ಬೆಂಗಳೂರು: ರಾಜ್ಯದ ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಮುಂದಾಗಿರುವ ಸರ್ಕಾರ, ಪ್ರಸಕ್ತ ಸಾಲಿನ ಬಜೆಟ್ ಭರವಸೆಯಂತೆ ರಾಜ್ಯದ ವಿವಿಧ ಜಿಲ್ಲೆಗಳ ಒಟ್ಟು 23 ಸರ್ಕಾರಿ ಪ್ರೌಢಶಾಲೆಗಳನ್ನು (Education) ಪದವಿ ಪೂರ್ವ ಕಾಲೇಜುಗಳನ್ನಾಗಿ ಮೇಲ್ದರ್ಜೆಗೇರಿಸಿ ಮಹತ್ವದ ಆದೇಶ ಹೊರಡಿಸಿದೆ. ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ನಿರ್ದೇಶಕರು ಅಧಿಕೃತ ಜ್ಞಾಪನ ಪತ್ರ ಹೊರಡಿಸಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಇನ್ನು ಹತ್ತಿರವಾಗಲಿದೆ.
ಈ ಹೊಸ ಕಾಲೇಜುಗಳು 2026-27ನೇ ಶೈಕ್ಷಣಿಕ ಸಾಲಿನಿಂದ ಅಧಿಕೃತವಾಗಿ ಬಾಗಿಲು ತೆರೆಯಲಿವೆ. ಆರಂಭಿಕ ಹಂತದಲ್ಲಿ ಈ ಎಲ್ಲಾ ಕಾಲೇಜುಗಳಲ್ಲಿ ವಾಣಿಜ್ಯ ವಿಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ವಿದ್ಯಾರ್ಥಿಗಳು ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ ಮತ್ತು ಗಣಕ ವಿಜ್ಞಾನ ವಿಷಯಗಳನ್ನು ಅಭ್ಯಾಸ ಮಾಡಬಹುದಾಗಿದೆ. ಇನ್ನು ಭಾಷಾ ವಿಷಯಗಳಾಗಿ ಕನ್ನಡ ಮತ್ತು ಇಂಗ್ಲಿಷ್ ಬೋಧನೆಗೆ ಅನುಮತಿ ನೀಡಲಾಗಿದ್ದು, ಗುಣಮಟ್ಟದ ಶಿಕ್ಷಣ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಹೊಸದಾಗಿ ಆರಂಭವಾಗುವ ಕಾಲೇಜುಗಳಲ್ಲಿ ಬೋಧಕರಿಗೆ ತೊಂದರೆಯಾಗದಂತೆ ಸರ್ಕಾರ ಮುನ್ನೆಚ್ಚರಿಕೆ ವಹಿಸಿದೆ. ಭಾಷಾ ವಿಷಯಗಳನ್ನು ಬೋಧಿಸಲು ಸದ್ಯ ಕಾರ್ಯಭಾರ ಕಡಿಮೆ ಇರುವ ಉಪನ್ಯಾಸಕರನ್ನು ಈ ಕಾಲೇಜುಗಳಿಗೆ ನಿಯೋಜನೆ ಮಾಡುವಂತೆ ಜಿಲ್ಲಾ ಉಪನಿರ್ದೇಶಕರಿಗೆ ಸೂಚಿಸಲಾಗಿದೆ. ಪ್ರೌಢಶಾಲೆಗಳು ಕಾಲೇಜುಗಳಾಗಿ ಬದಲಾಗುತ್ತಿರುವುದರಿಂದ ಸ್ಥಳೀಯವಾಗಿ ಹತ್ತನೇ ತರಗತಿ ಮುಗಿಸಿದ ವಿದ್ಯಾರ್ಥಿಗಳು ದೂರದ ಊರುಗಳಿಗೆ ಅಲೆಯುವುದು ತಪ್ಪಲಿದ್ದು, ಇದು ಶೈಕ್ಷಣಿಕ ಪ್ರಗತಿಗೆ ದೊಡ್ಡ ಮೈಲಿಗಲ್ಲಾಗಲಿದೆ.
ಯಾವೆಲ್ಲಾ ಕಾಲೇಜುಗಳು ಮೇಲ್ದರ್ಜೆಗೆ?
ಸ. ಪ್ರೌಢಶಾಲೆ, ನಗರಮುನ್ನೋಳಿ, ಚಿಕ್ಕೋಡಿ ತಾಲೂಕು, ಬೆಳಗಾವಿ
ಶ್ರೀ ಆರ್.ಕೆ. ಪಾಟೀಲ ಕೆ.ಪಿ.ಎಸ್, ಬಿಡನಾಳ, ಹುಬ್ಬಳ್ಳಿ, ಧಾರವಾಡ
ಸ. ಪ್ರೌಢಶಾಲೆ, ಬಾಳಿಗೆ, ದೇವನಹಳ್ಳಿ ತಾಲೂಕು, ಬೆಂಗಳೂರು ಗ್ರಾಮಾಂತರ
ಸ. ಪ್ರೌಢಶಾಲೆ, ಗಿಣಿಗೇರಾ, ಕೊಪ್ಪಳ ತಾ
ಸ. ಪ್ರೌಢಶಾಲೆ, ಕುಬಕಡ್ಡಿ, ಬಸವನ ಬಾಗೇವಾಡಿ ತಾಲೂಕು, ವಿಜಯಪುರ
ಸ. ಪ್ರೌಢಶಾಲೆ, ಸೇಡಂ ತಾಲೂಕು ಕಲಬುರಗಿ
ಸ. ಪ್ರೌಢಶಾಲೆ, ಭರಮಸಾಗರ, ಹೊಳಲ್ಕೆರೆ ತಾಲೂಕು, ಚಿತ್ರದುರ್ಗ
ಸ. ಪ್ರೌಢಶಾಲೆ, ಕಂದಗಲ್ಲ, ಇಳಕಲ್ಲ ತಾಲೂಕು, ಬಾಗಲಕೋಟೆ
ಸ. ಪ್ರೌಢಶಾಲೆ, ಕೊರಡಗೇರಿ, ಕೊಪ್ಪಳ ತಾ
ಸ. ಪ್ರೌಢಶಾಲೆ, ಅಪ್ಪಿ ದೇವರಹಿಪ್ಪರಗಿ ತಾಲೂಕು, ವಿಜಯಪುರ
ಸ. ಪ್ರೌಢಶಾಲೆ, ಮಲಘಾಣ, ಕೊಲ್ಹಾರ ತಾಲೂರು ವಿಜಯಪುರ
ಸ. ಪ್ರೌಢಶಾಲೆ, ತೇರ್ನಮಕ್ಕಿ, ಬಂಟ್ವಾಳತಾಲೂಕು, ಉತ್ತರ ಕನ್ನಡ.
ಸ. ಪ್ರೌಢಶಾಲೆ, ಉತ್ತೂರು, ಮುಧೋಳ ತಾಲೂಕು, ಬಾಗಲಕೋಟೆ
ಸ. ಪ್ರೌಢಶಾಲೆ, ಸಾಲುಂಡಿ, ಮೈಸೂರು ಜಿಲ್ಲೆ
ಸ. ಪ್ರೌಢಶಾಲೆ, ತಂಗಡಗಿ, ಮುದ್ದೇಬಿಹಾಳ ತಾಲೂಕು, ವಿಜಯಪುರ
ಸ. ಪ್ರೌಢಶಾಲೆ, ಕೋರಹಳ್ಳಿ, ಸಿಂದಗಿ ತಾಲೂಕು, ವಿಜಯಪುರ
ಸ. ಪ್ರೌಢಶಾಲೆ, ಶಿರೋಳ, ಮುಧೋಳ ತಾಲೂಕು, ಬಾಗಲಕೋಟೆ
ಸ್ಟೋನ್ ಹಿಲ್ ಸ. ಹಿ.ಪ್ರಾ ಮತ್ತು ಪ್ರೌಢಶಾಲೆ, ತರಹುಣಸೆ, ಬೆಂ. ಉತ್ತರ
ಸ. ಪ್ರೌಢಶಾಲೆ, ಬಾಶೆಟ್ಟಿಹಳ್ಳಿ, ದೊಡ್ಡಬಳ್ಳಾಪುರ, ಬೆಂ. ಗ್ರಾಮಾಂತರ
ಸ. ಪ್ರೌಢಶಾಲೆ, ಶಿರೂರು, ಕೊಪ್ಪಳ ತಾ
ಸ. ಪ್ರೌಢಶಾಲೆ, ಹಾಲಿಗೇರಿ, ಬಾದಾಮಿ ತಾಲೂಕು ಬಾಗಲಕೋಟೆ
ಸ. ಪ್ರೌಢಶಾಲೆ, ಮದನೂರು, ಸವದತ್ತಿ ತಾಲೂಕು, ಬೆಳಗಾವಿ
ಸ. ಪ್ರೌಢಶಾಲೆ, ಕಸುವಿನಹಳ್ಳಿ, ನಂಜನಗೂಡು ತಾಲೂಕು
ಇದನ್ನೂ ಓದಿ: ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ, ಇಂಜಿನಿಯರ್ ಅಮಾನತಿಗೆ ಸೂಚನೆ
