Cancer: ಕ್ಯಾನ್ಸರ್ ರೋಗಿಗಳಿಗೆ ಡಬಲ್ ಶಾಕ್: ಔಷಧಿಗಳ ಬೆಲೆ ಹೆಚ್ಚಳಕ್ಕೆ ಕೇಂದ್ರದ ಸಮ್ಮತಿ!
ಬೆಂಗಳೂರು: ದೇಶದಲ್ಲಿ ಈಗಾಗಲೇ ಕ್ಯಾನ್ಸರ್ (Cancer) ಚಿಕಿತ್ಸೆಯ ಭಾರಿ ವೆಚ್ಚದಿಂದ ಕಂಗಾಲಾಗಿರುವ ರೋಗಿಗಳಿಗೆ ಕೇಂದ್ರ ಸರ್ಕಾರ ಮತ್ತೊಂದು ಆಘಾತ ನೀಡಿದೆ. ಅತ್ಯಗತ್ಯವಾಗಿ ಬೇಕಾಗುವ ಕೆಲವು ಪ್ರಮುಖ ಕ್ಯಾನ್ಸರ್ ಔಷಧಿಗಳ ದರವನ್ನು ಹೆಚ್ಚಿಸಲು ಸರ್ಕಾರ ಮುದ್ರೆ ಒತ್ತಿದೆ. ಆದರೆ, ಈ ನಿರ್ಧಾರದ ಹಿಂದೆ ಮಾರುಕಟ್ಟೆಯಲ್ಲಿ ಉಂಟಾಗಿರುವ ಜೀವರಕ್ಷಕ ಔಷಧಿಗಳ ತೀವ್ರ ಅಭಾವವೇ ಮುಖ್ಯ ಕಾರಣ ಎಂದು ಹೇಳಲಾಗಿದೆ. ದೇಶದ ಪ್ರಮುಖ ಕ್ಯಾನ್ಸರ್ ಆಸ್ಪತ್ರೆಗಳು ಹಾಗೂ ಸಂಶೋಧನಾ ಕೇಂದ್ರಗಳಲ್ಲಿ ಕೀಮೋಥೆರಪಿಗೆ ಬಳಸುವ ಅತ್ಯಗತ್ಯ ಔಷಧಿಗಳ ಸ್ಟಾಕ್ ಖಾಲಿಯಾಗುತ್ತಾ ಬಂದಿದ್ದು, ರೋಗಿಗಳ…
