TOP NEWS
Delhi government announces mandatory work from home for its employs

Delhi: ಇಂಧನ ಮಿತವ್ಯಯಕ್ಕೆ ಮುಂದಾದ ದೆಹಲಿ ಸರ್ಕಾರ, ಸರ್ಕಾರಿ ನೌಕರರಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಆದೇಶ

ನವದೆಹಲಿ: ತೈಲ ಉಳಿತಾಯ ಮತ್ತು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ದೆಹಲಿ (Delhi) ಸರ್ಕಾರವು ತನ್ನ ಸಿಬ್ಬಂದಿಗೆ ವಾರದಲ್ಲಿ ಎರಡು ದಿನ ‘ಮನೆಯಿಂದಲೇ ಕೆಲಸ’ (Work From Home) ಮಾಡುವುದನ್ನು ಕಡ್ಡಾಯಗೊಳಿಸಿ ಆದೇಶಿಸಿದೆ. ಸಕಾರಿ ನೌಕರರಿಗೆ ಹೊಸ ನಿಯಮ ಹೆಚ್ಚುತ್ತಿರುವ ಇಂಧನ ಬಳಕೆಯನ್ನು ತಗ್ಗಿಸಲು ಮುಂದಾಗಿರುವ ದೆಹಲಿ ಸರ್ಕಾರ, ತನ್ನ ಎಲ್ಲಾ ಇಲಾಖೆಗಳ ಉದ್ಯೋಗಿಗಳು ವಾರಕ್ಕೆ ಎರಡು ದಿನ ಆಫೀಸ್‌ಗೆ ಬರುವ ಬದಲು ಮನೆಯಿಂದಲೇ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದೆ. ಈ ಕ್ರಮದಿಂದ ರಸ್ತೆಗಿಳಿಯುವ ವಾಹನಗಳ ಸಂಖ್ಯೆ ಕಡಿಮೆಯಾಗಲಿದ್ದು, ಇಂಧನ…

Read More
BJP ex minister jc Madhu swamy important statement

BJP: ಚುನಾವಣಾ ರಾಜಕೀಯಕ್ಕೆ ಜೆ.ಸಿ. ಮಾಧುಸ್ವಾಮಿ ರೀ-ಎಂಟ್ರಿ; ಚಿಕ್ಕನಾಯಕನಹಳ್ಳಿಯಿಂದಲೇ ಸ್ಪರ್ಧೆ ಖಚಿತ

ತುಮಕೂರು: ತುಮಕೂರು ಜಿಲ್ಲೆಯ ರಾಜಕೀಯದ ದೃಢ ನಿರ್ಧಾರಗಳಿಗೆ ಹೆಸರಾದ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ (BJP) ಅವರು ತಮ್ಮ ಮುಂದಿನ ನಡೆಯ ಬಗ್ಗೆ ಎದ್ದಿದ್ದ ಎಲ್ಲಾ ಊಹಾಪೋಹಗಳಿಗೆ ಬ್ರೇಕ್ ಹಾಕಿದ್ದಾರೆ. ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ಬೆನ್ನಲ್ಲೇ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಖಾಡಕ್ಕಿಳಿಯುವುದು ನಿಶ್ಚಿತ ಎಂದು ಅವರು ಗುಡುಗಿದ್ದಾರೆ. “ನಾನು ಸ್ಪರ್ಧಿಸುವುದು ಗ್ಯಾರಂಟಿ, ಇದರಲ್ಲಿ ಯಾರಿಗೂ ಅನುಮಾನ ಬೇಡ” ಎಂದು ಹೇಳುವ ಮೂಲಕ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಯಾವ ಪಕ್ಷದ ಹಂಗು ಬೇಕಿಲ್ಲ…

Read More
Ramayana makers big decision regarding Sai Pallavi

Sai Pallavi: ಬಾಲಿವುಡ್‌ನಲ್ಲಿ ಸಾಯಿ ಪಲ್ಲವಿಗೆ ಹಿನ್ನಡೆ, ಮಹತ್ವದ ನಿರ್ಧಾರ ಮಾಡಿದ ರಾಮಾಯಣ ತಂಡ

ಮುಂಬೈ: 2026ರ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ‘ರಾಮಾಯಣ’ದ ಬಗ್ಗೆ ಈಗ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಈ ಚಿತ್ರದಲ್ಲಿ ಸೀತಾ ಮಾತೆಯ ಪಾತ್ರವನ್ನು ನಿರ್ವಹಿಸುತ್ತಿರುವ ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ (Sai Pallavi) ಅವರ ಧ್ವನಿಯನ್ನು ಬದಲಾಯಿಸಲು ಚಿತ್ರತಂಡ ನಿರ್ಧರಿಸಿದೆ ಎಂದು ವರದಿಯಾಗಿದೆ. ಸಾಯಿ ಪಲ್ಲವಿ ಸೀತೆಯ ಪಾತ್ರಕ್ಕೆ ಜೀವ ತುಂಬುತ್ತಿದ್ದರೂ, ಅವರ ಹಿಂದಿ ಭಾಷೆಯ ಉಚ್ಚಾರಣೆ ಮತ್ತು ಸಂಭಾಷಣೆಗಳನ್ನು ಮತ್ತಷ್ಟು ಸ್ಪಷ್ಟವಾಗಿ ಮತ್ತು ಪರಿಣಾಮಕಾರಿಯಾಗಿ ಕೇಳುವಂತೆ ಮಾಡಲು ಬೇರೆ ಧ್ವನಿಯನ್ನು ಬಳಸಲು ನಿರ್ಮಾಪಕರು…

Read More
election commission to conduct SIR Phase III

SIR: ದೇಶದ 16 ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಆರಂಭ: ಕರ್ನಾಟಕದ 5.5 ಕೋಟಿ ಮತದಾರರ ವಿವರ ಮರುಪರಿಶೀಲನೆ

ನವದೆಹಲಿ: ಭಾರತೀಯ ಚುನಾವಣಾ ಆಯೋಗವು ದೇಶದ ಮತದಾರರ ಪಟ್ಟಿಯನ್ನು ಅಚ್ಚುಕಟ್ಟಾಗಿ ಸಿದ್ಧಪಡಿಸಲು ಮುಂದಾಗಿದ್ದು, 16 ರಾಜ್ಯಗಳು ಹಾಗೂ 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ‘ಮೂರನೇ ಹಂತದ ವಿಶೇಷ ತೀವ್ರ ಪರಿಷ್ಕರಣೆ’ (SIR Phase-III) ಅಭಿಯಾನವನ್ನು ಆರಂಭಿಸಿದೆ. ಈ ಮೂಲಕ ಸುಮಾರು 36.73 ಕೋಟಿ ಮತದಾರರ ವಿವರಗಳನ್ನು ಮರುಪರಿಶೀಲಿಸುವ ಬೃಹತ್ ಗುರಿಯನ್ನು ಆಯೋಗ ಹಾಕಿಕೊಂಡಿದೆ. ಮನೆ ಮನೆಗೆ ಬರಲಿದ್ದಾರೆ ಅಧಿಕಾರಿಗಳು: ಮತದಾರರ ಪಟ್ಟಿಯಲ್ಲಿರುವ ದೋಷಗಳನ್ನು ಸರಿಪಡಿಸಲು ಸುಮಾರು 3.94 ಲಕ್ಷ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಪ್ರತಿ ಮನೆಗೆ ಭೇಟಿ…

Read More
CM Siddaramaiah clarification regarding hijab and saffron turban

CM Siddaramaiah: ಹೊಸ ರೂಪದ ಕೇಸರಿ ಪೇಟಾ ಧರಿಸುವಂತಿಲ್ಲ; ಮೈಸೂರಿನಲ್ಲಿ ಅಭಿವೃದ್ಧಿ ಕೆಲಸಗಳ ಪರಿಶೀಲನೆ ವೇಳೆ ಮುಖ್ಯಮಂತ್ರಿಗಳ ಮಹತ್ವದ ಹೇಳಿಕೆ

ಮೈಸೂರು: ರಾಜ್ಯದ ಶೈಕ್ಷಣಿಕ ಸಂಸ್ಥೆಗಳಲ್ಲಿ ಕೇಸರಿ ಪೇಟಾ ಮತ್ತು ಹಿಜಬ್ ಧರಿಸುವ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಇಂದು ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ಶಾಲೆಗಳಿಗೆ ಕೇಸರಿ ಶಾಲು ಅಥವಾ ಹೊಸ ಮಾದರಿಯ ಕೇಸರಿ ಪೇಟಾ ಧರಿಸಿ ಬರುವುದಕ್ಕೆ ಸಮ್ಮತಿ ಇಲ್ಲ ಎಂದು ಅವರು ತಿಳಿಸಿದ್ದಾರೆ. ಸಾಂಪ್ರದಾಯಿಕ ಪೇಟಕ್ಕೆ ಸಮ್ಮತಿ, ಹೊಸ ರೂಪಕ್ಕೆ ತಡೆ ಮೈಸೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಮೊದಲಿನಿಂದಲೂ ಧರಿಸುತ್ತಿದ್ದ ಸಾಂಪ್ರದಾಯಿಕ ಪೇಟಗಳನ್ನು ಧರಿಸಲು ಯಾವುದೇ ಅಡ್ಡಿಯಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಬಣ್ಣ ಬದಲಾಯಿಸಿ…

Read More
Maharashtra cm Devendra Fadnavis rides bike for fuel conservation

Devendra Fadnavis: ಬೈಕ್ ಏರಿ ಬಂದು ಬಜೆಟ್ ಉಳಿಸಿದ ಸಿಎಂ; ಮಹಾರಾಷ್ಟ್ರದಲ್ಲಿ ಜಾರಿಗೆ ಬಂತು ಹೈಟೆಕ್ ಮಿತವ್ಯಯ ಮಾರ್ಗಸೂಚಿ!

ಮುಂಬೈ: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಯುದ್ಧದ ಭೀತಿ ಹಾಗೂ ತೈಲ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಇಂಧನ ಉಳಿತಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (Devendra Fadnavis) ಅತ್ಯಂತ ಸಕ್ರಿಯವಾಗಿ ಸ್ಪಂದಿಸಿದ್ದಾರೆ. ಗುರುವಾರ ಮುಂಬೈನ ತಮ್ಮ ಅಧಿಕೃತ ನಿವಾಸ ‘ವರ್ಷಾ’ದಿಂದ ವಿಧಾನ ಭವನಕ್ಕೆ ಸ್ವತಃ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಚಲಾಯಿಸಿಕೊಂಡು ಬರುವ ಮೂಲಕ ಅವರು ಮಿತವ್ಯಯದ ಸಂದೇಶ ಸಾರಿದ್ದಾರೆ.‌ ಬೆಂಗಾವಲು ಪಡೆ ಕಡಿತ ಮುಖ್ಯಮಂತ್ರಿಗಳ ಜೊತೆಗೆ ಸಚಿವ ಆಶಿಶ್ ಶೆಲಾರ್ ಅವರು…

Read More
cm vijay announces Kalaignar Urimai Thogai scheme amount wll get soon

CM Vijay: “ನಮ್ಮದು ಕುದುರೆ ವ್ಯಾಪಾರದ ಸರ್ಕಾರವಲ್ಲ, ಕುದುರೆ ವೇಗದ ಆಡಳಿತ”: ಟೀಕಾಕಾರರಿಗೆ ಸಿಎಂ ವಿಜಯ್ ತಿರುಗೇಟು!

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ರಾಜ್ಯದ ಮಹಿಳೆಯರಿಗೆ ಮಹತ್ವದ ಸುದ್ದಿಯೊಂದನ್ನು ನೀಡಿದ್ದಾರೆ. ‘ಕಲೈಂಜರ್ ಮಹಿಳಾ ಹಕ್ಕು’ ಯೋಜನೆಯ ಅಡಿಯಲ್ಲಿ ಮೇ ತಿಂಗಳ ಕಂತಿನ 1,000 ರೂಪಾಯಿ ಹಣವನ್ನು ಶೀಘ್ರದಲ್ಲೇ ಫಲಾನುಭವಿಗಳ ಬ್ಯಾಂಕ್ (CM Vijay) ಖಾತೆಗೆ ಜಮೆ ಮಾಡಲಾಗುವುದು ಎಂದು ಅವರು ಗುರುವಾರ ಘೋಷಿಸಿದ್ದಾರೆ. ಈ ಯೋಜನೆಯನ್ನು ಹಿಂದಿನ ಡಿಎಂಕೆ ಸರ್ಕಾರ ಜಾರಿಗೆ ತಂದಿತ್ತಾದರೂ, ಅರ್ಹ ಮಹಿಳೆಯರಿಗೆ ಆರ್ಥಿಕ ನೆರವು ಮುಂದುವರಿಯಲಿದೆ ಎಂದು ಸರ್ಕಾರಿ ಪ್ರಕಟಣೆ ತಿಳಿಸಿದೆ. 2,500 ರೂಪಾಯಿ ಸಹಾಯಧನದ ಭರವಸೆ…

Read More