TOP NEWS
Namma Metro Update Pink and Blue Lines to Open for Public by May 2027 After Trial Runs This November

Namma Metro: ಮೆಟ್ರೋ ಪ್ರಯಾಣಿಕರ ಗಮನಕ್ಕೆ: ನವೆಂಬರ್‌ನಲ್ಲಿ ಪಿಂಕ್, ಬ್ಲೂ ಲೈನ್ ಟ್ರಯಲ್ ರನ್

ಬೆಂಗಳೂರು: ಬೆಂಗಳೂರು ನಗರದ ಸಾರಿಗೆ ದಟ್ಟಣೆಗೆ ಶಮನ ನೀಡಲು ಶ್ರಮಿಸುತ್ತಿರುವ ನಮ್ಮ ಮೆಟ್ರೋದ (Namma Metro) ಪ್ರಮುಖ ಯೋಜನೆಗಳಾದ ‘ಪಿಂಕ್ ಲೈನ್’ ಮತ್ತು ‘ಬ್ಲೂ ಲೈನ್’ ಸಾರ್ವಜನಿಕ ಸೇವೆಗೆ ಲಭ್ಯವಾಗಲು ಸಾರ್ವಜನಿಕರು 2027 ರ ಮೇ ತಿಂಗಳವರೆಗೆ ಕಾಯಬೇಕಾಗಬಹುದು. ಆದಾಗ್ಯೂ, ಈ ಎರಡೂ ಕಾರಿಡಾರ್‌ಗಳ ಪ್ರಮುಖ ಹಂತಗಳಲ್ಲಿ 2026 ರ ನವೆಂಬರ್ ವೇಳೆಗೆ ಪ್ರಾಯೋಗಿಕ ರೈಲು ಸಂಚಾರವನ್ನು (Trial Runs) ಪ್ರಾರಂಭಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಭರದಿಂದ ಸಿದ್ಧತೆ ನಡೆಸುತ್ತಿದೆ. ಸುರಕ್ಷತಾ ಪ್ರಮಾಣಪತ್ರಗಳು…

Read Full News
Bengaluru T20 Match namma Metro Services Extended to Facilitate Late Night Commute for Fans BMRCL

BMRCL: ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ನಾಳೆ ಬೆಂಗಳೂರಿನಲ್ಲಿ ಮಧ್ಯರಾತ್ರಿ 1:15 ರವರೆಗೆ ‘ನಮ್ಮ ಮೆಟ್ರೋ’ ಸೇವೆ ವಿಸ್ತರಣೆ!

ಬೆಂಗಳೂರು: ರಾಜಧಾನಿ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ, ಅಂದರೆ 2026ರ ಅಕ್ಟೋಬರ್ 17ರ ಶನಿವಾರದಂದು ನಡೆಯಲಿರುವ ಹೈವೋಲ್ಟೇಜ್ ಟಿ20 ಕ್ರಿಕೆಟ್ ಪಂದ್ಯದ ಹಿನ್ನೆಲೆಯಲ್ಲಿ ನಗರದ ಕ್ರಿಕೆಟ್ ಪ್ರಿಯರಿಗೆ ಬಿಎಂಆರ್‌ಸಿಎಲ್ (BMRCL) ಸಿಹಿ ಸುದ್ದಿ ನೀಡಿದೆ. ಪಂದ್ಯ ವೀಕ್ಷಿಸಲು ಬರುವ ಸಾವಿರಾರು ಅಭಿಮಾನಿಗಳ ಸುರಕ್ಷಿತ ಹಾಗೂ ಸುಸೂತ್ರ ಸಂಚಾರಕ್ಕಾಗಿ ಶನಿವಾರ ರಾತ್ರಿ ‘ನಮ್ಮ ಮೆಟ್ರೋ’ ರೈಲು ಸೇವೆಗಳ ಸಮಯವನ್ನು ವಿಸ್ತರಿಸಲು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ನಿರ್ಧರಿಸಿದೆ. ಮಧ್ಯರಾತ್ರಿ ವರೆಗೆ ರೈಲು ಸಂಚಾರ ವಿಸ್ತರಣೆ ಸಾಮಾನ್ಯ…

Read Full News
Namma metro End to Parking Woes BMRCL Announces Parking Rates Across 12 Bengaluru Metro Stations

Namma Metro: ‘ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಗುಡ್ ನ್ಯೂಸ್: 12 ನಿಲ್ದಾಣಗಳಲ್ಲಿ ಅಧಿಕೃತ ಪಾರ್ಕಿಂಗ್ ವ್ಯವಸ್ಥೆಗೆ ಬಿಎಂಆರ್‌ಸಿಎಲ್‌ ಟೆಂಡರ್

ಬೆಂಗಳೂರು: ರಾಜಧಾನಿಯ ‘ನಮ್ಮ ಮೆಟ್ರೋ’ (Namma Metro) ಪ್ರಯಾಣಿಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಸಿಹಿ ಸುದ್ದಿ ನೀಡಿದೆ. ನಗರದ ವಿವಿಧ ಭಾಗಗಳಲ್ಲಿರುವ 12 ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ ವಾಹನಗಳ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲು ಬಿಎಂಆರ್‌ಸಿಎಲ್‌ ಅಧಿಕೃತವಾಗಿ ಟೆಂಡರ್ ಆಹ್ವಾನಿಸಿದೆ. ಮೆಟ್ರೋ ರೈಲಿನಲ್ಲಿ ನಿತ್ಯ ಸಂಚರಿಸುವ ಸಾವಿರಾರು ಪ್ರಯಾಣಿಕರು ತಮ್ಮ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ನಿಲ್ಲಿಸಲು ಸೂಕ್ತ ಜಾಗವಿಲ್ಲದೆ ಪಡುತ್ತಿದ್ದ ಪರದಾಟಕ್ಕೆ ಶೀಘ್ರದಲ್ಲೇ ಪರಿಹಾರ ಸಿಗಲಿದೆ. ನಿಗಮವು ಬೈಕ್ ಹಾಗೂ…

Read Full News
Bengaluru Namma Metro Reality Check Despite Record Daily Ridership Passenger Count Plummets at 20 Stations

Namma Metro: ನಮ್ಮ ಮೆಟ್ರೋ ಶಾಕಿಂಗ್ ರಿಪೋರ್ಟ್: ದಿನಕ್ಕೆ 12 ಲಕ್ಷ ಜನ ಓಡಾಡಿದ್ರೂ ಈ ಸ್ಟೇಷನ್‌ಗಳಲ್ಲಿ ಜನವೇ ಇಲ್ವಂತೆ!

ಬೆಂಗಳೂರು: ವೇಗವಾಗಿ ಬೆಳೆಯುತ್ತಿರುವ ರಾಜಧಾನಿ ಬೆಂಗಳೂರಿನ ಸಾರಿಗೆ ವ್ಯವಸ್ಥೆಗೆ ’ನಮ್ಮ ಮೆಟ್ರೋ’ (Namma Metro) ಬಹುದೊಡ್ಡ ವರವಾಗಿದೆ. ಸಂಚಾರ ದಟ್ಟಣೆ ಹಾಗೂ ರಸ್ತೆ ಕಿರಿಕಿರಿಯಿಂದ ತಪ್ಪಿಸಿಕೊಂಡು ವೇಗವಾಗಿ ತಲುಪಲು ಮೆಟ್ರೋ ರೈಲುಗಳು ಬೆಂಗಳೂರಿಗರ ಪಾಲಿಗೆ ನಿತ್ಯ ಜೀವನಾಡಿಯಾಗಿ ಮಾರ್ಪಟ್ಟಿವೆ. ಪ್ರಸ್ತುತ ಹಸಿರು, ನೇರಳೆ ಮತ್ತು ಹಳದಿ ಮಾರ್ಗಗಳಲ್ಲಿ ಮೆಟ್ರೋ ರೈಲುಗಳು ಯಶಸ್ವಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ದಿನಂಪ್ರತಿ ಸುಮಾರು 11 ರಿಂದ 12 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಈ ಸೇವೆಯ ಸೌಲಭ್ಯ ಪಡೆಯುತ್ತಿದ್ದಾರೆ. ಆದರೆ, ಇಷ್ಟೊಂದು ದೊಡ್ಡ ಮಟ್ಟದ…

Read Full News
Attention Namma Metro Passengers Fines Hiked by 400 for Rule Violations

BMRCL: ನಮ್ಮ ಮೆಟ್ರೋ ಪ್ರಯಾಣಿಕರೇ ಎಚ್ಚರ: ನಿಯಮ ಉಲ್ಲಂಘಿಸಿದರೆ ಬೀಳಲಿದೆ ಶೇ. 400 ರಷ್ಟು ಭಾರಿ ದಂಡ!

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರ ಗಮನಕ್ಕೆ! ಮೆಟ್ರೋ ನಿಲ್ದಾಣಗಳು ಹಾಗೂ ರೈಲುಗಳ ಆವರಣದಲ್ಲಿ ಭದ್ರತೆಯನ್ನು ಬಲಪಡಿಸಲು ಮತ್ತು ಶಿಸ್ತು ಕಾಪಾಡಲು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಮಹತ್ವದ ಕ್ರಮ ಕೈಗೊಂಡಿದೆ. ನಿಯಮ ಉಲ್ಲಂಘಿಸುವವರಿಗೆ ಬಿಸಿ ಮುಟ್ಟಿಸಲು ದಂಡದ ಪ್ರಮಾಣವನ್ನು ಏಕಾಏಕಿ ಶೇಕಡಾ 400 ರಷ್ಟು ಹೆಚ್ಚಿಸಲಾಗಿದ್ದು, ಈ ನೂತನ ನಿಯಮಗಳು ಭಾನುವಾರದಿಂದಲೇ ಅನುಷ್ಠಾನಕ್ಕೆ ಬಂದಿವೆ. ಮೆಟ್ರೋ ಆಸ್ತಿಯ ರಕ್ಷಣೆ ಹಾಗೂ ಪ್ರಯಾಣಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಈ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ….

Read Full News
Good News for Namma Metro Yellow Line Commuters 14th Driverless Train Reaches Hebbagodi Depot

Namma Metro: ಮೆಟ್ರೋ ಹಳದಿ ಮಾರ್ಗದ ಪ್ರಯಾಣಿಕರಿಗೆ ಗುಡ್ ನ್ಯೂಸ್: ಹೆಬ್ಬಗೋಡಿ ಡಿಪೋ ತಲುಪಿದ 14ನೇ ಡ್ರೈವರ್‌ಲೆಸ್ ರೈಲು!

ಬೆಂಗಳೂರು: ಸಿಲಿಕಾನ್ ಸಿಟಿಯ ಅತ್ಯಂತ ಪ್ರಮುಖ ಸಂಚಾರ ಮಾರ್ಗಗಳಲ್ಲಿ ಒಂದಾದ ‘ನಮ್ಮ ಮೆಟ್ರೋ’ (Namma Metro) ಹಳದಿ ಲೈನ್‌ನ (Yellow Line) ಪ್ರಯಾಣಿಕರಿಗೆ ಭರ್ಜರಿ ಸಿಹಿ ಸುದ್ದಿಯೊಂದು ಸಿಕ್ಕಿದೆ. ಈ ಮಾರ್ಗದಲ್ಲಿ ಓಡಿಸಲು ಚೀನಾ ಕಂಪನಿಯಿಂದ ಆರ್ಡರ್ ಮಾಡಲಾಗಿದ್ದ ರೈಲುಗಳ ಪೈಕಿ ಮತ್ತೊಂದು ಹೊಸ ರೈಲು ನಗರವನ್ನು ತಲುಪಿದೆ. ಒಟ್ಟು 15 ಅತ್ಯಾಧುನಿಕ ಚಾಲಕರಹಿತ (Driverless) ರೈಲುಗಳ ಪೈಕಿ 14ನೇ ರೈಲು ಈಗಾಗಲೇ ಹೆಬ್ಬಗೋಡಿ ಮೆಟ್ರೋ ಡಿಪೋಗೆ ಬಂದು ಸೇರಿದೆ. ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗಿನ ಈ ವಿಶೇಷ…

Read Full News
BMRCL 3 new six coach trainsets soon

BMRCL: ನಮ್ಮ ಮೆಟ್ರೋ ಸಂಚಾರ ಕ್ರಾಂತಿ: ನಾಲ್ಕು ಪ್ರಮುಖ ಮಾರ್ಗಗಳಿಗೆ ಬರಲಿವೆ ಹೊಸ ರೈಲುಗಳು

ಬೆಂಗಳೂರು: ರಾಜಧಾನಿಯ ಟ್ರಾಫಿಕ್ ಕಿರಿಕಿರಿಗೆ ಮುಕ್ತಿ ನೀಡುವ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಭರ್ಜರಿ ಸುದ್ದಿ ನೀಡಿದೆ. ಮುಂಬರುವ ದಿನಗಳಲ್ಲಿ ಸಾರ್ವಜನಿಕರ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸಲು ಸಾಲು ಸಾಲು ಅತ್ಯಾಧುನಿಕ ಆರು ಬೋಗಿಗಳ ರೈಲುಗಳನ್ನು ಹಳಿಗಳ ಮೇಲೆ ಇಳಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ವಿಶೇಷವಾಗಿ ಹಸಿರು ಮಾರ್ಗದಲ್ಲಿ (Green Line) ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ, ಮುಂಬರುವ ಆಗಸ್ಟ್ ಒಳಗೆ ಮೂರು ಹೊಸ ರೈಲುಗಳನ್ನು ಕಾರ್ಯಾಚರಣೆಗೆ ಮುಕ್ತಗೊಳಿಸಲಾಗುತ್ತಿದೆ. ಅಷ್ಟೇ ಅಲ್ಲದೆ, ಡಿಸೆಂಬರ್…

Read Full News