Fire Mishap: ಎತಿಹಾದ್ ಏರ್ವೇಸ್ ವಿಮಾನದಲ್ಲಿ ತಾಂತ್ರಿಕ ದೋಷ, ಟೇಕಾಫ್ ಮುನ್ನವೇ ಮರಳಿದ ಫ್ಲೈಟ್
ಚೆನ್ನೈನಿಂದ ಅಬುಧಾಬಿಗೆ ಹೊರಡಬೇಕಿದ್ದ ಎತಿಹಾದ್ ಏರ್ವೇಸ್ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ (Fire Mishap) ಎಂಬ ಸುದ್ದಿಯನ್ನು ವಿಮಾನಯಾನ ಸಂಸ್ಥೆ ಮಂಗಳವಾರ ಅಧಿಕೃತವಾಗಿ ನಿರಾಕರಿಸಿದೆ. ತಾಂತ್ರಿಕ ಸಮಸ್ಯೆಯ ಕಾರಣದಿಂದಾಗಿ ವಿಮಾನವು ಟೇಕಾಫ್ ಆಗುವ ಮುನ್ನವೇ ಮರಳಿ ನಿಲ್ದಾಣಕ್ಕೆ ಬಂದಿದೆಯೇ ಹೊರತು, ವಿಮಾನದಲ್ಲಿ ಯಾವುದೇ ಅಗ್ನಿ ಅವಘಡ ಸಂಭವಿಸಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಸುಮಾರು 280 ಪ್ರಯಾಣಿಕರಿದ್ದ ಈ ವಿಮಾನವು ಹೊರಡಲು ಸಿದ್ಧವಾಗುತ್ತಿದ್ದಾಗ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನವನ್ನು ಗೇಟ್ಗೆ ವಾಪಸ್ ತರಲಾಗಿದ್ದು, ಎಲ್ಲಾ ಪ್ರಯಾಣಿಕರನ್ನು…
