Sandalwood: ಟ್ರೆಕ್ಕಿಂಗ್ ವೇಳೆಹೃದಯಾಘಾತ: ಖ್ಯಾತ ಚಿತ್ರ ನಿರ್ಮಾಪಕ ಭಾ.ಮಾ. ಹರೀಶ್ ಪುತ್ರ ಉಲ್ಲಾಸ್ ಗೌಡ ನಿಧನ!
ಶಿವಮೊಗ್ಗ: ಕನ್ನಡ ಚಿತ್ರರಂಗದ (Sandalwood) ಪ್ರಖ್ಯಾತ ಚಲನಚಿತ್ರ ನಿರ್ಮಾಪಕ ಭಾ.ಮಾ. ಹರೀಶ್ ಅವರ ಪುತ್ರ ಉಲ್ಲಾಸ್ ಗೌಡ (28) ಅವರು ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಕೊಡಚಾದ್ರಿ ಬೆಟ್ಟದಲ್ಲಿ ಹೃದಯಾಘಾತದಿಂದ (Heart Attack) ಕೊನೆಯುಸಿರೆಳೆದಿದ್ದಾರೆ. ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ತೆರಳಿದ್ದ ಯುವಕ ಅತ್ಯಂತ ಸಣ್ಣ ವಯಸ್ಸಿನಲ್ಲೇ ದುರಂತ ಅಂತ್ಯ ಕಂಡಿರುವುದು ಇಡೀ ಚಿತ್ರರಂಗ ಹಾಗೂ ಅವರ ಕುಟುಂಬ ವರ್ಗದಲ್ಲಿ ತೀವ್ರ ಶೋಕವನ್ನು ಉಂಟುಮಾಡಿದೆ. ಬೆಂಗಳೂರಿನಿಂದ ತಮ್ಮ ಸ್ನೇಹಿತರ ಗುಂಪಿನೊಂದಿಗೆ ಟ್ರಾವೆಲರ್ (T.T) ವಾಹನದಲ್ಲಿ ಕೊಡಚಾದ್ರಿಗೆ ಬಂದಿದ್ದ ಉಲ್ಲಾಸ್…
