Horror: 99ರ ವೃದ್ಧೆಯ ಬರ್ಬರ ಹತ್ಯೆ, ಟ್ರಂಕ್‌ನಲ್ಲಿ ಪತ್ತೆಯಾದ ದೇಹ
ಹೋಶಿಯಾರ್‌ಪುರ: 99 ವರ್ಷದ ವೃದ್ಧೆಯೊಬ್ಬಳನ್ನು ದರೋಡೆಕೋರನೊಬ್ಬ ಕೊಲೆ (Horror) ಮಾಡಿ, ಆಕೆಯ ದೇಹವನ್ನು ಕಬ್ಬಿಣದ ಟ್ರಂಕಿನೊಳಗೆ ತುಂಬಿಸಿರುವ ಘಟನೆ ಹೋಶಿಯಾರ್‌ಪುರದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಒಂಟಿಯಾಗಿ ವಾಸ ಮಾಡುತ್ತಿದ್ದ ಮಹಿಳೆ ಪೊಲೀಸರ ಮಾಹಿತಿ ಪ್ರಕಾರ, ಮೃತ ವೃದ್ಧೆಯನ್ನ ಜೋಗಿಂದರ್ ಕೌರ್ ಎಂದು ಗುರುತಿಸಲಾಗಿದೆ. ಇನ್ನು ಚಬ್ಬೇವಾಲ್ ಪ್ರದೇಶದ ಭಾಮ್ ಹಳ್ಳಿಯಲ್ಲಿರುವ ತನ್ನ ಮನೆಯಲ್ಲಿ ವೃದ್ಧೆ ಒಂಟಿಯಾಗಿ ವಾಸ ಮಾಡುತ್ತಿದ್ದರು ಎನ್ನಲಾಗಿದ್ದು, ಹಿಂದಿನ ಬುಧವಾರ ಸಂಜೆ ಆಕೆಯ ಶವ ಪತ್ತೆಯಾಗಿದ್ದು, ತಲೆಯ ಮೇಲೆ ಗಾಯದ ಗುರುತುಗಳಿವೆ ಎಂದು…
