Cab Service: ಕ್ಯಾಬ್ ಬುಕಿಂಗ್ ಮಾಡುವ ಮುನ್ನವೇ ಟಿಪ್ಸ್ ಕೇಳುವಂತಿಲ್ಲ: ಓಲಾ, ಉಬರ್ ಆಪ್‌ಗಳಿಗೆ ಕೇಂದ್ರ ಸರ್ಕಾರ ಖಡಕ್ ಬ್ರೇಕ್!
ನವದೆಹಲಿ: ಓಲಾ, ಉಬರ್ ಸೇರಿದಂತೆ ವಿವಿಧ ಆ್ಯಪ್‌ಗಳ ಮೂಲಕ ಕ್ಯಾಬ್ ಮತ್ತು ಆಟೋ ಬುಕ್ ಮಾಡುವ ಗ್ರಾಹಕರಿಗೆ ಕೇಂದ್ರ ಸರ್ಕಾರ ಭಾರಿ ರಿಲೀಫ್ (Cab Service) ನೀಡಿದೆ. ಇನ್ಮುಂದೆ ಪ್ರಯಾಣಿಕರು ತಮ್ಸ್ ಜರ್ನಿ ಶುರುವಾಗುವ ಮುನ್ನವೇ ಯಾವುದೇ ರೀತಿಯ ಹೆಚ್ಚುವರಿ ಹಣ ಅಥವಾ ಟಿಪ್ಸ್ (ಬಕ್ಷೀಸು) ನೀಡುವ ಅಗತ್ಯವಿಲ್ಲ. ಬುಕಿಂಗ್ ಸಮಯದಲ್ಲಿ ಆಪ್‌ಗಳು ತೋರಿಸುತ್ತಿದ್ದ ‘ಪ್ರಿ-ರೈಡ್ ಟಿಪ್ಪಿಂಗ್’ ಅಂದರೆ ಮುಂಗಡ ಟಿಪ್ಸ್ ನೀಡುವ ಆಯ್ಕೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ತೆಗೆದುಹಾಕಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ…
