TOP NEWS
Donald Trump again says he is the dictator

Donald Trump: ನಾನು ಸರ್ವಾಧಿಕಾರಿ ಎಂದ ಟ್ರಂಪ್

ದಾವೋಸ್: ಸ್ವಿಟ್ಜರ್‌ಲ್ಯಾಂಡ್‌ನ ದಾವೋಸ್‌ನಲ್ಲಿ 56 ನೇ ವಾರ್ಷಿಕ ವಿಶ್ವ ಆರ್ಥಿಕ ವೇದಿಕೆಯಲ್ಲಿ (WEF) ಮಾತನಾಡಿದ  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump), ತಮ್ಮ ಸರ್ವಾಧಿಕಾರಿ ಕನಸಿನ ಬಗ್ಗೆ ಮತ್ತೊಮ್ಮೆ ಮಾತನಾಡಿದ್ದಾರೆ. ನಾನು ಸರ್ವಾಧಿಕಾರಿ ಎಂದ ಟ್ರಂಪ್‌ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ತಮ್ಮನ್ನು ತಾವು ‘ನಾನು ಸರ್ವಾಧಿಕಾರಿ’ ಎಂದು ಕರೆದಿದ್ದಾರೆ. ಅಲ್ಲದೇ, ತಮ್ಮ ನಾಯಕತ್ವದ ಶಯಲಿಯ ಬಗ್ಗೆ ಹಾಗೂ ರಾಜಕೀಯ ನೀತಿಗಳ ಬಗ್ಗೆ ಮಾತನಾಡಿದ್ದು, ತಮ್ಮ ನಿರ್ಧಾರಗಳನ್ನ ಸಮರ್ಥಿಸಿಕೊಂಡಿದ್ದಾರೆ. ಈ ಸಮಯದಲ್ಲಿಯೇ ಅವರು ತಮ್ಮನ್ನ…

Read More
Republic Day celebration invitation to isro head

Republic Day: 77ನೇ ಗಣರಾಜ್ಯೋತ್ಸವ ಹಿನ್ನೆಲೆ, ಇಸ್ರೋ ಅಧ್ಯಕ್ಷರಿಗೆ ರಾಷ್ಟ್ರಪತಿ ಭವನ ಕಾರ್ಯಕ್ರಮಕ್ಕೆ ಆಹ್ವಾನ

ನವದೆಹಲಿ: 77ನೇ ಗಣರಾಜ್ಯೋತ್ಸವ (Republic Day) ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿರುವ ಕಾರ್ಯಕ್ರಮಕ್ಕೆ ದೇಶದ ವಿವಿಧ ಭಾಗಗಳ ವಿಜ್ಞಾನಿಗಳು, ಚಿಂತಕರು, ಸಂಶೋಧಕರಿಗೆ ಆಹ್ವಾನ ನೀಡಲಾಗುತ್ತಿದೆ. ಇಸ್ರೋ ಅಧ್ಯಕ್ಷರಿಗೆ ಆಹ್ವಾನ  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಧ್ಯಕ್ಷ ಡಾ. ವಿ. ನಾರಾಯಣನ್ ಅವರಿಗೆ  ಅಂಚೆ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ  ರಾಷ್ಟ್ರಪತಿ ಭವನದಿಂದ ಬಂದಿರುವ ಆಹ್ವಾನ ಪತ್ರಿಕೆ ನೀಡಿದ್ದಾರೆ.  ಆಹ್ವಾನ ಸಂತಸ ತಂದಿದೆ ಎಂದ ನಾರಾಯಣನ್ ಈ ವಿಚಾರವಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಡಾ.  ವಿ. ನಾರಾಯಣನ್ ,…

Read More
vice president CP Radhakrishnan inaugurated harijana sevaka sangha library

CP Radhakrishnan: ಗ್ರಂಥಾಲಯ ಘಟಕ ಉದ್ಘಾಟನೆ ಮಾಡಿದ ಉಪರಾಷ್ಟ್ರಪತಿ

ನವದೆಹಲಿ: ದೆಹಲಿಯ ಗಾಂಧಿ ಆಶ್ರಮದ ಹರಿಜನ ಸೇವಕ ಸಂಘದಲ್ಲಿ ನೂತನವಾಗಿ ನಿರ್ಮಿಸಿರುವ ಮಹದೇವ ದೇಸಾಯಿ ಗ್ರಂಥಾಲಯ ಘಟಕವನ್ನು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ (CP Radhakrishnan) ಇಂದು ಉದ್ಘಾಟಿಸಿದ್ದಾರೆ. 2 ಪುಸ್ತಕ ಬಿಡುಗಡೆ ಮಾಡಿದ ಉಪರಾಷ್ಟ್ರಪತಿ ಇದೇ ಸಮಯದಲ್ಲಿ ಪ್ರೊ. ಶಂಕರ್ ಕುಮಾರ್ ಸನ್ಯಾಲ್ ರಚಿಸಿರುವ ‘ ಜ್ಞಾನೋದಯದ ಯುಗ: ಮಹಾತ್ಮಾ ಗಾಂಧಿಯವರ ದೂರದೃಷ್ಟಿ ‘ ಪುಸ್ತಕ ಬಿಡುಗಡೆ ಮಾಡಿದ್ದಾರೆ. ಇದರ ಬಳಿಕ ಮಾತನಾಡಿದ ಉಪರಾಷ್ಟ್ರಪತಿ, ಸಾಮಾಜಿಕ ಪರಿವರ್ತನೆಯಲ್ಲಿ ಗ್ರಂಥಾಲಯಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ.  ಜ್ಞಾನ ಸಂಪಾದನೆಯಿಂದ…

Read More
bjp announced Nitin Nabin as new president of party

Nitin Nabin: ನಿತಿನ್ ನಬಿನ್ ಅವರನ್ನು ಅಧ್ಯಕ್ಷರಾಗಿ ಅಧಿಕೃತ ಘೋಷಣೆ ಮಾಡಿದ ಬಿಜೆಪಿ

ನವದೆಹಲಿ: ಇಂದು ದೆಹಲಿಯಲ್ಲಿನ ಭಾರತೀಯ ಜನತ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಪಕ್ಷದ ಹೊಸ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನಿತಿನ್ ನಬಿನ್ (Nitin Nabin) ಅವರನ್ನು ಔಪಚಾರಿಕವಾಗಿ ಘೋಷಣೆ ಮಾಡಲಾಗಿದೆ. ಅಧ್ಯಕ್ಷ ಹುದ್ದೆ ಅಲಂಕರಿಸಿದ ಕಿರಿಯ ವ್ಯಕ್ತಿ ಈ ಕಾರ್ಯಕ್ರಮದಲ್ಲಿ ಬಿಜೆಪಿ ಸಾಂಸ್ಥಿಕ ಚುನಾವಣೆಯ ಚುನಾವಣಾಧಿಕಾರಿ ಕೆ. ಲಕ್ಷ್ಮಣ್ ಅವರು ಸಾಂಸ್ಥಿಕ ಚುನಾವಣೆಯ ಫಲಿತಾಂಶಗಳನ್ನು ಘೋಷಣೆ ಮಾಡಿದ್ದು,  ಮತ್ತು ಪಕ್ಷದ ಉನ್ನತ ಹುದ್ದೆಯನ್ನು ಅಲಂಕರಿಸಿದ ಅತ್ಯಂತ ಕಿರಿಯ ವ್ಯಕ್ತಿ 45 ವರ್ಷದ ನಿತಿನ್‌ ನಬಿನ್ ಅವರಿಗೆ ಚುನಾವಣಾ ಪ್ರಮಾಣಪತ್ರವನ್ನು ಹಸ್ತಾಂತರಿಸಿದ್ದಾರೆ….

Read More
BJPs new president will be formally announced tomorrow

BJP: ನಾಳೆ ಬಿಜೆಪಿ ಹೊಸ ರಾಷ್ಟ್ರೀಯ ಅಧ್ಯಕ್ಷರ ಹೆಸರು ಘೋಷಣೆ

ನವದೆಹಲಿ: ಬಿಜೆಪಿಯ (BJP) ಮುಂದಿನ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಇಂದು ಚುನಾವಣೆ ನಡೆದಿದ್ದು, ನಾಳೆ ಅಧ್ಯಕ್ಷರ ಹೆಸರನ್ನ ಬಹಿರಂಗಪಡಿಸಲಾಗುತ್ತದೆ ಎನ್ನಲಾಗಿದೆ. ಅತಿಹೆಚ್ಚು ಬೆಂಬಲ ಪಡೆದ ನಿತಿನ್‌ ಇಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಹಿರಿಯ ನಾಯಕ ನಿತಿನ್ ನಬಿನ್ (46) ಅವರ ಪರವಾಗಿ 37 ಸೆಟ್ ನಾಮಪತ್ರಗಳು ಸಲ್ಲಿಕೆಯಾಗಿದೆ. ಇದರಿಂದಾಗಿ ಅವರು ಅಧ್ಯಕ್ಷರಾಗುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗುತ್ತಿದೆ. ಈ ನಾಮಪತ್ರಗಳ ಪೈಕಿ 36 ನಾಮಪತ್ರಗಳು ವಿವಿಧ ರಾಜ್ಯಗಳಿಂದ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸಲ್ಲಿಕೆಯಾಗಿದ್ದರೆ, ಒಂದು ನಾಮಪತ್ರವನ್ನು ಬಿಜೆಪಿ ರಾಷ್ಟ್ರೀಯ…

Read More

Vehicle: 2025 ರಲ್ಲಿ ಹೆಚ್ಚಾದ ವಾಹನಗಳ ನೋಂದಣಿ, ಎಲೆಕ್ಟ್ರಿಕ್‌ ವಾಹನಗಳದ್ದೇ ಕಾರುಬಾರು ಜಾಸ್ತಿ

ನವದೆಹಲಿ: ದೇಶದಲ್ಲಿ 2025ರಲ್ಲಿ ಹೊಸದಾಗಿ ನೋಂದಣಿಯಾದ ಎಲ್ಲಾ ವಾಹನಗಳ (Vehicle) ಪೈಕಿ ಶೇಕಡ 8ರಷ್ಟು ಎಲೆಕ್ಟ್ರಿಕ್ ವಾಹನಗಳಿವೆ ಎಂದು ವಾಹನ್ ಪೋರ್ಟಲ್ ದತ್ತಾಂಶದಿಂದ ತಿಳಿದುಬಂದಿದೆ. 23 ಲಕ್ಷ ತಲುಪಿದ ಎಲೆಕ್ಟ್ರಿಕ್ ವಾಹನಗಳ ಮಾರಾಟ  ಒಟ್ಟಾರೆ, ಎಲೆಕ್ಟ್ರಿಕ್ ವಾಹನಗಳ ಮಾರಾಟದ ಸಂಖ್ಯೆ 23 ಲಕ್ಷ ತಲುಪಿದೆ. ಅದರಲ್ಲಿ 12 ಲಕ್ಷದ 80 ಸಾವಿರಕ್ಕೂ ಅಧಿಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಪಾಲು ಇದ್ದು, ಇದು ಒಟ್ಟಾರೆ ವಾಹನದ ಶೇಕಡ 57ರಷ್ಟಾಗಲಿದೆ.  ಉಳಿದಂತೆ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳ ಮಾರಾಟ 8 ಲಕ್ಷ…

Read More
Upendra Dwivedi in army day function

Upendra Dwivedi: ಆಪರೇಷನ್ ಸಿಂಧೂರ್ ಮುಂದುವರೆದಿದೆ: ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಭಾರತೀಯ ಸೇನಾ ದಿನದ ಕಾರ್ಯಕ್ರಮದಲ್ಲಿ  ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ (Upendra Dwivedi) ಅವರು ಪಾಲ್ಗೊಂಡು, ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಆಪರೇಷನ್ ಸಿಂಧೂರ್ ಮುಂದುವರೆದಿದೆ ಕಾರ್ಯಕ್ರಮದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆಪರೇಷನ್ ಸಿಂಧೂರ್ ಮುಂದುವರಿದಿದ್ದು, ಭವಿಷ್ಯದಲ್ಲಿ ಸಂಭವಿಸಬಹುದಾದ ಯಾವುದೇ ರೀತಿಯ ದುಸ್ಸಾಹಸಗಳಿಗೆ ದೃಢವಾಗಿ ಪ್ರತಿಕ್ರಿಯೆ ನೀಡಲಾಗುವುದು. ಆಪರೇಷನ್ ಸಿಂಧೂರ್ ಮೂರೂ ಸೇನಾಪಡೆಗಳ ಸಮನ್ವಯ, ಸ್ಪಷ್ಟವಾದ ರಾಜಕೀಯ ನಿರ್ದೇಶನ ಮತ್ತು ಸೇನೆಗೆ ದೊರೆತ ಸಂಪೂರ್ಣ ಸ್ವಾತಂತ್ರ್ಯಕ್ಕೆ…

Read More