TOP NEWS
Udupi house handed over to the koraga community

Udupi: ಕೊರಗ ಸಮುದಾಯದವರಿಗೆ ಮನೆ ಹಸ್ತಾಂತರ, ನಟ ರಿಷಬ್‌ ಭಾಗಿ

ಉಡುಪಿ:  ಬ್ರಹ್ಮಾವರ (Udupi) ತಾಲೂಕಿನ ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಟ್ಟಿಬೆಟ್ಟು ಎಂಬಲ್ಲಿ ಪರಿಶಿಷ್ಟ ಪಂಗಡದ ಕೊರಗ ಸಮುದಾಯದವರಿಗೆ ನಿರ್ಮಾಣ ಮಾಡಲಾದ ಮನೆಗಳನ್ನ ಹಸ್ತಾಂತರ ಮಾಡಲಾಯಿತು. 8 ಮನೆಗಳ ಹಸ್ತಾಂತರ  ಸುಮಾರು 1 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ 8 ಮನೆಗಳ ಹಸ್ತಾಂತರ ಕಾರ್ಯಕ್ರಮವನ್ನು ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ಶ್ರೀಗಳು ಉದ್ಘಾಟಿಸಿದರು.  ಇದೇ ವೇಳೆ ಮನೆ ನಿರ್ಮಾಣ ಕಾರ್ಯದಲ್ಲಿ ಧನ ಸಹಾಯ ನೀಡಿದ ದಾನಿಗಳನ್ನು ಪುತ್ತಿಗೆ ಶ್ರೀಗಳು ಅಭಿನಂದಿಸಿದರು. ಯಾರೆಲ್ಲಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು? ಈ ವೇಳೆ…

Read Full News
Mysuru hanuman chalisa mahayagna

Mysuru: ಭಕ್ತಿಭಾವದಿಂದ ನೆರವೇರಿದ ಹನುಮಾನ್ ಚಾಲೀಸಾ ಪಾರಾಯಣ ಮಹಾಯಜ್ಞ

ಮೈಸೂರು: ಅವಧೂತ ದತ್ತಪೀಠದ ವತಿಯಿಂದ ಮೈಸೂರು (Mysuru) ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಬೃಹತ್ ಸಾಮೂಹಿಕ ’ಹನುಮಾನ್ ಚಾಲೀಸಾ ಪಾರಾಯಣ ಮಹಾಯಜ್ಞ’ ನಿನ್ನೆ ಶ್ರದ್ಧೆ, ಭಕ್ತಿಭಾವದಿಂದ ನೆರವೇರಿತು.  50 ಸಾವಿರ ಜನ ಸೇರಿದ್ದ ಕಾರ್ಯಕ್ರಮ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಸಾನಿಧ್ಯದಲ್ಲಿ ಕಿಕ್ಕಿರಿದು ಸೇರಿದ್ದ 50 ಸಾವಿರಕ್ಕೂ ಹೆಚ್ಚು ಭಕ್ತರು ಹನುಮನ ಸ್ಮರಣೆ ಮಾಡಿದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಪವಮಾನ ಹೋಮ ನೆರವೇರಿಸಲಾಯಿತು. ಕಾರ್ಯಕ್ರಮಕ್ಕೆ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಚಾಲನೆ ನೀಡಿದರು.  ನೆರೆದಿದ್ದ ಜನಸ್ತೋಮವನ್ನು ಉದ್ದೇಶಿಸಿ ದತ್ತ…

Read Full News
R Ashok slams cm Siddaramaiah over budget

R Ashok: ಪ್ರೊ. ಗೋವಿಂದರಾವ್‌ ಸಮಿತಿ ಶಿಫಾರಸ್ಸುಗಳ ಅನುಷ್ಟಾನಕ್ಕೆ ಆರ್‌ ಅಶೋಕ್‌ ಆಗ್ರಹ

ಬೆಂಗಳೂರು: ಮುಂದಿನ ಬಜೆಟ್‌ನಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಿಸುವ ನಿಟ್ಟಿನಲ್ಲಿ ಪ್ರೊ. ಗೋವಿಂದರಾವ್‌ ಸಮಿತಿ ಶಿಫಾರಸ್ಸುಗಳ ಅನುಷ್ಟಾನಕ್ಕಾಗಿ ಕನಿಷ್ಟ 15 ಸಾವಿರ ಕೋಟಿ ರೂ. ಅನುದಾನ ಹಂಚಿಕೆ ಮಾಡಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.‌ ಅಶೋಕ (R Ashok) ಒತ್ತಾಯ ಮಾಡಿದ್ದಾರೆ. ಪ್ರಾದೇಶಿಕ ಅಸಮತೋಲನಕ್ಕೆ ಸಿದ್ದರಾಮಯ್ಯ ಕಾರಣ  ಅತಿ ಹೆಚ್ಚು ಬಜೆಟ್‌ ಮಂಡನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದಾರೆ. ಹೀಗಾಗಿ ಪ್ರಾದೇಶಿಕ ಅಸಮತೋಲನಕ್ಕೆ ಅವರೇ ಕಾರಣ. ಈಗ ಆ ತಪ್ಪನ್ನು ಸರಿಪಡಿಸಲು ಬಜೆಟ್‌ನಲ್ಲಿ ಸೂಕ್ತ ಅನುದಾನ ನಿಗದಿ ಮಾಡಬೇಕು…

Read Full News
CM Siddaramaiah fixed hampi utsava date for every year

CM Siddaramaiah: ಹಂಪಿ ಉತ್ಸವಕ್ಕೆ ಸ್ಥಿರ ದಿನಾಂಕ ನಿಗದಿ ಮಾಡಿದ ಸಿಎಂ ಸಿದ್ದರಾಮಯ್ಯ

ವಿಜಯನಗರ: ಹಂಪಿ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ (CM Siddaramaiah) ಅವರು. ಸ್ಥಿರ  ದಿನಾಂಕ ಘೋಷಣೆ ಮಾಡಿದ್ದು, ಇನ್ನು ಮುಂದೆ   ಪ್ರತಿವರ್ಷ ನವೆಂಬರ್  3, 4 ಮತ್ತು 5ರಂದು   ಹಂಪಿ ಉತ್ಸವ  ಆಚರಿಸುವುದಾಗಿ ತಿಳಿಸಿದರು. ಹಂಪಿ ಉತ್ಸವ  ಉದ್ಘಾಟನೆ ವಿಜಯನಗರ ಜಿಲ್ಲೆಯಲ್ಲಿ ಹಂಪಿ ಉತ್ಸವ  ಉದ್ಘಾಟಿಸಿದ  ಬಳಿಕ ಅವರು ,  ನಾಡು, ನುಡಿ ಸಂಸ್ಕೃತಿಗಳ ರಕ್ಷಣೆಗೆ ಸರ್ಕಾರ ಸದಾ ಬದ್ಧವಾಗಿದೆ. ಸರ್ಕಾರ ಆಚರಿಸುವ ಚಾಲುಕ್ಯ ಉತ್ಸವ, ಹಂಪಿ ಉತ್ಸವ, ಕಿತ್ತೂರು ಉತ್ಸವ, ಆನೆಗುಂದಿ ಉತ್ಸವ, ಮೈಸೂರು ದಸರಾ, ಕರಾವಳಿ…

Read Full News
Good News new train may start between Bengaluru belgavi and mumbai

Good News: ಬೆಳಗಾವಿ ಜನರಿಗೆ ಬಂಪರ್‌ ನ್ಯೂಸ್‌, ಹೊಸ ರೈಲು ಸೇವೆ ಸದ್ಯದಲ್ಲಿ ಆರಂಭ?

ಬೆಳಗಾವಿ: ಕೊನೆಗೂ ಬೆಳಗಾವಿ ಜಿಲ್ಲೆಯ ಜನರ ಕನಸೊಂದು (Good News) ನನಸಾಗುವತ್ತ ಬಂದಿದ್ದು, ಬೆಂಗಳೂರು ಬೆಳಗಾವಿ-ಮುಂಬೈ ಹೈ-ಸ್ಪೀಡ್ ರೈಲು ಸದ್ಯದಲ್ಲಿ ಆರಂಭ ಆಗುವ ಸಾಧ್ಯತೆ ಇದೆ. ಕೇಂದ್ರ ಸಚಿವರ ಜೊತೆ ಜಗದೀಶ್ ಶೆಟ್ಟರ್ ಚರ್ಚೆ ಈ ವಿಚಾರವಾಗಿ ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದ ಜಗದೀಶ್ ಶೆಟ್ಟರ್ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರ ಜೊತೆ ಚರ್ಚೆ ಮಾಡಿದ್ದಾರೆ. ನವದೆಹಲಿಯ ಸಂಸತ್ ಭವನದಲ್ಲಿರುವ ಕೇಂದ್ರ ಸಚಿವರ ಕಚೇರಿಯಲ್ಲಿ ಈ ಚರ್ಚೆ ನಡೆದಿದ್ದು, ಹೊಸ ರೈಲು ಮಾರ್ಗಗಳು…

Read Full News
BY Vijayendra slams government over development work

BY Vijayendra: ರಾಜ್ಯದಲ್ಲಿ ಅಭಿವೃದ್ದಿ ಆಗ್ತಿಲ್ಲ: ಬಿವೈ ವಿಜಯೇಂದ್ರ ಆರೋಪ

ಬೆಳಗಾವಿ:  ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಸ್ಥಗಿತಗೊಂಡಿದ್ದು, ಸರ್ಕಾರ ಹಿಂದುಳಿದ ಹಾಗೂ ಪರಿಶಿಷ್ಟ ಸಮುದಾಯಗಳ ಕಲ್ಯಾಣದ ಬಗ್ಗೆ ನಿರ್ಲಕ್ಷ್ಯ ವಹಿಸಿದೆ ಎಂದು  ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ (BY Vijayendra) ಆರೋಪಿಸಿದ್ದಾರೆ.  ಸರ್ಕಾರ ಜನರಿಗೆ ವಂಚನೆ ಮಾಡಿದೆ ಬೆಳಗಾವಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಹಿಂದುಳಿದ ಸಮುದಾಯಗಳ ೧ ಲಕ್ಷದ ೧೪ ಸಾವಿರ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳ ಸೌಕರ್ಯ ಒದಗಿಸದೆ ವಂಚಿಸಿದೆ ಎಂದು ದೂರಿದ್ದಾರೆ. ರಾಜ್ಯದಲ್ಲಿ 2 ಲಕ್ಷ 85 ಸಾವಿರ ಹುದ್ದೆಗಳು ಖಾಲಿ ಉಳಿದಿವೆ. ಮೀಸಲಾತಿ…

Read Full News
Dcm DK Shivakumar meeting with high command leaders in delhi

DK Shivakumar: ದೆಹಲಿಯಲ್ಲಿ ನಾಯಕರ ಜೊತೆ ಡಿಕೆಶಿ ಸಭೆ, ಕಾಲವೇ ಉತ್ತರ ನೀಡಲಿದೆ ಎಂದ ಡಿಸಿಎಂ

ನವದೆಹಲಿ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ನವದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದು, ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಕಾಲವೇ ಉತ್ತರ ನೀಡಲಿದೆ ನಂತರ ಮಾಧ್ಯಮಗಳಿಗೆ ಅಧಿಕಾರ ಹಂಚಿಕೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಪಕ್ಷದ ನಾಯಕರನ್ನು ಈಗಾಗಲೇ ಭೇಟಿ ಮಾಡಿದ್ದು, ಕಾಲವೇ ಉತ್ತರ ನೀಡಲಿದೆ ಎಂದು ಹೇಳಿದ್ದಾರೆ. ಬೀದಿಯಲ್ಲಿ ನಿಂತು ರಾಜಕೀಯ ಮಾಡಲು ಸಿದ್ಧವಿಲ್ಲ ಎಂದು ತಿಳಿಸಿದ್ದಾರೆ. ಕಾಂಗ್ರೆಸ್‌ ಶಾಸಕರಿಂದ ಸಭೆ  ಇನ್ನೊಂದೆಡೆ ರಾಮನಗರದಲ್ಲಿ ಪ್ರತಿಕ್ರಿಯಿಸಿರುವ ಶಾಸಕ ಇಕ್ಬಾಲ್ ಹುಸೇನ್, ಉಪಮುಖ್ಯಮಂತ್ರಿ…

Read Full News