ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಷಯದಲ್ಲಿ ಇತ್ತೀಚೆಗೆ ಮೃದು ಧೋರಣೆ ತಳೆದಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೊಸ ರಾಜಕೀಯ ಆಟವನ್ನು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ (HC Balakrishna) ಕಟುವಾಗಿ ಟೀಕಿಸಿದ್ದಾರೆ. ಕುಮಾರಸ್ವಾಮಿ ಅವರ ಈ ಅನಿರೀಕ್ಷಿತ ಪ್ರೀತಿಯನ್ನು “ಗೋಸುಂಬೆ ರಾಜಕಾರಣ” ಎಂದು ಬಣ್ಣಿಸಿರುವ ಬಾಲಕೃಷ್ಣ, ತಮ್ಮ ಸಾಮಾಜಿಕ ಜಾಲತಾಣ ‘ಎಕ್ಸ್’ (ಟ್ವಿಟರ್) ಮೂಲಕ ಹೆಚ್‌ಡಿಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಜೆಡಿಎಸ್ ಹಳೆಯ ನೆನಪು ಕೆದಕಿದ ಶಾಸಕ (HC Balakrishna) ಬಾಲಕೃಷ್ಣ
ಕುಮಾರಸ್ವಾಮಿ ಅವರಿಗೆ ಬಹಿರಂಗ ಸವಾಲು ಎಸೆದಿರುವ ಬಾಲಕೃಷ್ಣ, “ಅಂದು ಸಿದ್ದರಾಮಯ್ಯನವರು ಜೆಡಿಎಸ್ ಪಕ್ಷದಲ್ಲಿದ್ದಾಗ ಅವರ ಮೇಲಿದ್ದ ಕಾಳಜಿ ಹಾಗೂ ಗೌರವ ಎಲ್ಲೋಗಿತ್ತು?” ಎಂದು ಪ್ರಶ್ನಿಸಿದ್ದಾರೆ. ಅಂದು ಸಿದ್ದರಾಮಯ್ಯ ಅವರಿಗೆ ಸಿಗಬೇಕಿದ್ದ ಮುಖ್ಯಮಂತ್ರಿ ಹುದ್ದೆಯನ್ನು ತಪ್ಪಿಸಿ, ಅವರನ್ನು ಪಕ್ಷದಿಂದ ಹೊರಹಾಕುವ ಬದಲು ಇದೇ ರೀತಿಯ ಪ್ರೀತಿ-ಮಮಕಾರ ತೋರಿಸಿದ್ದರೆ ಇವತ್ತು ಜೆಡಿಎಸ್ ಪಕ್ಷ ರಾಜ್ಯದಲ್ಲಿ ಅತ್ಯಂತ ಬಲವಾದ ಶಕ್ತಿಯಾಗಿ ಬೆಳೆದು ನಿಲ್ಲುತ್ತಿತ್ತು. ಅಂದು ಮಾಡಿದ ಆ ತಪ್ಪಿನಿಂದಾಗಿಯೇ ಇಂದು ಜೆಡಿಎಸ್ ಪಕ್ಷವು ಆರ್‌ಎಸ್‌ಎಸ್ ಹಾಗೂ ಬಿಜೆಪಿ ನಾಯಕರ ಮುಂದೆ ಸಂಪೂರ್ಣ ಶರಣಾಗಿ, ಕೈಕಟ್ಟಿ ನಿಲ್ಲುವ ಶೋಚನೀಯ ಸ್ಥಿತಿ ಬಂದೊದಗಿದೆ ಎಂದು ಅವರು ಚಾಟಿ ಬೀಸಿದ್ದಾರೆ.
ಶ್ರೀ ಕುಮಾರಣ್ಣ ಅವರೇ, ಮಾನ್ಯ ಮಾಜಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ಮೇಲೆ ನಿಮಗೆ ಈಗ ಎಲ್ಲಿಲ್ಲದ ಪ್ರೀತಿ, ಗೌರವ ಮತ್ತು ಮಮಕಾರ ಉಕ್ಕಿ ಹರಿಯುತ್ತಿರುವುದು ನೋಡಿ ನಮಗೆ ಬಹಳ ಖುಷಿ ತಂದಿದೆ. ಅಂದು ಸಿದ್ದರಾಮಯ್ಯನವರು ಜಾತ್ಯತೀತ ಜನತಾದಳದಲ್ಲಿದ್ದಾಗ ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿ, ಪಕ್ಷದಿಂದ ಹೊರಹಾಕುವ ಮುನ್ನ ಅವರ ಬಗ್ಗೆ ಇಷ್ಟೇ ಕಾಳಜಿ ವಹಿಸಿದ್ದರೆ, ಜಾತ್ಯತೀತ ಜನತಾದಳ ಪಕ್ಷ ಇಂದು ರಾಜ್ಯದಲ್ಲಿ ಇನ್ನಷ್ಟು ಬಲಿಷ್ಠವಾಗಿ ನೆಲೆಗೊಳ್ಳುತ್ತಿತ್ತು. ಹಾಗೆಯೇ, RSS ಮತ್ತು ಬಿಜೆಪಿಯೆದುರು ಕೈಕಟ್ಟಿ ನಿಲ್ಲುವ ದುಸ್ಥಿತಿ ನಿಮಗೆ ಬರುತ್ತಿರಲಿಲ್ಲ. ತಾವು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ನಾಯಕತ್ವದ ಸ್ಥಾನವನ್ನು ಪಡೆದುಕೊಂಡಿದ್ದೀರಿ. ಅದಕ್ಕೆ ಗೌರವ ಬರುವಂತೆ ನಿಮ್ಮ ನಡವಳಿಕೆ ಇರಲಿ ಎಂಬುದು ನಮ್ಮ ವೈಯಕ್ತಿಕ ಮನವಿ. ದಯವಿಟ್ಟು ಜನರು ದಡ್ಡರಲ್ಲ ಎಂಬುದನ್ನು ಅರಿತುಕೊಳ್ಳಿ. ನಿಮ್ಮ ಗೋಸುಂಬೆ ರಾಜಕಾರಣವನ್ನು ಬಿಟ್ಟು, ನೈಜವಾದ ರಾಜಕಾರಣ ಮಾಡಿ ಎಂದು ಮನವಿ ಮಾಡುತ್ತೇನೆ. @hd_kumaraswamy
— HC Balakrishna (@HC_Balakrishna) October 31, 2026
ನಾಯಕತ್ವದ ಘನತೆ ಕಾಯ್ದುಕೊಳ್ಳಲು ವೈಯಕ್ತಿಕ ಮನವಿ
ಎಚ್.ಡಿ. ಕುಮಾರಸ್ವಾಮಿ ಅವರು ಪ್ರಸ್ತುತ ರಾಜ್ಯ ಹಾಗೂ ಕೇಂದ್ರ ಮಟ್ಟದಲ್ಲಿ ಉನ್ನತ ರಾಜಕೀಯ ನಾಯಕತ್ವದ ಸ್ಥಾನದಲ್ಲಿದ್ದಾರೆ. ಆ ಹುದ್ದೆ ಮತ್ತು ಸ್ಥಾನಕ್ಕೆ ತಕ್ಕಂತೆ ಅವರ ನಡೆ-ನುಡಿಗಳು ಇರಬೇಕು ಎಂದು ಬಾಲಕೃಷ್ಣ ಒತ್ತಾಯಿಸಿದ್ದಾರೆ. ರಾಜಕಾರಣದಲ್ಲಿ ಹಿತಾಸಕ್ತಿಗೆ ತಕ್ಕಂತೆ ಬಣ್ಣ ಬದಲಾಯಿಸುವುದನ್ನು ಬಿಟ್ಟು ನೈಜ ಮತ್ತು ಪ್ರಾಮಾಣಿಕ ಹಾದಿಯಲ್ಲಿ ಸಾಗಬೇಕೆಂದು ಸಲಹೆ ನೀಡಿದ್ದಾರೆ.
“ಜನರು ದಡ್ಡರಲ್ಲ” ಎಂದ ಹೆಚ್.ಸಿ. ಬಾಲಕೃಷ್ಣ
ರಾಜ್ಯದ ಸಾರ್ವಜನಿಕರು ಹಾಗೂ ಮತದಾರರು ಪ್ರಬುದ್ಧರಾಗಿದ್ದು, ರಾಜಕಾರಣಿಗಳ ನಾಟಕೀಯ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. “ಜನರು ಎಂದಿಗೂ ದಡ್ಡರಲ್ಲ ಎಂಬುದನ್ನು ಕುಮಾರಸ್ವಾಮಿ ಅವರು ನೆನಪಿನಲ್ಲಿಡಬೇಕು” ಎಂದು ಬಾಲಕೃಷ್ಣ ಎಚ್ಚರಿಸಿದ್ದಾರೆ. ಇಂತಹ ತಾತ್ಕಾಲಿಕ ರಾಜಕೀಯ ಗಿಮಿಕ್‌ಗಳನ್ನು ಬಿಟ್ಟು ನೈಜವಾದ ಸಾರ್ವಜನಿಕ ಸೇವೆಯ ರಾಜಕಾರಣ ಮಾಡಲು ಅವರು ಮನವಿ ಮಾಡಿದ್ದಾರೆ.
ಸಿದ್ದರಾಮಯ್ಯಗೆ ಅಂದೇ ಗೌರವ ಕೊಟ್ಟಿದ್ದರೆ ಜೆಡಿಎಸ್ ಈ ಸ್ಥಿತಿಗೆ ತಲುಪುತ್ತಿರಲಿಲ್ಲ: ಕುಮಾರಸ್ವಾಮಿ ವಿರುದ್ಧ ಬಾಲಕೃಷ್ಣ ವಾಗ್ದಾಳಿ!ಕೋಟಿ ಕೋಟಿ ವಂಚನೆ ಕೇಸ್: ಶಿವಾನಂದ ನೀಲಣ್ಣನವರ್‌ಗೆ ಸೇರಿದ 427.16 ಕೋಟಿ ರೂ. ಆಸ್ತಿ ಇಡಿ ಜಪ್ತಿ!
