Cyber Crime: ಎನ್‌ಐಎ ಅಧಿಕಾರಿಗಳ ಸೋಗಿನಲ್ಲಿ ತಾಯಿ-ಮಗಳಿಗೆ 2.1 ಕೋಟಿ ರೂ. ವಂಚನೆ!
ಬೆಂಗಳೂರು: ರಾಜಧಾನಿಯಲ್ಲಿ ಸೈಬರ್ ವಂಚಕರ ಜಾಲ ಮತ್ತಷ್ಟು ವಿಸ್ತರಿಸುತ್ತಿದ್ದು, ಜಯನಗರದ ಗೃಹಿಣಿಯೊಬ್ಬರು ಮತ್ತು ಅವರ ಮಗಳನ್ನು ಗುರಿಯಾಗಿಸಿಕೊಂಡು (Cyber Crime) ಬರೋಬ್ಬರಿ 2.1 ಕೋಟಿ ರೂಪಾಯಿ ಲೂಟಿ ಮಾಡಲಾಗಿದೆ. ತನಿಖಾ ಸಂಸ್ಥೆಯ ಅಧಿಕಾರಿಗಳಂತೆ ನಟಿಸಿ ಈ ಭಾರೀ ಮೊತ್ತದ ವಂಚನೆ ಎಸಗಲಾಗಿದೆ. ನಕಲಿ ವಿಚಾರಣೆಯ ನಾಟಕ: ಏಪ್ರಿಲ್ 13ರಂದು ಸಂತ್ರಸ್ತ ಮಹಿಳೆಗೆ ವಾಟ್ಸಾಪ್ ಮೂಲಕ ಕರೆ ಮಾಡಿದ್ದ ಅಪರಿಚಿತನೊಬ್ಬ, ತನ್ನನ್ನು ‘ಪ್ರದೀಪ್ ಜಸ್ವಾಲ್’ ಎಂದು ಪರಿಚಯಿಸಿಕೊಂಡಿದ್ದ. ಮಹಿಳೆಯ ಡೆಬಿಟ್ ಕಾರ್ಡ್ ಅನ್ನು ದೇಶವಿರೋಧಿ ಸಂಘಟನೆಯಾದ ಪಿಎಫ್‌ಐ (PFI)…
