Mandya: ಮುತ್ತತ್ತಿ ಕಾವೇರಿ ನದಿ ದಡದಲ್ಲಿ ಅಕ್ರಮ ಲಿಕ್ಕರ್ ಪಾರ್ಟಿ: 22 ಪ್ರವಾಸಿಗರನ್ನು ಹಿಡಿದು ಕೇಸ್ ಹಾಕಿದ ಪೊಲೀಸರು
ಮಂಡ್ಯ: ಜಿಲ್ಲಾಡಳಿತದ ಕಟ್ಟುನಿಟ್ಟಿನ ನಿಯಮಗಳನ್ನು ಗಾಳಿಗೆ ತೂರಿ, ಪ್ರಸಿದ್ಧ ಪ್ರವಾಸಿ (Mandya) ತಾಣವಾದ ಮುತ್ತತ್ತಿಯ ಕಾವೇರಿ ನದಿ ದಡದಲ್ಲಿ ಮದ್ಯಪಾನ ಮಾಡುತ್ತಿದ್ದವರ ವಿರುದ್ಧ ಹಲಗೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ನಿಷೇಧಿತ ಪ್ರದೇಶದಲ್ಲಿ ಪಾರ್ಟಿ ಮಾಡುತ್ತಿದ್ದ 5 ಪ್ರತ್ಯೇಕ ಗುಂಪುಗಳ ಮೇಲೆ ದಾಳಿ ನಡೆಸಿರುವ ಜಂಟಿ ಪೊಲೀಸ್ ಪಡೆ, ಒಟ್ಟು 22 ಮಂದಿಯ ವಿರುದ್ಧ ಕಾನೂನು ಕ್ರಮ ಜರುಗಿಸಿದೆ. ಮುತ್ತತ್ತಿ ವ್ಯಾಪ್ತಿಯಲ್ಲಿ ಪ್ರವಾಸಿಗರು ನದಿಗೆ ಇಳಿಯುವುದು ಹಾಗೂ ಮದ್ಯ ಸೇವನೆ ಮಾಡುವುದನ್ನು ತಡೆಯಲು ಜಿಲ್ಲಾಡಳಿತ ಈಗಾಗಲೇ ಕಟ್ಟುನಿಟ್ಟಿನ…
