Iran: ‘ಟರ್ಕಿ, ಪಾಕ್ ಜತೆಗಿನ ಕಾಗದದ ಒಪ್ಪಂದದಿಂದ ಸೌದಿಗೆ ಭದ್ರತೆ ಸಿಗಲ್ಲ’: ಇರಾನ್ ಸಂಸದ ತೀಕ್ಷ್ಣ ವಾಗ್ದಾಳಿ!
ಟೆಹ್ರಾನ್: ಟರ್ಕಿ ಮತ್ತು ಪಾಕಿಸ್ತಾನದೊಂದಿಗೆ ಸೌದಿ ಅರೇಬಿಯಾ ಮಾಡಿಕೊಂಡಿರುವ ಹೊಸ ಜಂಟಿ ರಕ್ಷಣಾ ಒಪ್ಪಂದವನ್ನು ಇರಾನ್ ತೀವ್ರವಾಗಿ ಟೀಕಿಸಿದೆ. ಈ ಕಾಗದದ ಒಪ್ಪಂದಗಳು ಸೌದಿಗೆ ಶಾಶ್ವತ ಭದ್ರತೆಯನ್ನು ತಂದುಕೊಡಲು ಸಾಧ್ಯವಿಲ್ಲ ಎಂದು ಇರಾನ್ (Iran) ಸಂಸತ್ತಿನ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿ ಸಮಿತಿಯ ಸದಸ್ಯ ಇಬ್ರಾಹಿಂ ರೆಜಾಯಿ ವ್ಯಂಗ್ಯವಾಡಿದ್ದಾರೆ. ಅಮೆರಿಕಕ್ಕೆ ಸಂಪೂರ್ಣವಾಗಿ ಶರಣಾಗಿದ್ದರೂ ಸೌದಿಗೆ ಭದ್ರತೆ ಸಿಗಲಿಲ್ಲ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಈ ಕುರಿತು ಬರೆದುಕೊಂಡಿರುವ ಅವರು, ವರ್ಷಗಳ ಕಾಲ ಅಮೆರಿಕಕ್ಕೆ ಸಂಪೂರ್ಣವಾಗಿ ಶರಣಾಗಿದ್ದರೂ ಸೌದಿಗೆ…
