America: ಭಾರತ-ಪಾಕ್ ಸಂಘರ್ಷ, ವ್ಯಾಪಾರ ವಿಚಾರಗಳಲ್ಲಿ ಟ್ರಂಪ್ ಧ್ವನಿಯಾಗಿದ್ದ ವೈಟ್‌ಹೌಸ್ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ರಾಜೀನಾಮೆ
ಅಮೆರಿಕ: ಅಧ್ಯಕ್ಷ ಡೊನಾಲ್ಡ್ (America) ಟ್ರಂಪ್ ಅವರ ಎರಡನೇ ಅವಧಿಯ ಆಡಳಿತದಲ್ಲಿ ಪ್ರಮುಖ ಸಾರ್ವಜನಿಕ ಧ್ವನಿಯಾಗಿ ಹೊರಹೊಮ್ಮಿದ್ದ ವೈಟ್‌ಹೌಸ್ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಅವರು ಈ ತಿಂಗಳಾಂತ್ಯಕ್ಕೆ ತಮ್ಮ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಕುಟುಂಬಕ್ಕೆ ಹೆಚ್ಚಿನ ಸಮಯ ನೀಡುವ ಉದ್ದೇಶ ಅತ್ಯಂತ ಕಿರಿಯ ವಯಸ್ಸಿಗೆ ಈ ಹುದ್ದೆ ಅಲಂಕರಿಸಿದ್ದ 28 ವರ್ಷದ ಲೀವಿಟ್, ತಮ್ಮ ಕುಟುಂಬಕ್ಕೆ ಹೆಚ್ಚಿನ ಸಮಯ ನೀಡುವ ಉದ್ದೇಶದಿಂದ ಈ ನಿರ್ಧಾರ ತಳೆದಿದ್ದಾರೆ ಎಂದು ಟ್ರಂಪ್ ಘೋಷಿಸಿದ್ದಾರೆ. ಹುದ್ದೆ ತೊರೆದರೂ ಲೀವಿಟ್ ಅವರು ಮುಂಬರುವ…
