Cyber Fraud: ಮದುವೆ ಹೆಸರಲ್ಲಿ ಮಹಿಳೆಯರಿಗೆ ಕೋಟ್ಯಂತರ ರೂಪಾಯಿ ವಂಚನೆ, ಆರೋಪಿ ಅಂದರ್
ನವದೆಹಲಿ: ದೇಶಾದ್ಯಂತ ಡೇಟಿಂಗ್ ಆ್ಯಪ್‌ಗಳ ಮೂಲಕ ಮಹಿಳೆಯರನ್ನು ನಂಬಿಸಿ, ಭಾವನಾತ್ಮಕವಾಗಿ ವಂಚಿಸುತ್ತಿದ್ದ 35 ವರ್ಷದ ಕಿಲಾಡಿ ಆನಂದ್ ಕುಮಾರ್ ಎಂಬಾತನನ್ನು ದೆಹಲಿ (Cyber Fraud) ಪೊಲೀಸರು ಬಂಧಿಸಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಮಹಿಳೆಯರಿಗೆ ಮದುವೆಯ ಸುಳ್ಳು ಭರವಸೆ ನೀಡಿ 2 ಕೋಟಿ ರೂಪಾಯಿಗೂ ಅಧಿಕ ಹಣ ಪೀಕಿದ್ದ ಈತನ ಬಣ್ಣದ ಬದುಕು ಈಗ ಜೈಲು ಪಾಲಾಗಿದೆ. ಹತ್ತಾರು ಮುಖವಾಡ, ನೂರಾರು ವಂಚನೆ: ಆರೋಪಿ ಆನಂದ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಹತ್ತಾರು ನಕಲಿ ಪ್ರೊಫೈಲ್‌ಗಳನ್ನು ಹೊಂದಿದ್ದ. ತಾನು ದೊಡ್ಡ…
