ನವದೆಹಲಿ: ಸಹಕಾರಿ ತತ್ವದಲ್ಲಿ ರೂಪುಗೊಂಡಿರುವ ಕ್ಯಾಬ್ ಸರ್ವಿಸ್ ಕಂಪನಿಯಾದ ಭಾರತ್ ಟ್ಯಾಕ್ಸಿಯ (Bharat Taxi) ಸೇವೆಗೆ ಇಂದು ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಇಂದು ಗೃಹ ಸಚಿವ ಅಮಿತ್ ಶಾ ಭಾರತ್ ಟ್ಯಾಕ್ಸಿ ಸರ್ವಿಸ್ಗೆ ಚಾಲನೆ ನೀಡಿದ್ದಾರೆ.
ಓಲಾ, ಊಬರ್ಗೆ ಸೆಡ್ಡು ಹೊಡೆಯಲು ಸಜ್ಜು
ಅಮುಲ್ ಸೇರಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳಿಂದ ಬೆಂಬಲಿತವಾಗಿರುವ ಈ ಕ್ಯಾಬ್ ಸರ್ವಿಸ್ ಸದ್ಯ ದೆಹಲಿ ಎನ್ಸಿಆರ್ ಪ್ರದೇಶ ಅಧಿಕೃತವಾಗಿ ಶುರುವಾಗಲಿದೆ. ಈ ಮೂಲಕ ಕ್ಯಾಬ್ ಸರ್ವಿಸ್ ಕ್ಷೇತ್ರದಲ್ಲಿ ಓಲಾ, ಊಬರ್ ಪ್ರಾಬಲ್ಯಕ್ಕೆ ಸೆಡ್ಡು ಹೊಡೆಯಲು ಭಾರತ್ ಟ್ಯಾಕ್ಸಿ ರಸ್ತೆಗಿಳಿಯಲಿದೆ .
ಚಾಲಕರೇ ಮಾಲೀಕರು
ಈ ಸಹಕಾರಿ ಸಂಸ್ಥೆಯು ಲಾಭದ ಉದ್ದೇಶ ಹೊಂದಿಲ್ಲ ಎನ್ನುವುದು ಗಮನಾರ್ಹ, ಭಾರತ್ ಟ್ಯಾಕ್ಸಿಯಲ್ಲಿ ಡ್ರೈವರ್ಗಳೇ ಮಾಲೀಕರಾಗಿದ್ದು, ಪ್ಲಾಟ್ಫಾರ್ಮ್ ಶುಲ್ಕ ತೆರಬೇಕಿಲ್ಲ. ಓಲಾ, ಊಬರ್ಗಳು ಚಾಲಕರಿಂದ ಶೇಕಡ 30-40 ರಷ್ಟು ಕಮಿಷನ್ ಪಡೆಯುತ್ತವೆ. ಭಾರತ್ ಟ್ಯಾಕ್ಸಿಯಲ್ಲಿ ಈ ಶುಲ್ಕ ಇರುವುದಿಲ್ಲ. ಹೀಗಾಗಿ ಕ್ಯಾಬ್ ಚಾಲಕರಿಗೆ ಹೆಚ್ಚಿನ ಆದಾಯ ಸಿಗಲಿದೆ. ಗ್ರಾಹಕರಿಗೆ ಟ್ಯಾಕಿಸಿ ದರ ಕಡಿಮೆಯಾಗಿರಲಿದೆ. ಮುಂಬರುವ ದಿನಗಳಲ್ಲಿ ದೇಶಾದ್ಯಂತ ಎಲ್ಲಾ ನಗರಗಳಲ್ಲಿ ಇದರ ಸೇವೆ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ.
ಇದನ್ನೂ ಓದಿ: ಚುನಾವಣಾ ಆಯೋಗದ ಮೇಲೆ ಹರಿಹಾಯ್ದ ಮಮತಾ ಬ್ಯಾನರ್ಜಿ, ಸುಪ್ರೀಂನಲ್ಲಿ ವಾದ ಮಂಡಿಸಿದ ಸಿಎಂ
