Health Guidelines: ಬಿಪಿ, ಹಾರ್ಟ್ ಅಟ್ಯಾಕ್ ತಡೆಗೆ ಆರೋಗ್ಯ ಇಲಾಖೆ ಬಿಗ್ ಅಲರ್ಟ್: ಉಪ್ಪು ಬಳಕೆಗೆ ಕಟ್ಟುನಿಟ್ಟಿನ ಗೈಡ್‌ಲೈನ್ಸ್ ಪ್ರಕಟ!
ಬೆಂಗಳೂರು: ರಾಜ್ಯದಲ್ಲಿ ಅತಿಯಾದ ಉಪ್ಪಿನ ಸೇವನೆಯಿಂದಾಗಿ ರಕ್ತದೊತ್ತಡ (BP) ಹಾಗೂ ಹೃದಯಾಘಾತ (Heart Attack) ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನು (Health Guidelines) ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಆರೋಗ್ಯ ಇಲಾಖೆಯು ಸಾರ್ವಜನಿಕರ ಹಿತದೃಷ್ಟಿಯಿಂದ ಮಹತ್ವದ ಮಾರ್ಗಸೂಚಿಯೊಂದನ್ನು ಹೊರಡಿಸಿದೆ. ಪ್ರತಿಯೊಬ್ಬ ವ್ಯಕ್ತಿಯು ದಿನಕ್ಕೆ ಗರಿಷ್ಠ 5 ಗ್ರಾಂಗಿಂತ (ಒಂದು ಚಮಚ) ಕಡಿಮೆ ಉಪ್ಪನ್ನು ಸೇವಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಶಿಫಾರಸು ಮಾಡಿದ್ದರೂ, ಪ್ರಸ್ತುತ ಸಾರ್ವಜನಿಕರು ಅಪಾಯಕಾರಿ ಮಟ್ಟದಲ್ಲಿ ಹೆಚ್ಚಿನ ಉಪ್ಪನ್ನು ಸೇವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಗ್ಯ…
