CJP: ಜಂತರ್ ಮಂತರ್ನಲ್ಲಿ ಹೈಡ್ರಾಮಾ: ಪ್ರತಿಭಟನೆ ವೇಳೆ ಸಿಜೆಪಿ ಮುಖ್ಯಸ್ಥ ಅಭಿಜೀತ್ ದಿಪ್ಕೆ ಮುಖಕ್ಕೆ ನೀಲಿ ಶಾಯಿ ಎರಚಿದ ಮಹಿಳೆ!
ನವದೆಹಲಿ: ರಾಜಧಾನಿ ದೆಹಲಿಯ ಜಂತರ್ ಮಂತರ್ ಪ್ರತಿಭಟನಾ ಸ್ಥಳದಲ್ಲಿ ಭಾನುವಾರ ತೀವ್ರ ಹೈಡ್ರಾಮಾ ನಡೆದಿದೆ. ಅಲ್ಲಿ ಧರಣಿ ಕುಳಿತಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರ ಮುಖಕ್ಕೆ ಮಹಿಳೆಯೊಬ್ಬರು ಇದ್ದಕ್ಕಿದ್ದಂತೆ ನೀಲಿ ಶಾಯಿ ಎರಚಿದ್ದಾರೆ. ಈ ಅನಿರೀಕ್ಷಿತ ಘಟನೆಯಿಂದಾಗಿ ಇಡೀ ಪ್ರತಿಭಟನಾ ಸ್ಥಳ ಕೆಲಕಾಲ ರಣರಂಗದಂತಾಗಿ, ಗೊಂದಲದ ಗೂಡಾಯಿತು. ಸದ್ಯ ಈ ಇಡೀ ದೃಶ್ಯಾವಳಿಗಳ ವಿಡಿಯೋ ಇಂಟರ್ನೆಟ್ನಲ್ಲಿ ಭಾರಿ ಸದ್ದು ಮಾಡುತ್ತಿದ್ದು, ದಿಪ್ಕೆ ಅಭಿಮಾನಿಗಳು ಹಾಗೂ ಸ್ಥಳದಲ್ಲಿದ್ದವರು ಮಹಿಳೆಯ ಕೃತ್ಯಕ್ಕೆ ತೀವ್ರ ಆಕ್ರೋಶ…
