Bollywood: ‘ಮಹಾಕಾವ್ಯ ಶ್ರೀ ರಾಮಾಯಣ ಕಥಾ’ ಪೋಸ್ಟರ್ ಎಡವಟ್ಟು: ವಾನರನಿಗೆ ಕನ್ನಡಕ ಹಾಕಿ ನೆಟ್ಟಿಗರಿಂದ ಭಾರಿ ಟ್ರೋಲ್!
ಮುಂಬೈ: ಭಾರತೀಯ ಚಿತ್ರರಂಗದಲ್ಲಿ ರಾಮಾಯಣ ಮತ್ತು ಮಹಾಭಾರತದ ಆಧಾರಿತ ಸಿನಿಮಾಗಳಿಗೆ ಯಾವತ್ತೂ ಕೊರತೆಯಿಲ್ಲ. ನಿತೀಶ್ ತಿವಾರಿ ನಿರ್ದೇಶನದಲ್ಲಿ ರಣಬೀರ್ ಕಪೂರ್ ಅಭಿನಯದ ‘ರಾಮಾಯಣ’ ಬಿಗ್ ಬಜೆಟ್ ಸಿನಿಮಾ ತೆರೆಗೆ ಬರಲು ಸಜ್ಜಾಗುತ್ತಿದ್ದರೆ, ಇನ್ನೊಂದೆಡೆ ಸಣ್ಣ ಬಜೆಟ್‌ನ ‘ಮಹಾಕಾವ್ಯ ಶ್ರೀ ರಾಮಾಯಣ ಕಥಾ’ ಎಂಬ ಹೊಸ ಚಿತ್ರ ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿದೆ. ಆದರೆ, ಈ ಸಿನಿಮಾ ತನ್ನ ಕಥೆ ಅಥವಾ ನಿರೂಪಣೆಯಿಂದ ಸುದ್ದಿಯಾಗುವ ಬದಲು, ಕಳಪೆ ಮಟ್ಟದ ವಿಎಫ್‌ಎಕ್ಸ್ (VFX) ಹಾಗೂ ಪೋಸ್ಟರ್‌ನಲ್ಲಿ ಎಸಗಿರುವ ಹಾಸ್ಯಾಸ್ಪದ ತಪ್ಪುಗಳಿಂದಾಗಿ ಸಾಮಾಜಿಕ…
