ಬೆಂಗಳೂರು: ಆಭರಣಪ್ರಿಯರು ಹಾಗೂ ಹೂಡಿಕೆದಾರರಿಗೆ ಮತ್ತೆ ಚಿಂತೆಯ ದಿನಗಳು ಶುರುವಾಗಿವೆ. ಕಳೆದ (Gold Price) ಕೆಲವು ದಿನಗಳಿಂದ ಸಲ್ಪ ಮಟ್ಟಿಗೆ ಕುಸಿತ ಕಂಡು ಸಮಾಧಾನ ತಂದಿದ್ದ ಚಿನ್ನದ ಬೆಲೆ, ಇದೀಗ ನವೆಂಬರ್ 3, 2026ರ ಮಂಗಳವಾರದಂದು ಮತ್ತೆ ಏರಿಕೆಯ ಹಾದಿ ಹಿಡಿದಿದೆ. ಬೆಲೆಯಲ್ಲಿ ಕಂಡುಬಂದಿರುವ ಈ ನೂತನ ಜಿಗಿತವು, ಮಾರುಕಟ್ಟೆಯಲ್ಲಿ ತಕ್ಷಣವೇ ಆಭರಣ ಖರೀದಿಸಬೇಕಾ ಅಥವಾ ಬೆಲೆ ಇನ್ನಷ್ಟು ಇಳಿಕೆಯಾಗುವವರೆಗೆ ಕಾಯಬೇಕಾ ಎಂಬ ಗೊಂದಲವನ್ನು ಖರೀದಿದಾರರಲ್ಲಿ ಮೂಡಿಸಿದೆ.
ದೀಪಾವಳಿ ಹಬ್ಬ ಹಾಗೂ ಮುಂಬರುವ ಮದುವೆ ಸಮಾರಂಭಗಳ ಋತುವಿನ ಹಿನ್ನೆಲೆಯಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚುತ್ತಿರುವ ಬೆನ್ನಲ್ಲೇ ಬೆಲೆ ಏರಿಕೆಯಾಗಿರುವುದು ಗ್ರಾಹಕರ ಜೇಬಿಗೆ ಬಿಸಿ ತಟ್ಟಿಸಿದೆ.
24, 22 ಮತ್ತು 18 ಕ್ಯಾರೆಟ್ ಚಿನ್ನದ ಇಂದಿನ (Gold Price) ದರ ವಿವರ
ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಪ್ರಸ್ತುತ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ₹13,964 ತಲುಪಿದ್ದು, 10 ಗ್ರಾಂಗೆ ₹1,39,640 ದಾಖಲಾಗಿದೆ. ಸೋಮವಾರದ ದರಕ್ಕೆ ಹೋಲಿಸಿದರೆ ಪ್ರತಿ ಗ್ರಾಂಗೆ ₹27 ಹಾಗೂ 10 ಗ್ರಾಂಗೆ ₹270 ಹೆಚ್ಚಳವಾಗಿದೆ.
ಇನ್ನು ಆಭರಣ ತಯಾರಿಕೆಗೆ ಹೆಚ್ಚಾಗಿ ಬಳಸಲ್ಪಡುವ 22 ಕ್ಯಾರೆಟ್ ಚಿನ್ನದ ದರದಲ್ಲೂ ಏರಿಕೆಯಾಗಿದೆ. 1 ಗ್ರಾಂ 22 ಕ್ಯಾರೆಟ್ ಚಿನ್ನ ₹12,800 ತಲುಪಿದ್ದರೆ, 10 ಗ್ರಾಂಗೆ ₹1,28,000 ಆಗಿದೆ. ಸೋಮವಾರಕ್ಕೆ ಹೋಲಿಸಿದರೆ ಪ್ರತಿ ಗ್ರಾಂಗೆ ₹25 ಮತ್ತು 10 ಗ್ರಾಂಗೆ ₹250 ಹೆಚ್ಚಾಗಿದೆ. ಹಾಗೆಯೇ, 18 ಕ್ಯಾರೆಟ್ ಚಿನ್ನದ ಬೆಲೆಯು 1 ಗ್ರಾಂಗೆ ₹10,473 ಹಾಗೂ 10 ಗ್ರಾಂಗೆ ₹1,04,730 ರಂತೆ ಮಾರಾಟವಾಗುತ್ತಿದ್ದು, ಸೋಮವಾರಕ್ಕಿಂತ ಪ್ರತಿ ಗ್ರಾಂಗೆ ₹20 ರಷ್ಟು ಏರಿಕೆಯಾಗಿದೆ.
ಬದಲಾಗದ ಬೆಳ್ಳಿ ಬೆಲೆ: ಗ್ರಾಹಕರಿಗೆ ಸಣ್ಣ ರಿಲೀಫ್
ಚಿನ್ನದ ಧಾರಣೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದರೂ, ಬೆಳ್ಳಿಯ ದರದಲ್ಲಿ ಸ್ಥಿರತೆ ಕಾಯ್ದುಕೊಂಡಿರುವುದು ಹೂಡಿಕೆದಾರರಿಗೆ ಕೊಂಚ ನೆಮ್ಮದಿ ತಂದಿದೆ. ಮಾರುಕಟ್ಟೆಯಲ್ಲಿ ಪ್ರಸ್ತುತ 1 ಗ್ರಾಂ ಬೆಳ್ಳಿಯ ಬೆಲೆ ₹200 ಇದ್ದು, 1 ಕೆಜಿ ಬೆಳ್ಳಿಯ ಬೆಲೆ ₹2 ಲಕ್ಷ ರೂಪಾಯಿಯಲ್ಲೇ ಸ್ಥಿರವಾಗಿ ಮುಂದುವರಿದಿದೆ.
ಮಾರುಕಟ್ಟೆಯ ಗೊಂದಲ ಮತ್ತು ತಜ್ಞರ ಸಲಹೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗುವ ಏರಿಳಿತಗಳು, ಅಮೆರಿಕನ್ ಡಾಲರ್ ಮೌಲ್ಯದ ವ್ಯತ್ಯಾಸ ಹಾಗೂ ಜಾಗತಿಕ ಆರ್ಥಿಕ ವಿದ್ಯಮಾನಗಳು ಚಿನ್ನದ ಬೆಲೆಯ ಮೇಲೆ ನೇರ ಪ್ರಭಾವ ಬೀರುತ್ತವೆ. ಪ್ರಸ್ತುತ ದರದಲ್ಲಿ ಸಣ್ಣ ಮಟ್ಟದ ಜಿಗಿತ ಸಾಮಾನ್ಯವಾಗಿದ್ದರೂ, ಮುಂಬರುವ ದಿನಗಳಲ್ಲಿ ಬೆಲೆ ಮತ್ತಷ್ಟು ಜಿಗಿಯಲಿದೆಯೇ ಅಥವಾ ಮತ್ತೆ ಇಳಿಕೆಯಾಗಲಿದೆಯೇ ಎಂಬುದು ಇನ್ನೂ ಅಸ್ಪಷ್ಟವಾಗಿದೆ.
ಆದ್ದರಿಂದ ಊಹಾಪೋಹಗಳಿಗೆ ಕಿವಿಗೊಟ್ಟು ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡುವ ಬದಲು, ಮದುವೆ ಅಥವಾ ತುರ್ತು ಅಗತ್ಯವಿರುವವರು ತಮ್ಮ ಬಜೆಟ್ಗೆ ತಕ್ಕಂತೆ ನಿಧಾನವಾಗಿ ಖರೀದಿ ಮಾಡುವುದು ಸೂಕ್ತ ಎಂದು ಮಾರುಕಟ್ಟೆ ತಜ್ಞರು ಸಲಹೆ ನೀಡಿದ್ದಾರೆ.
ಆಭರಣ ಖರೀದಿಸುವಾಗ ಗಮನಿಸಬೇಕಾದ ಅಂಶಗಳು
ಬೆಲೆ ಏರಿಕೆಯ ಈ ಸಂದರ್ಭದಲ್ಲಿ ಚಿನ್ನಾಭರಣ ಖರೀದಿಸುವಾಗ ಬರಿ ದರವನ್ನು ಮಾತ್ರ ನೋಡದೆ ನೈರ್ಮಲ್ಯ ಮತ್ತು ಗುಣಮಟ್ಟವನ್ನು ಪರಿಶೀಲಿಸುವುದು ಅತ್ಯಗತ್ಯ.
ಒಟ್ಟು ಬಿಲ್ ಲೆಕ್ಕಾಚಾರ: ಬರಿ ಚಿನ್ನದ ಬೆಲೆಯಷ್ಟೇ ಅಲ್ಲದೆ, ಅಂಗಡಿಯ ವಿಶ್ವಾಸಾರ್ಹತೆ, ಪೋಲು (ವ್ಯರ್ಥ), ಮಜೂರಿ (ತಯಾರಿಕಾ ವೆಚ್ಚ) ಹಾಗೂ ಶೇ. 3 ರಷ್ಟು ಜಿಎಸ್ಟಿ (GST) ಸೇರಿದಂತೆ ಅಂತಿಮ ಬಿಲ್ ಎಷ್ಟಾಗುತ್ತದೆ ಎಂಬುದನ್ನು ಮೊದಲೇ ಲೆಕ್ಕ ಹಾಕಿ ಪಾರದರ್ಶಕವಾಗಿ ವ್ಯವಹರಿಸುವುದು ಒಳಿತು.
ಹಾಲ್ಮಾರ್ಕ್ ಮತ್ತು HUID: ಖರೀದಿಸುವ ಪ್ರತಿಯೊಂದು ಚಿನ್ನದ ಅಭರಣದ ಮೇಲೆಯೂ ಸರಕಾರದ ಅಧಿಕೃತ ಹಾಲ್ಮಾರ್ಕ್ (Hallmark) ಮತ್ತು ಹೆಚ್ಯುಐಡಿ (HUID) ಸಂಖ್ಯೆ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಇದನ್ನೂ ಓದಿ: 8ನೇ ವೇತನ ಆಯೋಗದ ನಿರೀಕ್ಷೆಯಲ್ಲಿ ಕೋಟಿಗೂ ಹೆಚ್ಚು ಪಿಂಚಣಿದಾರರು: ಫಿಟ್ಮೆಂಟ್ ಫ್ಯಾಕ್ಟರ್ ಲೆಕ್ಕಾಚಾರ ಹೇಗೆ?
