New Car: ಕಾರು ಖರೀದಿಯಲ್ಲಿ ಹೆಚ್ಚಿನ ಡೌನ್ ಪೇಮೆಂಟ್ ಲಾಭ: ಇಎಂಐ – ಬಡ್ಡಿ ಎಷ್ಟು ಕಡಿಮೆಯಾಗುತ್ತದೆ?
ಬೆಂಗಳೂರು: ಹೊಸ ಕಾರು (New Car) ಕೊಳ್ಳುವಾಗ ಬಹುತೇಕ ಜನರು ವಾಹನದ ಒಟ್ಟು ಬೆಲೆ ಹಾಗೂ ಪ್ರತಿ ತಿಂಗಳು ಕಟ್ಟಬೇಕಾದ ಇಎಂಐ (EMI) ಕಡೆಗೇ ಹೆಚ್ಚು ಗಮನ ಹರಿಸುತ್ತಾರೆ. ಆರಂಭದಲ್ಲಿ ಕೈಯಿಂದ ದೊಡ್ಡ ಮೊತ್ತವನ್ನು ಹೊರಹಾಕುವುದು ಬೇಡ ಎಂಬ ಕಾರಣಕ್ಕೆ ಕಡಿಮೆ ಡೌನ್ ಪೇಮೆಂಟ್ ನೀಡಲು ಮುಂದಾಗುತ್ತಾರೆ. ಆದರೆ, ಕಡಿಮೆ ಡೌನ್ ಪೇಮೆಂಟ್ ಪಾವತಿಸಿದರೆ ಸಾಲದ ಮೊತ್ತ ದೊಡ್ಡದಾಗುತ್ತದೆ. ಇದರ ಪರಿಣಾಮವಾಗಿ ಮಾಸಿಕ ಇಎಂಐ ಮತ್ತು ಒಟ್ಟು ಬಡ್ಡಿ ಹೊರೆ ಎರಡೂ ಹೆಚ್ಚಾಗುತ್ತವೆ. ಅದೇ ಹೆಚ್ಚಿನ ಡೌನ್…
