Neha Case: ನೇಹಾ ಹತ್ಯೆ ಪ್ರಕರಣ: ಆರೋಪಿ ಫಯಾಜ್‌ಗೆ ಮತ್ತಷ್ಟು ಬಿಗಿಬಿದ್ದ ಕಾನೂನು ಉರುಳು
ಹುಬ್ಬಳ್ಳಿ ಮೂಲದ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ (Neha Case) ಅವರ ಬರ್ಬರ ಕೊಲೆ ಪ್ರಕರಣದ ಮುಖ್ಯ ಆರೋಪಿ ಫಯಾಜ್‌ಗೆ ಕಾನೂನಿನ ಸಂಕೋಲೆ ಮತ್ತಷ್ಟು ಬಿಗಿಯಾಗಿದೆ. ಹಂತಕನಿಗೆ ಮರಣದಂಡನೆ ಶಿಕ್ಷೆಯಾಗಬೇಕು ಎಂದು ಮೃತಳ ತಂದೆ ನಿರಂತರವಾಗಿ ಆಗ್ರಹಿಸುತ್ತಿದ್ದಾರೆ. ಈ ನಡುವೆ, ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಧಾರವಾಡ ಹೈಕೋರ್ಟ್ ಪೀಠವು ಮೂರನೇ ಬಾರಿಗೆ ತಿರಸ್ಕರಿಸಿದೆ. ಕೆಳ ನ್ಯಾಯಾಲಯಗಳೂ ಸೇರಿದಂತೆ ಒಟ್ಟಾರೆಯಾಗಿ ಇದು ಐದನೇ ಬಾರಿಗೆ ಆತನಿಗೆ ಜಾಮೀನು ನಿರಾಕರಿಸಲ್ಪಟ್ಟಂತಾಗಿದೆ. ಹೈಕೋರ್ಟ್‌ನಿಂದಲೂ ಹಿನ್ನಡೆ ಅನುಭವಿಸಿರುವ ಫಯಾಜ್‌ಗೆ ಸದ್ಯ ಜೈಲಿನಿಂದ…
