TOP NEWS

CM Vijay: “ನಮ್ಮದು ಕುದುರೆ ವ್ಯಾಪಾರದ ಸರ್ಕಾರವಲ್ಲ, ಕುದುರೆ ವೇಗದ ಆಡಳಿತ”: ಟೀಕಾಕಾರರಿಗೆ ಸಿಎಂ ವಿಜಯ್ ತಿರುಗೇಟು!

cm vijay announces Kalaignar Urimai Thogai scheme amount wll get soon

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ರಾಜ್ಯದ ಮಹಿಳೆಯರಿಗೆ ಮಹತ್ವದ ಸುದ್ದಿಯೊಂದನ್ನು ನೀಡಿದ್ದಾರೆ. ‘ಕಲೈಂಜರ್ ಮಹಿಳಾ ಹಕ್ಕು’ ಯೋಜನೆಯ ಅಡಿಯಲ್ಲಿ ಮೇ ತಿಂಗಳ ಕಂತಿನ 1,000 ರೂಪಾಯಿ ಹಣವನ್ನು ಶೀಘ್ರದಲ್ಲೇ ಫಲಾನುಭವಿಗಳ ಬ್ಯಾಂಕ್ (CM Vijay) ಖಾತೆಗೆ ಜಮೆ ಮಾಡಲಾಗುವುದು ಎಂದು ಅವರು ಗುರುವಾರ ಘೋಷಿಸಿದ್ದಾರೆ. ಈ ಯೋಜನೆಯನ್ನು ಹಿಂದಿನ ಡಿಎಂಕೆ ಸರ್ಕಾರ ಜಾರಿಗೆ ತಂದಿತ್ತಾದರೂ, ಅರ್ಹ ಮಹಿಳೆಯರಿಗೆ ಆರ್ಥಿಕ ನೆರವು ಮುಂದುವರಿಯಲಿದೆ ಎಂದು ಸರ್ಕಾರಿ ಪ್ರಕಟಣೆ ತಿಳಿಸಿದೆ.

2,500 ರೂಪಾಯಿ ಸಹಾಯಧನದ ಭರವಸೆ

ಚುನಾವಣೆಗೂ ಮುನ್ನ ವಿಜಯ್ ನೇತೃತ್ವದ ಟಿವಿ ಕೆ (TVK) ಪಕ್ಷವು 60 ವರ್ಷದೊಳಗಿನ ಮಹಿಳೆಯರಿಗೆ ಮಾಸಿಕ 2,500 ರೂಪಾಯಿ ಸಹಾಯಧನ ನೀಡುವ ಭರವಸೆ ನೀಡಿತ್ತು. ಈಗಿರುವ 1,000 ರೂಪಾಯಿ ಯೋಜನೆಯನ್ನು ಹೊಸ ಭರವಸೆಯಂತೆ ಪುನರ್ರಚಿಸಲು ಸರ್ಕಾರಕ್ಕೆ ಸ್ವಲ್ಪ ಸಮಯದ ಅಗತ್ಯವಿದೆ. ಅಲ್ಲಿಯವರೆಗೆ ಮಹಿಳೆಯರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಮೇ ತಿಂಗಳ ಕಂತನ್ನು ಹಳೆಯ ಮಾದರಿಯಲ್ಲೇ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇನ್ನು ರಾಜಕೀಯವಾಗಿ ಭಾರಿ ಕುತೂಹಲ ಮೂಡಿಸಿದ್ದ ವಿಧಾನಸಭೆಯ ವಿಶ್ವಾಸಮತ ಯಾಚನೆಯಲ್ಲಿ ಸಿಎಂ ವಿಜಯ್ ಭರ್ಜರಿ ಜಯ ದಾಖಲಿಸಿದ್ದಾರೆ. ಬುಧವಾರ ನಡೆದ ಮತದಾನದಲ್ಲಿ ವಿಜಯ್ ಪರವಾಗಿ 144 ಮತಗಳು ಬಿದ್ದಿದ್ದು, ಕೇವಲ 22 ಮತಗಳು ಮಾತ್ರ ವಿರುದ್ಧವಾಗಿ ಬಂದಿವೆ. ಈ ಮೂಲಕ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿರುವ ಅವರು, ಪ್ರತಿಪಕ್ಷಗಳ ‘ಕುದುರೆ ವ್ಯಾಪಾರ’ದ ಆರೋಪಕ್ಕೆ ಮಾರ್ಮಿಕವಾಗಿ ಉತ್ತರಿಸಿದ್ದಾರೆ. “ನಮ್ಮ ಸರ್ಕಾರ ನಡೆಯುತ್ತಿರುವುದು ಕುದುರೆ ವ್ಯಾಪಾರದಿಂದಲ್ಲ, ಕುದುರೆಯ ವೇಗದಲ್ಲಿ” ಎಂದು ಹೇಳುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

ವಿಶ್ವಾಸಮತ ಯಾಚನೆಯ ಚರ್ಚೆಯ ವೇಳೆ ಮಾತನಾಡಿದ ಮುಖ್ಯಮಂತ್ರಿಗಳು, ತಮ್ಮ ಸರ್ಕಾರವು ಜಾತ್ಯತೀತ ಮೌಲ್ಯಗಳಿಗೆ ಬದ್ಧವಾಗಿರುತ್ತದೆ ಎಂದು ಸ್ಪಷ್ಟಪಡಿಸಿದರು. “ಎಲ್ಲಾ ಧರ್ಮಗಳು ನಮ್ಮದೇ, ಎಲ್ಲ ಜನರೂ ನಮ್ಮವರೇ. ನಮಗೆ ಮತ ನೀಡಿದವರು ಮತ್ತು ನೀಡದವರ ನಡುವೆ ನಾವು ಯಾವುದೇ ತಾರತಮ್ಯ ಮಾಡುವುದಿಲ್ಲ. ಇದು ಸಾಮಾನ್ಯ ಜನರ ಸರ್ಕಾರ” ಎಂದು ಭರವಸೆ ನೀಡಿದ್ದಾರೆ. ಅಲ್ಲದೆ, ಹಿಂದಿನ ಸರ್ಕಾರಗಳು ಜಾರಿಗೆ ತಂದಿದ್ದ ಜನೋಪಕಾರಿ ಯೋಜನೆಗಳನ್ನು ತಮ್ಮ ಸರ್ಕಾರ ಮುಂದುವರಿಸಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಕೇರಳ ಸಿಎಂ ಪಟ್ಟ ವಿ.ಡಿ. ಸತೀಶನ್ ಪಾಲು: ರೇಸ್‌ನಿಂದ ಹಿಂದೆ ಸರಿದ ವೇಣುಗೋಪಾಲ್‌ಗೆ ಎಐಸಿಸಿ ಅಧ್ಯಕ್ಷ ಸ್ಥಾನದ ಆಫರ್?

Leave a Reply

Your email address will not be published. Required fields are marked *