Tollywood: 28 ವರ್ಷಗಳ ಬಳಿಕ ನಾಗಾರ್ಜುನ್-ಟಬು ಕಂಬ್ಯಾಕ್
ಹೈದರಾಬಾದ್: ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಜನಪ್ರಿಯ ತೆರೆಯ ಮೇಲಿನ ಜೋಡಿಗಳಲ್ಲೊಂದಾದ ನಾಗಾರ್ಜುನ್ ಮತ್ತು ಟಬು ಜೋಡಿ ದಶಕಗಳ (Tollywood) ಬಳಿಕ ಮತ್ತೆ ಒಂದಾಗುತ್ತಿದೆ. ಟಾಲಿವುಡ್ ಮನ್ಮಥ ನಾಗಾರ್ಜುನ್ ಅವರ ವೃತ್ತಿಜೀವನದ ಮೈಲಿಗಲ್ಲಿನ 100ನೇ ಚಿತ್ರದಲ್ಲಿ ಈ ಸ್ಟಾರ್ ಜೋಡಿ ಒಟ್ಟಿಗೆ ನಟಿಸುತ್ತಿದ್ದು, ಸದ್ಯಕ್ಕೆ ಈ ಚಿತ್ರಕ್ಕೆ ‘ಕಿಂಗ್100’ ಎಂದು ತಾತ್ಕಾಲಿಕ ಹೆಸರಿಡಲಾಗಿದೆ. ವಿಶೇಷವೆಂದರೆ, ನಾಗಾರ್ಜುನ್ ಮತ್ತು ಟಬು ಬರೋಬ್ಬರಿ 28 ವರ್ಷಗಳ ಸುದೀರ್ಘ ಬಿಡುವಿನ ಬಳಿಕ ಬೆಳ್ಳಿಪರದೆ ಹಂಚಿಕೊಳ್ಳುತ್ತಿದ್ದಾರೆ. ಈ ಹಿಂದಿನ ಸಿನಿಮಾಗಳಲ್ಲಿ ಪ್ರೇಮಿಗಳಾಗಿ ಕಾಣಿಸಿಕೊಂಡಿದ್ದ ಈ…
