TOP NEWS
Targeting Delimitation bill PM Modi Assures NDA Has Required Strength for Legislative Push

Delimitation: ಕ್ಷೇತ್ರ ಮರುವಿಂಗಡಣೆ ಬಿಲ್ ಪಾಸ್ ಮಾಡಲು ಎನ್‌ಡಿಎಗೆ ಇದೆ ಸಂಖ್ಯಾಬಲ: ಪಿಎಂ ಮೋದಿ!

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಮಹಿಳಾ ಮೀಸಲಾತಿ ಮಸೂದೆ ಹಾಗೂ ಕ್ಷೇತ್ರ ಮರುವಿಂಗಡಣೆ (Delimitation) ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಲು ಎನ್‌ಡಿಎ ಮೈತ್ರಿಕೂಟಕ್ಕೆ ಅಗತ್ಯವಿರುವ ಪೂರ್ಣ ಬೆಂಬಲವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರತಿಪಕ್ಷಗಳ ಗದ್ದಲದಿಂದಾಗಿ ಸದ್ಯ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿ ಈ ಮಸೂದೆಗಳನ್ನು ಮಂಡಿಸಲು ಸಾಧ್ಯವಾಗದಿದ್ದರೆ, ಇದೇ ತಿಂಗಳು ಸಂಸತ್ತಿನ ವಿಶೇಷ ಅಧಿವೇಶನ ಕರೆದಾದರೂ ಇವುಗಳನ್ನು ಪಾಸ್ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಈ ಪ್ರಮುಖ ಬಿಲ್‌ಗಳನ್ನು ಕಾನೂನನ್ನಾಗಿ ಮಾಡಲು ಈಗಾಗಲೇ ಎನ್‌ಡಿಎ ಸರ್ಕಾರಕ್ಕೆ…

Read More
Big news Lok Sabha clears strict Public Examination Amendment Bill against paper leaks

Big News: ಲೋಕಸಭೆಯಲ್ಲಿ ಆಂಟಿ-ಪೇಪರ್ ಲೀಕ್ ಬಿಲ್ ಪಾಸ್

ನವದೆಹಲಿ: ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿರುವ ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಂಡಿಸಿದ್ದ ‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕ-2026’ಕ್ಕೆ (Public Examination Amendment Bill) ಲೋಕಸಭೆಯು ಬುಧವಾರ (Big News) ಅಂಗೀಕಾರ ನೀಡಿದೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ನೀಡಿದ ಹೇಳಿಕೆ ಹಾಗೂ ಜುಲೈ 20 ರಂದು ಜಂತರ್ ಮಂತರ್‌ನಿಂದ ನಡೆದ ‘ಸಂಸತ್ ಚಲೋ’ ಪ್ರತಿಭಟನೆಯ…

Read More
Tempestuous scenes in Lok Sabha Rahul Gandhis controversial word usage over exam leak law triggers chaos

Rahul Gandhi: ದೇಶದ ಶಿಕ್ಷಣ ವ್ಯವಸ್ಥೆ ಆರ್‌ಎಸ್‌ಎಸ್ ಹಿಡಿತದಲ್ಲಿದೆ!; ಕಿಡಿಕಾರಿದ ರಾಹುಲ್ ಗಾಂಧಿ!

ನವದೆಹಲಿ: ಸಂಸತ್ತಿನ ಕೆಳಮನೆಯಾದ ಲೋಕಸಭೆಯು ಬುಧವಾರ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವಿನ ತೀವ್ರ ವಾಕ್ಸಮರ ಮತ್ತು ಭಾರಿ ಗದ್ದಲಕ್ಕೆ ಸಾಕ್ಷಿಯಾಯಿತು. ಪರೀಕ್ಷಾ ಅಕ್ರಮ ತಡೆ ತಿದ್ದುಪಡಿ ಕಾಯ್ದೆಯ ಮೇಲಿನ ಚರ್ಚೆಯ ವೇಳೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಬಳಸಿದ “ಅಸಂಸದೀಯ” ಪದವು ಸದನದಲ್ಲಿ ತೀವ್ರ ಹಂಗಾಮೆ ಸೃಷ್ಟಿಸಿತು. ದೇಶದಲ್ಲಿ ಇತ್ತೀಚೆಗೆ ನಡೆದ ಯುವ ಸಮೂಹದ ಆಕ್ರೋಶದ ಕುರಿತು ಮಾತನಾಡಿದ ಅವರು, 18 ವರ್ಷದ ಯುವತಿಯೊಬ್ಬಳೊಂದಿಗಿನ ಸಂಭಾಷಣೆಯನ್ನು ಉಲ್ಲೇಖಿಸಿ “ನಿಜವಾದ ವಿದ್ಯಾರ್ಥಿ” ಹಾಗೂ…

Read More
Right to Disconnect Bill introduced in lok sabha

Right to Disconnect Bill: ಉದ್ಯೋಗಿಗಳಿಗೆ ಗುಡ್‌ನ್ಯೂಸ್‌, ಲೋಕಸಭೆಯಲ್ಲಿ ಹೊಸ ಬಿಲ್ ಮಂಡನೆ

ನವದೆಹಲಿ: ಇತ್ತೀಚೆಗೆ ಕೇಂದ್ರ ಸರ್ಕಾರ ನಾಲ್ಕು ಕಾರ್ಮಿಕ ಮಸೂದೆಗಳನ್ನ ಜಾರಿ ಮಾಡಿದೆ. ಇದೀಗ ಉದ್ಯೋಗಿಗಳ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಅದಕ್ಕೆ ಸಂಬಂಧಪಟ್ಟಂತೆ ಹೊಸ ಮಸೂದೆಯನ್ನ(‌ Right to Disconnect Bill) ಮಂಡನೆ ಮಾಡಿದೆ. ಏನಿದು ಹೊಸ ಮಸೂದೆ? ಭಾರತದಲ್ಲಿ ಕೆಲಸ ಮತ್ತು ಖಾಸಗಿ ಜೀವನದ ನಡುವೆ ಸಮತೋಲನ ಕಾಪಾಡಿಕೊಳ್ಳಲು ಬಹಳ ಕಷ್ಟವಾಗುತ್ತಿದೆ ಎನ್ನುವ ಚರ್ಚೆ ಕಳೆದ ಕೆಲ ಸಮಯದಿಂದ ಆರಂಭವಾಗಿದೆ. ಉದ್ಯೋಗಿಗಳಿಗೆ ಬಹಳ ಒತ್ತಡ ಆಗುತ್ತಿದೆ. ಇದರಿಂದ ತುಂಬಾ ಸಮಸ್ಯೆ ಆಗುತ್ತಿದೆ ಎನ್ನುವ ಮಾತು ಸಹ…

Read More