TOP NEWS
Shocking minister byrathi Basavaraj give hint about raising bus fair

Shocking: ರಾಜ್ಯದಲ್ಲಿ ಪ್ರಯಾಣಿಕರಿಗೆ ದರ ಏರಿಕೆ ಬಿಸಿ: ಸರ್ಕಾರಿ ಬಸ್ ಟಿಕೆಟ್ ದರ ಹೆಚ್ಚಳದ ಮುನ್ಸೂಚನೆ

ಬೆಂಗಳೂರು: ರಾಜ್ಯದ ಜನಸಾಮಾನ್ಯರಿಗೆ ಸದ್ಯದಲ್ಲೇ ಸಾರಿಗೆ ಪ್ರಯಾಣ ಮತ್ತಷ್ಟು ದುಬಾರಿಯಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಒಂದು ಕಡೆ ಕೆಎಸ್‌ಆರ್‌ಟಿಸಿ ಸೇರಿದಂತೆ ನಾಲ್ಕೂ ಸರ್ಕಾರಿ ಸಾರಿಗೆ ನಿಗಮಗಳ ಬಸ್ ಟಿಕೆಟ್ ದರವನ್ನು ಏರಿಕೆ ಮಾಡುವ ಸ್ಪಷ್ಟ ಮುನ್ಸೂಚನೆಯನ್ನು (Shocking) ಸಾರಿಗೆ ಸಚಿವ ಬೈರತಿ ಸುರೇಶ್ ನೀಡಿದ್ದರೆ, ಮತ್ತೊಂದೆಡೆ ಖಾಸಗಿ ಬಸ್‌ಗಳ ಮಾಲೀಕರ ಒಕ್ಕೂಟವೂ ಸಹ ದರ ಹೆಚ್ಚಳವನ್ನು ಅಧಿಕೃತವಾಗಿ ಪ್ರಕಟಿಸಿದೆ. ಆರ್ಥಿಕ ನಷ್ಟದ ಸುಳಿಯಲ್ಲಿ ಕೆಎಸ್‌ಆರ್‌ಟಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಾರಿಗೆ ಸಚಿವರು, ಇಡೀ ದೇಶದಲ್ಲಿ ಇಂಧನ ದರಗಳು ಗಗನಕ್ಕೇರಿರುವುದರಿಂದ…

Read More
Minister Bhagirath Choudhary takes subsidy for his cucumber crop

Subsidy: ನಾನೊಬ್ಬ ರೈತ, ನಿಯಮಬದ್ಧವಾಗಿಯೇ ಸಬ್ಸಿಡಿ ಪಡೆದಿದ್ದೇನೆ: ವಿವಾದಕ್ಕೆ ಕೇಂದ್ರ ಸಚಿವ ಭಾಗೀರಥ್ ಚೌಧರಿ ಸ್ಪಷ್ಟನೆ!

ನವದೆಹಲಿ: ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ರಾಜ್ಯ ಸಚಿವ ಭಾಗೀರಥ್ ಚೌಧರಿ ಅವರು ತಮ್ಮದೇ ಸಚಿವಾಲಯದ ವ್ಯಾಪ್ತಿಯ ಯೋಜನೆಯೊಂದರ ಅಡಿಯಲ್ಲಿ ಸೌತೆಕಾಯಿ ಬೇಸಾಯಕ್ಕಾಗಿ ಬರೋಬ್ಬರಿ 99 ಲಕ್ಷ 60 ಸಾವಿರ ರೂಪಾಯಿ ಸರ್ಕಾರಿ ಸಬ್ಸಿಡಿ (Subsidy) ಪಡೆದಿರುವುದು ಇದೀಗ ದೇಶಾದ್ಯಂತ ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಈ ವಿಷಯವನ್ನು ಮುನ್ನೆಲೆಗೆ ತಂದಿರುವ ವಿರೋಧ ಪಕ್ಷಗಳು, ಸಚಿವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಇಷ್ಟು ದೊಡ್ಡ ಮೊತ್ತದ ಸಬ್ಸಿಡಿ ಲಪಟಾಯಿಸಿದ್ದಾರೆ ಎಂದು ಗಂಭೀರ ಆರೋಪ ಮಾಡುತ್ತಿವೆ….

Read More
cm dk shivakumarwarning to excise department officers

DK Shivakumar: ಸರ್ಕಾರಕ್ಕೆ ಕೆಟ್ಟ ಹೆಸರು ತಂದರೆ ವರ್ಗಾವಣೆ ಕಡ್ಡಾಯ: ಅಬಕಾರಿ ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ವಾರ್ನಿಂಗ್!

ಬೆಂಗಳೂರು: “ಅಬಕಾರಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ವೃತ್ತಿಪರತೆಯನ್ನು ಪ್ರದರ್ಶಿಸುವ ಮೂಲಕ ಇಲಾಖೆ ಹಾಗೂ ಸರ್ಕಾರದ ಘನತೆಯನ್ನು ಎತ್ತಿಹಿಡಿಯಬೇಕು. ಒಂದು ವೇಳೆ ಸರ್ಕಾರದ ಗೌರವಕ್ಕೆ ಧಕ್ಕೆ ತರುವಂತಹ ಕೆಲಸ ಮಾಡಿದರೆ ಅದನ್ನು ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಅಧಿಕಾರಿಗಳಿಗೆ ಅತ್ಯಂತ ಕಠಿಣ ಸಂದೇಶ ರವಾನಿಸಿದ್ದಾರೆ. ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಶುಕ್ರವಾರ ನಡೆದ ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇಲಾಖೆಯ…

Read More
94 years old want Indian Citizenship now

Citizenship: “ನಾನು ಭಾರತೀಯಳಾಗಿಯೇ ಸಾಯಬೇಕು”: ತಾಯ್ನಾಡಿನ ಮಮಕಾರಕ್ಕೆ ಒಲಿದು ಅಮೆರಿಕ ಪೌರತ್ವ ತೊರೆದ 94 ವರ್ಷದ ವೃದ್ಧೆ!

ಬಾಪಟ್ಲಾ (ಆಂಧ್ರಪ್ರದೇಶ): ಇಂದಿನ ದಿನಗಳಲ್ಲಿ ಉದ್ಯೋಗ ಅಥವಾ ಉನ್ನತ ಜೀವನ ಮಟ್ಟಕ್ಕಾಗಿ ಅಮೆರಿಕ, ಕೆನಡಾದಂತಹ ವಿದೇಶಗಳಿಗೆ ವಲಸೆ ಹೋಗುವುದು ಮತ್ತು ಅಲ್ಲಿನ ಪೌರತ್ವ (Citizenship) ಪಡೆಯುವುದು ದೊಡ್ಡ ಸಾಧನೆ ಎಂದು ಅನೇಕರು ಭಾವಿಸುತ್ತಾರೆ. ಆದರೆ, ಶತಾಯುಷಿಯ ಹತ್ತಿರವಿರುವ ವೃದ್ಧೆಯೊಬ್ಬರು ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ತಾಯ್ನಾಡಿನ ಗುರುತಿಗಿಂತ ದೊಡ್ಡದು ಯಾವುದೂ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. “ನನ್ನ ಕೊನೆಯ ದಿನಗಳನ್ನು ನಾನು ಭಾರತೀಯಳಾಗಿಯೇ ಕಳೆಯಬೇಕು ಮತ್ತು ಹೆತ್ತ ಕರುಳಿನ ಮಣ್ಣಿನಲ್ಲೇ ನನ್ನ ಅಂತ್ಯಕ್ರಿಯೆ ನಡೆಯಬೇಕು” ಎಂದು ಆಶಿಸಿರುವ ೯೪ ವರ್ಷದ…

Read More
Did samanth ruth prabhu take a dig aat shobhita

Samantha: ಸಮಂತಾ ಸಂಬಂಧಗಳ ಕುರಿತ ಹೇಳಿಕೆ ವೈರಲ್: ಶೋಭಿತಾ ಧುಳಿಪಾಲ ಟಾಂಗ್ ನೀಡಿದರಾ?

ಹೈದರಾಬಾದ್: ಬಹುಭಾಷಾ ನಟಿ ಸಮಂತಾ ರುತ್ ಪ್ರಭು (Samantha) ಅವರು ಇತ್ತೀಚೆಗೆ ಸಂಬಂಧಗಳ ಕುರಿತು ನೀಡಿರುವ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸಮಂತಾ ಅವರು ತಮ್ಮ ಮಾಜಿ ಪತಿ ನಾಗಚೈತನ್ಯ ಅವರ ಪ್ರಸ್ತುತ ಪತ್ನಿ ಶೋಭಿತಾ ಧುಳಿಪಾಲ ಅವರನ್ನು ಪರೋಕ್ಷವಾಗಿ ಗುರಿಯಾಗಿಸಿಕೊಂಡು ಈ ಮಾತುಗಳನ್ನಾಡಿದ್ದಾರೆ ಎಂದು ನೆಟ್ಟಿಗರು ವ್ಯಾಪಕವಾಗಿ ಅಂದಾಜಿಸುತ್ತಿದ್ದಾರೆ. ಬುಧವಾರ ಹೈದರಾಬಾದ್‌ನಲ್ಲಿ ನಡೆದ ತಮ್ಮ ಇತ್ತೀಚಿನ ಯಶಸ್ವಿ ಚಿತ್ರ ‘ಮಾ ಇಂಟಿ ಬಂಗಾರಂ’ ಯಶಸ್ಸಿನ ಸಂಭ್ರಮಾಚರಣೆ ಸಭೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಮಂತಾ, ವೃತ್ತಿಜೀವನ,…

Read More
BMRCL 3 new six coach trainsets soon

BMRCL: ನಮ್ಮ ಮೆಟ್ರೋ ಸಂಚಾರ ಕ್ರಾಂತಿ: ನಾಲ್ಕು ಪ್ರಮುಖ ಮಾರ್ಗಗಳಿಗೆ ಬರಲಿವೆ ಹೊಸ ರೈಲುಗಳು

ಬೆಂಗಳೂರು: ರಾಜಧಾನಿಯ ಟ್ರಾಫಿಕ್ ಕಿರಿಕಿರಿಗೆ ಮುಕ್ತಿ ನೀಡುವ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಭರ್ಜರಿ ಸುದ್ದಿ ನೀಡಿದೆ. ಮುಂಬರುವ ದಿನಗಳಲ್ಲಿ ಸಾರ್ವಜನಿಕರ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸಲು ಸಾಲು ಸಾಲು ಅತ್ಯಾಧುನಿಕ ಆರು ಬೋಗಿಗಳ ರೈಲುಗಳನ್ನು ಹಳಿಗಳ ಮೇಲೆ ಇಳಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ವಿಶೇಷವಾಗಿ ಹಸಿರು ಮಾರ್ಗದಲ್ಲಿ (Green Line) ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ, ಮುಂಬರುವ ಆಗಸ್ಟ್ ಒಳಗೆ ಮೂರು ಹೊಸ ರೈಲುಗಳನ್ನು ಕಾರ್ಯಾಚರಣೆಗೆ ಮುಕ್ತಗೊಳಿಸಲಾಗುತ್ತಿದೆ. ಅಷ್ಟೇ ಅಲ್ಲದೆ, ಡಿಸೆಂಬರ್…

Read More
CJP protest day 7 wishes Dharmendra Pradhan on birthday and asks gifts

CJP: ಶಿಕ್ಷಣ ಸಚಿವ ಪ್ರಧಾನ್‌ಗೆ ಸಹಿ ಹಾಕಿ ಕೊಡಿ, ನಾವೇ ರಾಜೀನಾಮೆ ಪತ್ರ ಕಳುಹಿಸುತ್ತೇವೆ: ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ

ನವದೆಹಲಿ: ದೇಶಾದ್ಯಂತ ಭಾರಿ ವಿವಾದ ಸೃಷ್ಟಿಸಿರುವ ‘ನೀಟ್’ (NEET) ಪರೀಕ್ಷಾ ಅಕ್ರಮ ಮತ್ತು ಪೇಪರ್ ಲೀಕ್ ಹಗರಣವನ್ನು ಖಂಡಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಶುಕ್ರವಾರ7 ನೇ ದಿನಕ್ಕೆ ಕಾಲಿಟ್ಟಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದಿಪ್ಕೆ, ಶುಕ್ರವಾರ ಸಚಿವರ ಜನ್ಮದಿನದಂದೇ ಅವರಿಗೆ ವಿನೂತನವಾಗಿ ಟಾಂಗ್ ನೀಡಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿದ್ದ ವೈಟ್‌ಬೋರ್ಡ್ ಮೇಲೆ “ಹ್ಯಾಪಿ ಬರ್ತ್‌ಡೇ ಪ್ರಧಾನ್,…

Read More