Daali Dhananjay: ಸ್ಯಾಂಡಲ್‌ವುಡ್‌ನಲ್ಲಿ ಡಾಲಿ ಹವಾ: ‘ಮದರ್ ಪ್ರಾಮಿಸ್’ ಚಿತ್ರದ ವಿಶೇಷ ಪ್ರಾರ್ಥನಾ ಗೀತೆ ಬಿಡುಗಡೆ
ಬೆಂಗಳೂರು: ಸ್ಯಾಂಡಲ್‌ವುಡ್‌ನ ಪ್ರಸಿದ್ಧ ನಟ ಡಾಲಿ ಧನಂಜಯ (Daali Dhananjay) ಅಭಿನಯದ ನೂತನ ಚಿತ್ರ ‘ಮದರ್ ಪ್ರಾಮಿಸ್’ ಮುಂಬರುವ ಜುಲೈ 10ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಾಣಲು ಸಿದ್ಧತೆ ನಡೆಸಿದೆ. ತನ್ನ ಅನನ್ಯ ಕಂಟೆಂಟ್ ಹಾಗೂ ಪ್ರಚಾರದ ವೈವಿಧ್ಯತೆಯಿಂದ ಈಗಾಗಲೇ ಸಿನಿರಸಿಕರಲ್ಲಿ ಭಾರಿ ಕ್ರೇಜ್ ಸೃಷ್ಟಿಸಿರುವ ಚಿತ್ರತಂಡ, ಈಗ ಮಕ್ಕಳಿಗಾಗಿಯೇ ಸಿದ್ಧಪಡಿಸಲಾದ ಭಾವುಕ ಪ್ರಾರ್ಥನಾ ಗೀತೆಯೊಂದನ್ನು ಮಾರುಕಟ್ಟೆಗೆ ಬಿಟ್ಟು ಗಮನ ಸೆಳೆದಿದೆ. ಓ ಬೆಳಕೆ ಬಾ ಮನಕೆ ಇದುವರೆಗೆ ಕಮರ್ಷಿಯಲ್ ಹಾಗೂ ಪ್ರೇಮಗೀತೆಗಳನ್ನು ಬರೆಯುತ್ತಿದ್ದ ನಟ ಧನಂಜಯ, ಈ…
