TOP NEWS
BJP Defamation Case High Court Reserves Verdict on Siddaramaiah and DK Shivakumar Petition

High Court: ಕಾಂಗ್ರೆಸ್ ಜಾಹೀರಾತು ವಿರುದ್ಧ ಬಿಜೆಪಿ ಮಾನನಷ್ಟ ಮೊಕದ್ದಮೆ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್!

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆ ವೇಳೆ ‘ಹಿಂದಿನ ಬಿಜೆಪಿ ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿದೆ’ ಎಂದು ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೆಪಿಸಿಸಿ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ (High Court) ಪೂರ್ಣಗೊಳಿಸಿದ್ದು, ಆದೇಶವನ್ನು ಕಾಯ್ದಿರಿಸಿದೆ. ಅಸಮಾಧಾನ ವ್ಯಕ್ತಪಡಿಸಿದ ಪೀಠ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ರಾಜಕೀಯ…

Read More
Former CM Siddaramaiah in Shopping Mood Crowd Throng for Selfies as He Buys Clothes at Mantri Mall

Siddaramaiah: ಶಾಪಿಂಗ್ ಮೂಡ್‌ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ: ಮಂತ್ರಿ ಮಾಲ್‌ನಲ್ಲಿ ಬಟ್ಟೆ ಖರೀದಿಸಿದ ಸಿದ್ದು ಜೊತೆ ಸೆಲ್ಫಿ ತಗೆದುಕೊಂಡ ಜನ!

ಬೆಂಗಳೂರು: ರಾಜಕೀಯ ಜಂಜಾಟಗಳಿಂದ ಕೊಂಚ ಬ್ರೇಕ್ ಪಡೆದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಇಂದು ಬೆಳಗ್ಗೆ ಪಕ್ಕಾ ಶಾಪಿಂಗ್ ಮೂಡ್‌ನಲ್ಲಿ ಕಾಣಿಸಿಕೊಂಡರು. ದೆಹಲಿ ಪ್ರವಾಸ ಮುಗಿಸಿ ನಿನ್ನೆ ತಡರಾತ್ರಿಯಷ್ಟೇ ಬೆಂಗಳೂರಿಗೆ ಹಿಂತಿರುಗಿದ ಅವರು, ಇಂದು ಮುಂಜಾನೆ ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿರುವ ಪ್ರಸಿದ್ಧ ಮಂತ್ರಿ ಮಾಲ್‌ಗೆ ದಿಢೀರ್ ಭೇಟಿ ನೀಡಿದರು. ಬೆಳಗಿನ ಜಾವದ ವಾಯು ವಿಹಾರಕ್ಕೆ (ಮಾರ್ನಿಂಗ್ ವಾಕ್) ಬೇಕಾದ ಟ್ರ್ಯಾಕ್ ಸೂಟ್ ಸೇರಿದಂತೆ ಕೆಲವು ಉಡುಪುಗಳನ್ನು ಖರೀದಿಸಲು ಅವರು ಮಾಲ್‌ಗೆ ಆಗಮಿಸಿದ್ದರು. ಸೆಲ್ಫಿಗೆ ಪೋಸ್‌ ನೀಡಿದ…

Read More
Education Portfolio Row Siddaramaiah targets Pralhad Joshi over Bilkis Bano case remarks

Siddaramaiah: ಜೋಶಿ ನೇಮಕದಿಂದ ಕನ್ನಡಿಗರು ತಲೆತಗ್ಗಿಸುವಂತಾಗಿದೆ!; ಧರ್ಮೇಂದ್ರ ಪ್ರಧಾನ್-ಪ್ರಲ್ಹಾದ್ ಜೋಶಿ ಇಬ್ಬರೂ ಆರ್‌ಎಸ್‌ಎಸ್ ಅವಳಿ ಜವಳಿ ಎಂದ ಸಿದ್ದರಾಮಯ್ಯ!

ಬೆಂಗಳೂರು: ದೇಶದ ಶಿಕ್ಷಣ ಸಚಿವರಾಗಿ ಕರ್ನಾಟಕದ ಸಂಸದರೊಬ್ಬರು ಅಧಿಕಾರ ಸ್ವೀಕರಿಸಿದ್ದಕ್ಕೆ ನಾವೆಲ್ಲರೂ ಹೆಮ್ಮೆಪಡಬೇಕಿತ್ತು, ಆದರೆ ಮಹಿಳಾ ಅತ್ಯಾಚಾರಿಗಳನ್ನು ಸಮರ್ಥಿಸಿಕೊಂಡಿದ್ದ ಪ್ರಲ್ಹಾದ್ ಜೋಶಿ ಅವರಿಗೆ ಈ ಮಹತ್ವದ ಜವಾಬ್ದಾರಿ ನೀಡಿರುವುದು ಇಡೀ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದೆ ಎಂದು ಸಿದ್ದರಾಮಯ್ಯ (Siddaramaiah) ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಪ್ರಲ್ಹಾದ್ ಜೋಶಿ ಅವರ ವಿರುದ್ಧ ನೇರ ವಾಗ್ದಾಳಿ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಹಾಗೂ ನೂತನ ಶಿಕ್ಷಣ…

Read More
Pradeep eshwaremotional about kempegowda Jayanti incident in front of Siddaramaiah

Pradeep Eshwar: ಚಿಕ್ಕಬಳ್ಳಾಪುರ ಕೆಂಪೇಗೌಡ ಜಯಂತಿ ಗಲಾಟೆ ಮುನ್ನಲೆಗೆ: ಸಿದ್ದರಾಮಯ್ಯ ಎದುರು ಶಾಸಕ ಪ್ರದೀಪ್ ಈಶ್ವರ್ ಕಣ್ಣೀರು

ಬೆಂಗಳೂರು: ಕೆಂಪೇಗೌಡ ಜಯಂತಿ ಕಾರ್ಯಕ್ರಮದ ವೇಳೆ ನಡೆದ ಗಲಾಟೆಯ ಸರಣಿ ಬೆಳವಣಿಗೆಗಳು ಈಗ ರಾಜಕೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿವೆ. ಘಟನೆಗೆ ಸಂಬಂಧಿಸಿದಂತೆ ಒಂದು ಕಡೆ ಆಡಳಿತ ಪಕ್ಷದ ಶಾಸಕ ಪ್ರದೀಪ್‌ ಈಶ್ವರ್‌ (Pradeep Eshwar) ಕಣ್ಣೀರು ಹಾಕಿದ್ದರೆ, ಮತ್ತೊಂದೆಡೆ ವಿರೋಧ ಪಕ್ಷಗಳು ಶಾಸಕರ ವಿರುದ್ಧವೇ ಪೊಲೀಸ್ ಮೆಟ್ಟಿಲೇರಿವೆ. ಚಿಕ್ಕಬಳ್ಳಾಪುರದ ಕನ್ನಡ ಭವನದಲ್ಲಿ ನಡೆದ ಈ ಹೈಡ್ರಾಮಾದ ಸಂಪೂರ್ಣ ವಿವರ ಇಲ್ಲಿದೆ. ಸಿದ್ದರಾಮಯ್ಯ ಎದುರು ಕಣ್ಣೀರು ಹಾಕಿದ ಶಾಸಕ ಪ್ರದೀಪ್ ಈಶ್ವರ್ ಕಾರ್ಯಕ್ರಮದಲ್ಲಿ ನಡೆದ ಭಾರಿ ಗದ್ದಲದ ಹಿನ್ನೆಲೆಯಲ್ಲಿ…

Read More
Satish jarkiholi reaction about sidelining Siddaramaiah in congress

Satish Jarkiholi: ಸಿದ್ದರಾಮಯ್ಯ ಸೈಡ್‌ಲೈನ್ ಚರ್ಚೆ: ಸಚಿವ ಸತೀಶ್ ಜಾರಕಿಹೊಳಿ ಮಾರ್ಮಿಕ ವಿಶ್ಲೇಷಣೆ!

ಬೆಂಗಳೂರು: ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ನಲ್ಲಿ ಮೂಲೆಗುಂಪಾಗುತ್ತಿದ್ದಾರೆಯೇ ಎಂಬ ಚರ್ಚೆಗೆ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರು ವಿಶಿಷ್ಟವಾಗಿ ಪ್ರತಿಕ್ರಿಯಿಸಿದ್ದಾರೆ. ಪ್ರಸ್ತುತ ರಾಜಕೀಯದ ವೇಗವನ್ನು ಓಡುತ್ತಿರುವ ರೈಲಿಗೆ ಹೋಲಿಸಿರುವ ಅವರು, ರಾಜಕಾರಣದಲ್ಲಿ ಸದಾ ಸಕ್ರಿಯರಾಗಿರದಿದ್ದರೆ ಜನರೇ ಮರೆತುಬಿಡುತ್ತಾರೆ ಎಂದು ಹೇಳಿದ್ದಾರೆ. ವೇಗವಾಗಿ ಓಡದಿದ್ದರೆ ಟ್ರೈನ್ ಮಿಸ್ ಆಗುತ್ತೆ! ಸಿದ್ದರಾಮಯ್ಯ ಅವರ ಸದ್ಯದ ರಾಜಕೀಯ ಪರಿಸ್ಥಿತಿಯ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸತೀಶ್ ಜಾರಕಿಹೊಳಿ, “ಇವತ್ತಿನ ದಿನಗಳಲ್ಲಿ ರಾಜಕೀಯ…

Read More
Congress CPL meeting dk shivakumar meets siddaramaiah

Congress: ಪರಿಷತ್ ಚುನಾವಣೆ ತಲ್ಲಣ: ಸಿಎಲ್‌ಪಿ ಸಭೆಗೂ ಮುನ್ನ ಸಿದ್ದರಾಮಯ್ಯ ನಿವಾಸಕ್ಕೆ ಸಿಎಂ ಡಿಕೆಶಿ ದಿಢೀರ್ ಭೇಟಿ, ರಹಸ್ಯ ಸಮಾಲೋಚನೆ!

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ರೋಮಾಂಚನ ಮೂಡಿಸಿರುವ ವಿಧಾನ ಪರಿಷತ್ ಚುನಾವಣೆಯ ಮುಹೂರ್ತ ಹತ್ತಿರವಾಗುತ್ತಿದ್ದಂತೆಯೇ, ಆಡಳಿತಾರೂಢ ಕಾಂಗ್ರೆಸ್ (Congress) ಪಾಳಯದಲ್ಲಿ ತಂತ್ರ-ಪ್ರತಿತಂತ್ರಗಳ ಜಿದ್ದಾಜಿದ್ದಿ ತಾರಕಕ್ಕೇರಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ನಿರ್ಣಾಯಕ ಸಭೆ ಆರಂಭವಾಗುವ ಕೆಲವೇ ಗಂಟೆಗಳ ಮುಂಚೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸ ‘ಕಾವೇರಿ’ಗೆ ಸರ್ಪ್ರೈಸ್ ಭೇಟಿ ನೀಡಿರುವುದು ಭಾರಿ ರಾಜಕೀಯ ಸಂಚಲನ ಮೂಡಿಸಿದೆ. ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳ ನಡುವೆ ನಡೆದಿರುವ ಈ ಆಂತರಿಕ ಮಾತುಕತೆ…

Read More
Siddaramaiahs ahinda team facing big problem

Siddaramaiah: ಸಿದ್ದರಾಮಯ್ಯ ಅವರ ‘ಅಹಿಂದ’ ಭದ್ರಕೋಟೆಗೆ ಬಿರುಕು: ಮೂಲ ಕಾಂಗ್ರೆಸ್ಸಿಗರ ಪ್ರಾಬಲ್ಯಕ್ಕೆ ನಾಯಕರು ಕಂಗಾಲು!

ಬೆಂಗಳೂರು: ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದಶಕಗಳ ಕಾಲ ಬೆನ್ನೆಲುಬಾಗಿ ನಿಂತಿದ್ದ ‘ಅಹಿಂದ’ (ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಮತ್ತು ದಲಿತ) ಒಕ್ಕೂಟದಲ್ಲಿ ಇದೀಗ ಭಾರಿ ಬಿರುಕು ಕಾಣಿಸಿಕೊಂಡಿದೆ. ಸಿದ್ದರಾಮಯ್ಯ (Siddaramaiah) ಅವರ ಬಣದಲ್ಲೇ ಗುರುತಿಸಿಕೊಂಡು ರಾಜಕೀಯವಾಗಿ ಮುಂಚೂಣಿಯಲ್ಲಿದ್ದ ಪ್ರಮುಖ ಅಹಿಂದ ಮುಖಂಡರು, ಪ್ರಸ್ತುತ ರಾಜಕಾರಣದಲ್ಲಿ ತಮಗೆ ಸೂಕ್ತ ಮನ್ನಣೆ ಹಾಗೂ ಅಧಿಕಾರದ ಸ್ಥಾನಮಾನಗಳು ಸಿಗುತ್ತಿಲ್ಲ ಎಂಬ ಕಾರಣಕ್ಕೆ ತೀವ್ರ ಬೇಸರಗೊಂಡಿದ್ದಾರೆ. ಈ ನಾಯಕರು ಸಿದ್ದು ಬಣದಿಂದ ದೂರ ಸರಿಯುತ್ತಿರುವುದು ಮತ್ತು ಪರ್ಯಾಯ ದಾರಿಗಳತ್ತ…

Read More