NEET: ಇಂದು ನೀಟ್ ಪರೀಕ್ಷೆ, ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟಿಸಿದ ಎನ್‌ಟಿಎ
ನವದೆಹಲಿ: ದೇಶಾದ್ಯಂತ ಇಂದು ನಡೆಯಲಿರುವ ‘ನೀಟ್ ಯುಜಿ 2026’ (NEET) ಮರುಪರೀಕ್ಷೆಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಸರ್ವಸನ್ನದ್ಧವಾಗಿದ್ದು, ಪರೀಕ್ಷಾರ್ಥಿಗಳಿಗೆ ಕೊನೆಯ ಕ್ಷಣದ ಮಹತ್ವದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಪರೀಕ್ಷೆಗೆ ಯಾವುದೇ ಸಮಸ್ಈಯೆಗಳು ಆಗಬಾರದು ಎನ್ನುವ ನಿಟ್ಟಿನಲ್ಲಿ ಪ್ರಮುಖ ಸಲಹೆಯನ್ನು ಹಂಚಿಕೊಂಡಿದ್ದ ಎನ್‌ಟಿಎ, ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬರುವಾಗ ತಮ್ಮ ಅಡ್ಮಿಟ್ ಕಾರ್ಡ್ (ಪ್ರವೇಶ ಪತ್ರ), ಮಾನ್ಯತೆ ಇರುವ ಯಾವುದಾದರೂ ಒಂದು ಫೋಟೋ ಗುರುತಿನ ಚೀಟಿ ಹಾಗೂ ಎರಡು ಪಾಸ್‌ಪೋರ್ಟ್ ಅಳತೆಯ ಇತ್ತೀಚಿನ ಫೋಟೋಗಳನ್ನು ಕಡ್ಡಾಯವಾಗಿ ತರಬೇಕು…
