Crime: ಕಲಬುರಗಿಯಲ್ಲಿ ಭೀಕರ ದುರಂತ: ಪತ್ನಿ ಮೇಲಿನ ಅನುಮಾನಕ್ಕೆ ಮನೆಯಲ್ಲೇ ಜಿಲೆಟಿನ್ ಬ್ಲಾಸ್ಟ್; ತಂದೆ, ಮಗಳು ಸಾವು!
ಕಲಬುರಗಿ: ಪತ್ನಿಯ ನಡತೆಯ ಮೇಲೆ ಅನುಮಾನಗೊಂಡು ವ್ಯಕ್ತಿಯೊಬ್ಬ ಇಡೀ ಕುಟುಂಬವನ್ನೇ ಮುಗಿಸಲು ಹೋಗಿ, ತಾನೂ ಸೇರಿದಂತೆ ಮಗಳನ್ನು ಬಲಿಪಡೆದಿರುವ (Crime) ಭೀಕರ ಘಟನೆ ಆಳಂದ ತಾಲೂಕಿನ ಮಟಕಿ ತಾಂಡಾದಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದೆ. ಮನೆಯೊಳಗೆ ಜಿಲೆಟಿನ್ ಕಡ್ಡಿಗಳನ್ನು ಸ್ಫೋಟಿಸಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಪತ್ನಿ ಸೇರಿ ನಾಲ್ವರು ರಕ್ತದ ಮಡುವಿನಲ್ಲಿ ಬಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಏನಿದು ಘಟನೆ? ಶಿವಲಾಲ್ ಬಲಿರಾಮ್ ರಾಠೋಡ್ (50) ಹಾಗೂ ಈತನ 15 ವರ್ಷದ ಮಗಳು ಮೀರಾ ಜಿಲೆಟಿನ್ ಬ್ಲಾಸ್ಟ್‌ನ…
