TOP NEWS

Business: ಕೇವಲ ₹5,600 ಹೂಡಿಕೆಯಿಂದ ₹420 ಕೋಟಿ ಸಾಮ್ರಾಜ್ಯ ಕಟ್ಟಿ ಬೆಳೆಸಿದ ಕನಿಕಾ ಟೇಕ್ರಿವಾಲ್

Know more about business lady Kanika Tekriwal is the founder of JetSetGo

ಮುಂಬೈ: ಕೇವಲ ₹5,600 ರಷ್ಟು ಸಣ್ಣ ಮೊತ್ತದಿಂದ ₹420 ಕೋಟಿ ಮೌಲ್ಯದ ಉದ್ಯಮ (Business) ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದ ಜಿಇಟಿ-ಸೆಟ್-ಗೋ (JetSetGo) ಸಂಸ್ಥೆಯ ಸಂಸ್ಥಾಪಕಿ ಹಾಗೂ ಸಿಇಒ ಕನಿಕಾ ಟೇಕ್ರಿವಾಲ್ ಅವರ ಜೀವನ ಪಯಣ ಎಲ್ಲರಿಗೂ ದೊಡ್ಡ ಪ್ರೇರಣೆಯಾಗಿದೆ.

2021 ರಲ್ಲಿ ಭಾರತದ ಅತ್ಯಂತ ಶ್ರೀಮಂತ ಸ್ವಯಂ-ನಿರ್ಮಿತ ಉದ್ಯಮಿ ಮಹಿಳೆಯರ ಸಾಲಿನಲ್ಲಿ ಗುರುತಿಸಿಕೊಂಡಿದ್ದ ಕನಿಕಾ, ಶಾರ್ಕ್ ಟ್ಯಾಂಕ್ ಇಂಡಿಯಾ ಸೀಸನ್ 5 ರಲ್ಲೂ ಕಾಣಿಸಿಕೊಂಡು ಗಮನ ಸೆಳೆದಿದ್ದರು.
ಇಷ್ಟೇ ಅಲ್ಲದೆ, ತಮ್ಮ ಅಪಾರ ಸಾಧನೆಯಿಂದಾಗಿ ಕನಿಕಾ ಅವರು 2016 ಮತ್ತು 2017 ರ ಫೋರ್ಬ್ಸ್‌ನ ‘30 ಅಂಡರ್ 30’ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದರು. ಮಾರ್ವಾಡಿ ಕುಟುಂಬದಲ್ಲಿ ಜನಿಸಿದ ಕನಿಕಾ ಅವರಿಗೆ ಬಾಲ್ಯದಿಂದಲೂ ಹಣಕಾಸು ಮತ್ತು ಉದ್ಯಮ ಕ್ಷೇತ್ರಗಳಲ್ಲಿ ತೀವ್ರ ಆಸಕ್ತಿಯಿತ್ತು. ಆದರೆ ಸಾಂಪ್ರದಾಯಿಕ ಕುಟುಂಬದ ಹಿನ್ನೆಲೆಯಿಂದ ಬಂದಿದ್ದರಿಂದ, ಚೆನ್ನಾಗಿ ಓದಿ ಶ್ರೀಮಂತ ಕುಟುಂಬಕ್ಕೆ ಸೊಸೆಯಾಗಿ ಹೋಗಬೇಕೆಂಬ ಅಪೇಕ್ಷೆ ಕುಟುಂಬಸ್ಥರದಾಗಿತ್ತು.

ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದ ಮಹಿಳೆ

ಎಲ್ಲಾ ಅಡೆತಡೆಗಳ ನಡುವೆಯೂ ಉದ್ಯಮಶೀಲತೆಯ ಕನಸು ಕಂಡಿದ್ದ ಕನಿಕಾ, ತಮ್ಮ 22 ನೇ ವಯಸ್ಸಿನಲ್ಲಿ ಪ್ರಾಣಾಪಾಯ ತಂದೊಡ್ಡುವ ಕ್ಯಾನ್ಸರ್ ರೋಗಕ್ಕೆ ತುತ್ತಾದರು. ಆದರೆ ಮಾರಕ ಕಾಯಿಲೆಗೂ ಜಗ್ಗದ ಅವರು, ಅಸಾಧಾರಣ ಮನೋಬಲದಿಂದ ಕ್ಯಾನ್ಸರ್ ಸೋಲಿಸಿ ಹೊರಬಂದರು. ಸವಾಲುಗಳನ್ನು ಮೆಟ್ಟಿ ನಿಂತು ಸಾಧಿಸಿದ ಅವರ ಈ ಸಾಧನೆ, ದೃಢ ಸಂಕಲ್ಪ ಹಾಗೂ ಶ್ರಮವಿದ್ದರೆ ಎಂತಹ ಕಠಿಣ ಪರಿಸ್ಥಿತಿಯಲ್ಲೂ ವಿಧಿಯನ್ನೇ ಬದಲಾಯಿಸಬಹುದು ಎಂಬುದಕ್ಕೆ ಜೀವಂತ ನಿದರ್ಶನವಾಗಿದೆ.

ಇದನ್ನೂ ಓದಿ: ಜುಲೈ 31ರೊಳಗೆ ಐಟಿಆರ್ ಸಲ್ಲಿಸದಿದ್ದರೆ ಜೇಬಿಗೆ ಕತ್ತರಿ: ಗಡುವು ಮೀರಿದರೆ ಕಾಯ್ದಿದೆ ಭಾರಿ ದಂಡ ಮತ್ತು ಜೈಲು ಶಿಕ್ಷೆಯ ಎಚ್ಚರಿಕೆ!

Leave a Reply

Your email address will not be published. Required fields are marked *