Congress: “2028ರ ತನಕ ಸಿದ್ದರಾಮಯ್ಯ ಅವರೇ ಸಿಎಂ”: ನಾಯಕತ್ವ ಬದಲಾವಣೆ ಚರ್ಚೆಗೆ ಬಸವರಾಜ ರಾಯರೆಡ್ಡಿ ಬ್ರೇಕ್!
ಕೊಪ್ಪಳ: ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಗೊಂದಲಗಳಿಗೆ ಶಾಸಕ ಬಸವರಾಜ ರಾಯರೆಡ್ಡಿ ತೆರೆ ಎಳೆದಿದ್ದಾರೆ. ಪ್ರಸ್ತುತ ಅವಧಿ ಮುಗಿಯುವವರೆಗೂ, ಅಂದರೆ 2028ರ ತನಕ ಸಿದ್ದರಾಮಯ್ಯ (Congress) ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಿಎಲ್‌ಪಿ ಸಭೆ ನಡೆದಿಲ್ಲ: ಕೊಪ್ಪಳದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ರಾಯರೆಡ್ಡಿ, ಮುಂಬರುವ ಎರಡು ವರ್ಷಗಳ ಕಾಲ ಸಿದ್ದರಾಮಯ್ಯ ಅವರ ನೇತೃತ್ವದಲ್ಲೇ ಆಡಳಿತ ನಡೆಯಲಿದೆ. ಒಂದು ವೇಳೆ ಹೈಕಮಾಂಡ್ ನಾಯಕತ್ವ ಬದಲಾವಣೆಯ ನಿರ್ಧಾರ ಕೈಗೊಳ್ಳಬೇಕಿದ್ದರೆ, ಮೊದಲು ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆ…
