Viral Video: ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡ್ತಿದೆ ಈ ಮೆಟ್ರೋ ವಿಡಿಯೋ; ಆಕೆ ಕೈಲಿದ್ದ ಪುಸ್ತಕದ ಹಿಂದಿನ ರಹಸ್ಯವೇನು?
ನವದೆಹಲಿ: ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವಾಗ ಮಹಿಳೆಯೊಬ್ಬರು ‘ಹೌ ಟು ಕಿಲ್ ಮೆನ್’ (ಪುರುಷರನ್ನು ಕೊಲ್ಲುವುದು ಹೇಗೆ) ಎಂಬ ವಿಲಕ್ಷಣ ಹೆಸರಿನ ಪುಸ್ತಕವನ್ನು ಓದುತ್ತಿರುವ ವಿಡಿಯೋವೊಂದು ಇತ್ತೀಚೆಗೆ (Viral Video) ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಕೇವಲ ಪುಸ್ತಕದ ಶೀರ್ಷಿಕೆಯಿಂದಾಗಿಯೇ ಈ ಸಾಮಾನ್ಯ ದೃಶ್ಯವೀಗ ಇಂಟರ್ನೆಟ್‌ನಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. 1.9 ಕೋಟಿಗೂ ಹೆಚ್ಚು ವೀವ್ಸ್ ಸುಮಾರು 1.9 ಕೋಟಿಗೂ ಹೆಚ್ಚು ವೀಕ್ಷಣೆ ಹಾಗೂ 4 ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದಿರುವ ಈ ಕ್ಲಿಪ್‌ಗೆ…
