TOP NEWS
Indian Mathematician Prof Mahesh Kakde Awarded Prestigious 2026 Ramanujan Prize

Mahesh Kakde: ಗಣಿತ ಕ್ಷೇತ್ರದಲ್ಲಿ ಭಾರತಕ್ಕೆ ಮತ್ತೊಂದು ಹೆಮ್ಮೆ: ಪ್ರೊ. ಮಹೇಶ್ ಕಾಕಡೆಗೆ ಅಂತರರಾಷ್ಟ್ರೀಯ ರಾಮಾನುಜನ್ ಪುರಸ್ಕಾರ

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯ (IISc) ಗಣಿತ ವಿಭಾಗದ ಪ್ರಖ್ಯಾತ ಪ್ರಾಧ್ಯಾಪಕ ಹಾಗೂ ಭಾರತದ ಪ್ರತಿಭಾವಂತ ಗಣಿತಜ್ಞ ಪ್ರೊ. ಮಹೇಶ್ ಕಾಕಡೆ (Mahesh Kakde) ಅವರು 2026ನೇ ಸಾಲಿನ ಪ್ರತಿಷ್ಠಿತ ‘ರಾಮಾನುಜನ್ ಪ್ರಶಸ್ತಿ’ಗೆ ಭಾಜನರಾಗುವ ಮೂಲಕ ದೇಶಕ್ಕೆ ಹಾಗೂ ಕರ್ನಾಟಕಕ್ಕೆ ಮಹತ್ತರ ಹೆಮ್ಮೆ ತಂದಿಟ್ಟಿದ್ದಾರೆ. ಸಂಖ್ಯಾಶಾಸ್ತ್ರ ಹಾಗೂ ಆಲ್ಜೀಬ್ರಿಕ್ ನಂಬರ್ ಥಿಯರಿ (ಬೀಜಗಣಿತೀಯ ಸಂಖ್ಯಾಸಿದ್ಧಾಂತ) ಕ್ಷೇತ್ರದಲ್ಲಿ ಅವರು ನಡೆಸಿರುವ ಅತ್ಯಂತ ಮಹತ್ವದ ಮತ್ತು ಆಳವಾದ ಸಂಶೋಧನಾ ಸಾಧನೆಯನ್ನು ಗುರುತಿಸಿ ಈ ಅಂತರರಾಷ್ಟ್ರೀಯ ಗೌರವವನ್ನು ಪ್ರಕಟಿಸಲಾಗಿದೆ. ಅಂತರರಾಷ್ಟ್ರೀಯ ಸೈದ್ಧಾಂತಿಕ…

Read Full News
HD Kumaraswamy Demands Answers From CM Over Mysterious Five Star Hotel Meeting

HD Kumaraswamy: ನೈಸ್ ಅಕ್ರಮದ ವಿರುದ್ಧ ಹೆಚ್‌ಡಿಕೆ ಆಕ್ರೋಶ: ಕೋರ್ಟ್ ಆದೇಶದಂತೆ ಟೋಲ್ ಕಟ್ಟಬೇಡಿ ಎಂದು ಕೇಂದ್ರ ಸಚಿವ ಕರೆ

ಬೆಂಗಳೂರು: ನೈಸ್ (BMICP) ಯೋಜನೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು, ಕಳೆದ 25 ವರ್ಷಗಳಿಂದ ಭೂಮಿ ಕಳೆದುಕೊಂಡು ಸಂಕಷ್ಟದಲ್ಲಿರುವ ರೈತರ ಪರ ಜೆಡಿಎಸ್ ನಡೆಸುತ್ತಿರುವ ನಿರಂತರ ಹೋರಾಟಕ್ಕೆ ದೊರೆತ ದೊಡ್ದ ಜಯ. ಹೈಕೋರ್ಟ್ ಆದೇಶದ ಬಳಿಕ ನೈಸ್ ರಸ್ತೆಯಲ್ಲಿ ಟೋಲ್ ಫೀಸ್ ಕಟ್ಟಬೇಡಿ ಎಂದು ನಾನು ಜನರಲ್ಲಿ ಮನವಿ ಮಾಡುತ್ತೇನೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ರಾಜ್ಯ ಸರ್ಕಾರ ಹಾಗೂ ನೈಸ್ ಸಂಸ್ಥೆಯ ವಿರುದ್ಧ ತೀವ್ರ ಪ್ರಹಾರ ನಡೆಸಿದ್ದಾರೆ. ಸುದ್ದಿಗೋಷ್ಠಿಯ…

Read Full News
BESCOM Bengaluru Shocked by Twin Transformer Explosions in 24 Hours 5 Critically Hurt

BESCOM: ಬೆಂಗಳೂರಿನಲ್ಲಿ 24 ಗಂಟೆಗಳಲ್ಲಿ ಎರಡು ಟ್ರಾನ್ಸ್‌ಫಾರ್ಮರ್ ಸ್ಪೋಟ, ಐವರಿಗೆ ಭೀಕರ ಗಾಯ!

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೆಸ್ಕಾಂ (BESCOM) ಸಿಬ್ಬಂದಿಯ ಘೋರ ನಿರ್ಲಕ್ಷ್ಯ ಮತ್ತು ಸಮರ್ಪಕ ನಿರ್ವಹಣೆಯ ಕೊರತೆಯಿಂದಾಗಿ ಸಾಲು ಸಾಲು ಟ್ರಾನ್ಸ್‌ಫಾರ್ಮರ್ ಸ್ಫೋಟಗಳು ಸಂಭವಿಸುತ್ತಿದ್ದು, ಸಾರ್ವಜನಿಕರು ತೀವ್ರ ಆತಂಕ ಹಾಗೂ ಭೀತಿಯಲ್ಲಿ ದಿನ ದೂಡುವಂತಾಗಿದೆ. ಸಿಟಿಯಲ್ಲಿ ಕೇವಲ 24 ಗಂಟೆಗಳ ಕಿರಿದಾದ ಅವಧಿಯಲ್ಲಿ ಎರಡು ಪ್ರತ್ಯೇಕ ಕಡೆಗಳಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಭೀಕರವಾಗಿ ಸ್ಫೋಟಗೊಂಡಿದ್ದು, ದುರಂತದಲ್ಲಿ ಐವರು ನಾಗರಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಷ್ಟಕ್ಕೂ ಆಗಿದ್ದೇನು? ಪೂರ್ವ ಬೆಂಗಳೂರಿನ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೆನ್ನಿಗಾನಹಳ್ಳಿ ಎದುರು ಮಂಗಳವಾರ ಮಧ್ಯಾಹ್ನ ಮೊದಲ…

Read Full News
Major Crackdown in Recruitment Scam Ex KPSC Chief Shivashankarappa Sahukar Taken Into Custody

KPSC: ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ ಇಡಿ ವಶಕ್ಕೆ: ಪಶು ವೈದ್ಯಾಧಿಕಾರಿ ನೇಮಕಾತಿ ಹಗರಣದಲ್ಲಿ ಬಿಗ್ ಆಕ್ಷನ್!

ಬೆಂಗಳೂರು: ರಾಜ್ಯ ನಾಗರಿಕ ಸೇವಾ ಆಯೋಗದ (KPSC) ನಾನಾ ಹುದ್ದೆಗಳ ನೇಮಕಾತಿ ಅಕ್ರಮ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಮಹತ್ವದ ಬೆಳವಣಿಗೆಯೊಂದರಲ್ಲಿ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಬಂಧಿಸಿದ್ದಾರೆ. ಸುದೀರ್ಘ ಪರಿಶೀಲನೆ ಹಾಗೂ ವಿಚಾರಣೆಯ ನಂತರ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಡಾಲರ್ಸ್ ಕಾಲೋನಿ ನಿವಾಸದ ಮೇಲೆ ಇಡಿ ದಾಳಿ: ಇದಕ್ಕೂ ಮುನ್ನ, ರಾಜಧಾನಿ ಬೆಂಗಳೂರಿನ ಸಂಜಯನಗರದ ಬಳಿ ಇರುವ ಡಾಲರ್ಸ್ ಕಾಲೋನಿಯ ಶಿವಶಂಕರಪ್ಪ…

Read Full News
Shocking Incident in Kalaburagi Over 10 Students Hospitalized Due to Food Poisoning at Government Hostel

Shocking: ಸರ್ಕಾರಿ ಹಾಸ್ಟೆಲ್‌ನಲ್ಲಿ ವಿಷಾಹಾರ ದುರಂತ: 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೀವ್ರ ಅಸ್ವಸ್ಥ, ಆಸ್ಪತ್ರೆಗೆ ದಾಖಲು!

ಕಲಬುರಗಿ: ಸರ್ಕಾರಿ ಹಾಸ್ಟೆಲ್‌ನಲ್ಲಿ ನೀಡಲಾದ ರಾತ್ರಿಯ ಭೋಜನವನ್ನು ಸೇವಿಸಿದ ನಂತರ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ ಬೆಚ್ಚಿಬೀಳಿಸುವ ಘಟನೆ ಕಲಬುರಗಿ ಜಿಲ್ಲೆಯ ಆಳಂದ (Shocking) ಪಟ್ಟಣದಲ್ಲಿದೆ. ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ವಸತಿ ನಿಲಯದಲ್ಲಿ ಈ ದುರಂತ ಸಂಭವಿಸಿದ್ದು, ವಿದ್ಯಾರ್ಥಿಗಳ ಆರೋಗ್ಯದಲ್ಲಿ ದಿಢೀರ್ ಏರುಪೇರಾದ ಹಿನ್ನೆಲೆಯಲ್ಲಿ ಪೋಷಕರು ಹಾಗೂ ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿದೆ. ವಿಷಾಹಾರ ಸೇವನೆಯಿಂದ ಅಸ್ವಸ್ಥ: ವಸತಿ ನಿಲಯದಲ್ಲಿದ್ದ ವಿದ್ಯಾರ್ಥಿಗಳು ಎಂದಿನಂತೆ ರಾತ್ರಿಯ ವೇಳೆಗೆ ಹಾಸ್ಟೆಲ್ ಸಿಬ್ಬಂದಿ ಸಿದ್ಧಪಡಿಸಿದ್ದ…

Read Full News
Tensions Rise in Strait of Hormuz India Expresses Deep Concern Over Attack on MT On Peace

Strait of Hormuz: ಒಮಾನ್ ಕರಾವಳಿಯಲ್ಲಿ ವಾಣಿಜ್ಯ ಹಡಗಿನ ಮೇಲೆ ಕ್ಷಿಪಣಿ ದಾಳಿ: 12 ಭಾರತೀಯ ಸಿಬ್ಬಂದಿಗೆ ಗಂಭೀರ ಗಾಯ!

ಬೆಂಗಳೂರು: ಒಮಾನ್ ಕರಾವಳಿಯ ಬಳಿ ಹಾರ್ಮುಜ್ ಜಲಸಂಧಿಯಲ್ಲಿ ( Strait of Hormuz ) ಪ್ರಯಾಣಿಸುತ್ತಿದ್ದ ಪನಾಮಾ ಧ್ವಜ ಹೊಂದಿದ ವಾಣಿಜ್ಯ ಸರಕು ನೌಕೆಯ ಮೇಲೆ ಕ್ಷಿಪಣಿ ಅಥವಾ ಯೋಜಿತ ಸ್ಪೋಟಕ ದಾಳಿ ನಡೆದಿದ್ದು, ಘಟನೆಯಲ್ಲಿ 11 ಭಾರತೀಯ ಸಿಬ್ಬಂದಿ ಸೇರಿದಂತೆ ಕನಿಷ್ಠ 12 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಕಳವಳಕಾರಿ ವಿಚಾರವನ್ನು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಮಂಗಳವಾರ ಅಧಿಕೃತವಾಗಿ ದೃಢಪಡಿಸಿದೆ. 19 ಜನ ಸಿಬ್ಬಂದಿ ಇದ್ದ ಹಡಗು ದಾಳಿಗೊಳಗಾದ ‘ಎಂಟಿ ಆನ್ ಪೀಸ್’ (IMO 9893204)…

Read Full News
GBA Bengaluru to Get 5 Independent Police Commissioners to Boost Law and Order

GBA: ರಾಜಧಾನಿಯಲ್ಲಿ ಕಾನೂನು ಸುವ್ಯವಸ್ಥೆಗೆ ಹೊಸ ಸ್ಪರ್ಶ: ಇನ್ಮುಂದೆ ಬೆಂಗಳೂರಿಗೆ ಐವರು ಪೊಲೀಸ್ ಆಯುಕ್ತರು!

ಬೆಂಗಳೂರು: ರಾಜಧಾನಿ ಬೆಂಗಳೂರು ನಗರದ ಸಮಗ್ರ ಆಡಳಿತ ವಿಕೇಂದ್ರೀಕರಣ ಹಾಗೂ ಕಾನೂನು ಸುವ್ಯವಸ್ಥೆಯನ್ನು ಮತ್ತಷ್ಟು ಕಟ್ಟುನಿಟ್ಟುಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅತ್ಯಂತ ಮಹತ್ವದ ಮತ್ತು ಐತಿಹಾಸಿಕ ನಿರ್ಧಾರ ಒಂದನ್ನು ಕೈಗೊಂಡಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ಬರೋಬ್ಬರಿ 5 ಪ್ರತ್ಯೇಕ ನಗರ ಪೊಲೀಸ್ ಕಮಿಷನರೇಟ್‌ಗಳನ್ನು ಸ್ಥಾಪಿಸಲು ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಉಪಸ್ಥಿತಿಯಲ್ಲಿ ಜರುಗಿದ ಸಚಿವ ಸಂಪುಟ ಸಭೆಯಲ್ಲಿ…

Read Full News