Chamundi Hills: ಚಾಮುಂಡಿ ಬೆಟ್ಟದಲ್ಲಿ ‘ಡಿ ಬಾಸ್’ ಜೈಕಾರ: ಕ್ಯೂನಲ್ಲಿ ದರ್ಶನ್ ಫೋಟೋ ಹಿಡಿದು ಗದ್ದಲ ಎಬ್ಬಿಸಿದ ಅಭಿಮಾನಿಗೆ ಪೊಲೀಸರ ಕ್ಲಾಸ್!
ಮೈಸೂರು: ಮೈಸೂರಿನ ಪ್ರಸಿದ್ಧ ಚಾಮುಂಡಿ ಬೆಟ್ಟದಲ್ಲಿ (Chamundi Hills) ಆಷಾಢ ಮಾಸದ ಪೂಜಾ ಕೈಂಕರ್ಯಗಳ ಹಿನ್ನೆಲೆಯಲ್ಲಿ ಭಕ್ತ ಸಾಗರವೇ ಹರಿದುಬಂದಿತ್ತು. ಈ ನಡುವೆ, ದೇವಿಯ ದರ್ಶನಕ್ಕಾಗಿ ಕಿಲೋಮೀಟರ್‌ಗಟ್ಟಲೆ ಉದ್ದದ ಸರತಿ ಸಾಲಿನಲ್ಲಿ ನಿಂತಿದ್ದ ಯುವಕನೊಬ್ಬ, ನಟ ದರ್ಶನ್ ಅವರ ಬೃಹತ್ ಭಾವಚಿತ್ರವನ್ನು ಪ್ರದರ್ಶಿಸುತ್ತಾ ‘ಡಿ ಬಾಸ್’ ಎಂದು ಗಂಟಲು ಹರಿದುಕೊಳ್ಳುವಂತೆ ಜೈಕಾರ ಹಾಕಲು ಶುರುಮಾಡಿದ್ದನು. ಪವಿತ್ರ ಕ್ಷೇತ್ರದಲ್ಲಿ ಭಕ್ತಿಯ ನಾಮಸ್ಮರಣೆ ಬಿಟ್ಟು ಇಂತಹ ಗದ್ದಲ ಎಬ್ಬಿಸಿದ್ದರಿಂದ ಆತನ ಸುತ್ತಮುತ್ತಲಿದ್ದ ಇತರೆ ಭಕ್ತರು ತೀವ್ರ ಮುಜುಗರ ಹಾಗೂ ಕಿರಿಕಿರಿ…
