Bad Time: ಕುಂಭದಲ್ಲಿ ಸೂರ್ಯ-ರಾಹು ಮೈತ್ರಿ, ಈ ರಾಶಿಗಳ ಕೆಟ್ಟಕಾಲ ಶುರು

bad time from grahan yoga to these zodiac sign

ಫೆಬ್ರವರಿ (February) ತಿಂಗಳಿನಲ್ಲಿಅನೇಕ ಗ್ರಹಗಳ ಸಂಚಾರ ನಡೆಯಲಿದೆ. ಈ ಸಂಚಾರದ ಪರಿಣಾಮ ಒಂದೊಂದು ರಾಶಿಯವರಿಗೂ ವಿಭಿನ್ನವಾಗಿರುತ್ತದೆ. ಸದ್ಯದಲ್ಲಿ ಸೂರ್ಯ ಹಾಗೂ ರಾಹು ಗ್ರಹಗಳ ಅಪರೂಪದ ಸಂಯೋಗ ಆಗಲಿದೆ. ಜ್ಯೋತಿಷ್ಯದಲ್ಲಿ ಈ ಸಂಯೋಗಕ್ಕೆ ಹೆಚ್ಚಿನ ಮಹತ್ವ ಇದೆ. ಫೆಬ್ರವರಿ 13ರಂದು ಸೂರ್ಯ ಕುಂಭ ರಾಶಿಯನ್ನು ಪ್ರವೇಶ ಮಾಡಲಿದ್ದಾನೆ. ಆ ರಾಶಿಯಲ್ಲಿ ಈಗಾಗಲೇ  ರಾಹು ಇದ್ದಾನೆ. ಹಾಗಾಗಿ ಕುಂಭದಲ್ಲಿ ಎರಡು ಗ್ರಹಗಳ ಮೈತ್ರಿ ಆಗುತ್ತದೆ. ಇದರಿಂದ ಗ್ರಹಣ ಯೋಗ ಸೃಷ್ಟಿ ಆಗುತ್ತದೆ, ಈ ಯೋಗದ ಪ್ರಭಾವ ಮಾರ್ಚ್‌ ತಿಂಗಳ ಮಧ್ಯ ಭಾಗದ ವರೆಗೂ ಇರುತ್ತದೆ. ಇದರಿಂದ ಅನೇಕ ರಾಶಿಯವರಿಗೆ ಕಷ್ಟಗಳು ಶುರುವಾಗುತ್ತದೆ. ಆ ರಾಶಿಗಳು (Bad Time) ಯಾವುವು ಎಂಬುದು ಇಲ್ಲಿದೆ.

ಮೇಷ ರಾಶಿ: ಬಹಳ ಎಚ್ಚರಿಕೆಯಿಂದ ಈ ಸಮಯದಲ್ಲಿ ನೀವು ನಿರ್ಧಾರಗಳನ್ನ ತೆಗೆದುಕೊಳ್ಳಬೇಕಾಗಿದ್ದು, ಮಾತನಾಡಬೇಕಾದರೆ ಸಹ ಜಾಗರೂಕತೆ ಇರಲಿ. ಇಲ್ಲದಿದ್ದರೆ ಮಾತಿನ ಮೂಲಕವೇ ನೀವು ಸಮಸ್ಯೆಯನ್ನ ಮೈ ಮೇಲೆ ಎಳೆದುಕೊಳ್ಳುವ ಸಾಧ್ಯತೆ ಇದೆ. ಈ ಯೋಗದ ಕಾರಣದಿಂದ ಮೇಷ ರಾಶಿಯವರಿಗೆ ಬಹಳ ಹಿಂಸೆ ಆಗುತ್ತದೆ. ಕೆಟ್ಟ ಪರಿಣಾಮಗಳನ್ನ ಅನುಭವಿಸಬೇಕಾಗುತ್ತದೆ. ಅಲ್ಲದೇ, ಈ ಸಮಯದಲ್ಲಿ ಆರೋಗ್ಯ ಕೈ ಕೊಡಲಿದ್ದು, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಆಗಬಹುದು.

ಕಟಕ ರಾಶಿ: ಈ ಯೋಗದ ಕಾರಣದಿಂದ ಬಹಳ ಸಮಸ್ಯೆಗಳಾಗುತ್ತದೆ. ಮುಖ್ಯವಾಗಿ ಆದಾಯ ಕಡಿಮೆ ಆಗುತ್ತದೆ ಹಾಗೂ ಖರ್ಚು ಹೆಚ್ಚಾಗುತ್ತದೆ. ನಿಮ್ಮ ಐಷಾರಾಮಿ ಜೀವನಕ್ಕಾಗಿ ಖರ್ಚು ಮಾಡಿ ಸಮಸ್ಯೆ ಮಾಡಿಕೊಳ್ಳಬೇಡಿ. ಹಣದ ಸಮಸ್ಯೆ ಹೆಚ್ಚಾಗುತ್ತದೆ. ಸುಮ್ಮನೇ ಖರ್ಚು ಮಾಡಲು ಹೋಗಬೇಡಿ. ಒಂದು ರೂಪಾಯಿಗೂ ಪರದಾಡುವ ಪರಿಸ್ಥಿತಿ ಎದುರಾಗುತ್ತದೆ. ಅಲ್ಲದೇ, ಈ ಸಮಯದಲ್ಲಿ ವಾಹನ ಚಾಲನೆ ಮಾಡುವಾಗ ಎಚ್ಚರಿಕೆ ಇರಲಿ.

ಕನ್ಯಾ ರಾಶಿ: ಆರ್ಥಿಕ ಪರಿಸ್ಥಿತಿಯಲ್ಲಿ ಏರಿಳಿತಗಳಿರಬಹುದು. ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಶತ್ರುಗಳಿಂದ ಎಚ್ಚರಿಕೆ ಅಗತ್ಯ. ಕೆಲಸದ ಪ್ರದೇಶದಲ್ಲಿ ಜಗಳಗಳು ಮತ್ತು ವಿವಾದಗಳು ಇರಬಹುದು, ಅದು ನಿಮ್ಮ ಯಶಸ್ಸಿಗೆ ಪ್ರಮುಖ ಅಡಚಣೆಯಾಗಬಹುದು. 

ವೃಶ್ಚಿಕ ರಾಶಿ: ಕೆಲಸದ ಕ್ಷೇತ್ರದಲ್ಲಿ ನೀವು ಅನೇಕ ಸಮಸ್ಯೆಗಳನ್ನು ಎದುರಿಸಬಹುದು. ಜನರು ಆರೋಗ್ಯದ ಬಗ್ಗೆ ತಾಳ್ಮೆಯಿಂದಿರಬೇಕು. ಕಣ್ಣಿನ ಸಮಸ್ಯೆಗಳಿರಬಹುದು. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಕೆಲಸದ ಪ್ರದೇಶದಲ್ಲಿ ನಿಮ್ಮ ಕೆಲಸದ ಮೇಲೆ ಕೇಂದ್ರೀಕರಿಸಿ. ವಿವಾದಗಳು ಮತ್ತು ಪಿತೂರಿಗಳಿಂದ ದೂರವಿರಿ. ಸ್ನೇಹಿತರು ಮತ್ತು ಸಂಬಂಧಿಕರಿಂದ ನೀವು ಕೆಲವು ಕೆಟ್ಟ ಸುದ್ದಿಗಳನ್ನು ಸ್ವೀಕರಿಸಬಹುದು

ಇದನ್ನೂ ಓದಿ: ಏಪ್ರಿಲ್‌ 20ರ ತನಕ ಈ ರಾಶಿಯವರದ್ದೇ ಹವಾ, ಗುರು ಕೃಪೆ ಇವರ ಮೇಲೆ

Leave a Reply

Your email address will not be published. Required fields are marked *