಾಡಲು ಪ್ಲ್ಯಾನ್‌ ಮಾಡಲಾಗಿತ್ತು ಎನ್ನಲಾಗಿದೆ.

ಇದನ್ನೂ ಓದಿ: ಅನೈತಿಕ ಸಂಬಂಧ ಕೊಲೆಗೆ ಸ್ಕೆಚ್‌, ಖ್ಯಾತ ಜ್ಯೋತಿಷಿ ಅರೆಸ್ಟ್‌

Leave a Reply

Your email address will not be published. Required fields are marked *