Big News: ರಿಂಗ್ ರೋಡ್ ಶುಭಾ ಪ್ರಕರಣ: ದೋಷಿಗಳ ಕ್ಷಮಾದಾನ ಅರ್ಜಿ ಸಚಿವ ಸಂಪುಟದಿಂದ ತಿರಸ್ಕಾರ!
ಬೆಂಗಳೂರು: ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಹಾಗೂ ದಶಕಗಳ ಕಾಲ ಸದ್ದು ಮಾಡಿದ್ದ ‘ರಿಂಗ್ ರೋಡ್ ಶುಭಾ ಕೊಲೆ ಪ್ರಕರಣ’ದ ಅಪರಾಧಿಗಳಿಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ದೊಡ್ಡ (Big News) ಮುಖಭಂಗವಾಗಿದೆ. ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಶುಭಾ ಶಂಕರನಾರಾಯಣ ಮತ್ತು ಆಕೆಯ ಪ್ರಿಯಕರ ಡಿ. ಅರುಣ್ ವರ್ಮಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಗೆ ಒಪ್ಪಿಗೆ ನೀಡಲು ಸಂಪುಟ ಸಭೆಯು ನಿರಾಕರಿಸಿದೆ. ಸನ್ನಡತೆ ಆಧಾರದ ಮೇಲೆ ಶಿಕ್ಷೆಯಿಂದ ವಿನಾಯಿತಿ ಕೋರಿ ರಾಜ್ಯಪಾಲರಿಗೆ ಸಲ್ಲಿಸಲಾಗಿದ್ದ ಅರ್ಜಿಯ ಕುರಿತು ಸಚಿವ…
