Anupama Parameswaran: 2 ವರ್ಷಗಳ ಕಾಲ ನಾರ್ಸಿಸಿಸ್ಟಿಕ್ ಕಿರುಕುಳ ಅನುಭವಿಸಿದೆ: ಮಾಜಿ ಪ್ರೇಮಿಯ ಕರಾಳ ಮುಖ ಬಿಚ್ಚಿಟ್ಟ ನಟಿ ಅನುಪಮಾ ಪರಮೇಶ್ವರನ್!
ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟಿ ಅನುಪಮಾ ಪರಮೇಶ್ವರನ್ (Anupama Parameswaran) ಅವರು ತಮ್ಮ ವೈಯಕ್ತಿಕ ಜೀವನದ ಅತ್ಯಂತ ಕಠಿಣ ಮತ್ತು ಕರಾಳ ದಿನಗಳ ಬಗ್ಗೆ ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದು, ಇಂಟರ್‌ನೆಟ್‌ನಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಹಳೆಯ ಪ್ರೇಮ ಜೀವನದ ಕಹಿ ನೆನಪುಗಳನ್ನು ಹಂಚಿಕೊಂಡಿರುವ ಅವರು, ಯಾರ ಹೆಸರನ್ನೂ ನೇರವಾಗಿ ಉಲ್ಲೇಖಿಸದೆ ಸತತ ಎರಡು ವರ್ಷಗಳ ಕಾಲ ತಾವು ಅನುಭವಿಸಿದ ಮಾನಸಿಕ ಮತ್ತು ನಾರ್ಸಿಸಿಸ್ಟಿಕ್ ಕಿರುಕುಳದ (Narcissistic Abuse) ಬಗ್ಗೆ ಆಘಾತಕಾರಿ…
