Corona: ಕೋವಿಡ್ ಲಸಿಕೆ ಅಡ್ಡಪರಿಣಾಮ ಮಾಹಿತಿ ನಿಯಂತ್ರಣ ವಿವಾದ: ಜುಕರ್ಬರ್ಗ್ ಆರೋಪಕ್ಕೆ ಮಸ್ಕ್ ಬೆಂಬಲ
ಬೆಂಗಳೂರು: ಕೋವಿಡ್-19 ಲಸಿಕೆಯ (Corona) ಅಡ್ಡಪರಿಣಾಮಗಳ ಕುರಿತಾದ ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕುವಂತೆ ಅಮೆರಿಕದ ಹಿಂದಿನ ಬೈಡೆನ್ ಆಡಳಿತ ಒತ್ತಡ ಹೇರಿತ್ತು ಎಂಬ ಆರೋಪ ಮತ್ತೊಮ್ಮೆ ಸಾರ್ವಜನಿಕ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ. ಮೆಟಾ ಸಿಇಒ ಮಾರ್ಕ್ ಜುಕರ್ಬರ್ಗ್ ಈ ಹಿಂದೆ ಮುಂದಿಟ್ಟಿದ್ದ ಆರೋಪಕ್ಕೆ ಇದೀಗ ಟೆಸ್ಲಾ ಹಾಗೂ ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ಸಹಮತ ಸೂಚಿಸಿದ್ದಾರೆ. ಮಸ್ಕ್ ಅವರ ಈ ಪ್ರತಿಕ್ರಿಯೆಯು ಕೋವಿಡ್ ಲಸಿಕೆಗಳ ಸುರಕ್ಷತೆಯ ವಿಚಾರ ಹಾಗೂ ಸಾಂಕ್ರಾಮಿಕದ ವೇಳೆ ಸಾಮಾಜಿಕ ಮಾಧ್ಯಮಗಳ ಮೇಲಿದ್ದ…
