West Bengal: ಬಂಗಾಳದಲ್ಲಿ ಮುಗಿಯಿತೇ ಮಮತಾ ಯುಗ? ಟಿಎಂಸಿ ಕೋಟೆ ಕುಸಿಯಲು ಕಾರಣವಾದ 5 ಪ್ರಮುಖ ವಿದ್ಯಮಾನಗಳು
ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ರಾಜಕೀಯ ಅಖಾಡದಲ್ಲಿ ಕಳೆದ 15 ವರ್ಷಗಳಿಂದ ಮಮತಾ ಬ್ಯಾನರ್ಜಿ ಅವರಿದ್ದ ಏಕಚಕ್ರಾಧಿಪತ್ಯಕ್ಕೆ ಈ ಬಾರಿ ಭಾರಿ ಪೆಟ್ಟು ಬಿದ್ದಿದೆ. ದಶಕಗಳ ಕಾಲ ಅಜೇಯವಾಗಿ ಉಳಿದಿದ್ದ ಟಿಎಂಸಿ ಭದ್ರಕೋಟೆ ಈಗ ನಡುಗುತ್ತಿದ್ದು, ಕೇಸರಿ ಪಡೆ ಅಧಿಕಾರದ ಹೊಸ್ತಿಲಿಗೆ ಬಂದು ನಿಂತಿದೆ. ದೀದಿ ಸರ್ಕಾರದ ಪತನಕ್ಕೆ ಪ್ರಮುಖವಾಗಿ ಕೆಲಸ ಮಾಡಿದ ಅಂಶಗಳ ವಿಶ್ಲೇಷಣೆ ಇಲ್ಲಿದೆ: 1. ಮಹಿಳಾ ಸುರಕ್ಷತೆ ಮತ್ತು ಆರ್‌ಜಿ ಕರ್ ಪ್ರಕರಣದ ಬಿಸಿ ಮಮತಾ ಬ್ಯಾನರ್ಜಿ ಅವರ ಅತಿದೊಡ್ಡ ವೋಟ್…
