ಹೈದರಾಬಾದ್: ಭಾರತೀಯ ಶಾಸ್ತ್ರೀಯ ಸಂಗೀತ ಲೋಕದ ಧ್ರುವತಾರೆ, ಭಾರತ ರತ್ನ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜೀವನಾಧಾರಿತ ಬಯೋಪಿಕ್ (Biopic) ಸಿನಿಮಾ ಸ್ಯಾಂಡಲ್‌ವುಡ್ ಹಾಗೂ (Rashmika Mandanna) ಟಾಲಿವುಡ್‌ನಲ್ಲಿ ಕಳೆದ ಕೆಲವು ತಿಂಗಳುಗಳಿಂದ ಭಾರಿ ಸದ್ದು ಮಾಡುತ್ತಿದೆ. ಈ ಬಹುನಿರೀಕ್ಷಿತ ಚಿತ್ರಕ್ಕೆ ಸಂಬಂಧಿಸಿದಂತೆ ಈಗ ಒಂದು ರೋಮಾಂಚನಕಾರಿ ಅಪ್‌ಡೇಟ್ ಹೊರಬಿದ್ದಿದ್ದು, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಹೆಸರು ಮುಂಚೂಣಿಗೆ ಬಂದಿದೆ. ಈ ಐತಿಹಾಸಿಕ ಪಾತ್ರದಲ್ಲಿ ನಟಿಸಲು ರಶ್ಮಿಕಾ ಅವರನ್ನು ಆಯ್ಕೆ ಮಾಡಲಾಗಿದೆ ಎಂಬ ಸುದ್ದಿ ಸಿನಿ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.
ರಶ್ಮಿಕಾ ಟೆಸ್ಟ್ ಲುಕ್ ಫೈನಲ್?
ಟಾಲಿವುಡ್‌ನ ಪ್ರಮುಖ ಮಾಧ್ಯಮವೊಂದರ ವರದಿಯ ಪ್ರಕಾರ, ಖ್ಯಾತ ಕ್ರೀಡಾ ಆಧಾರಿತ ಸಿನಿಮಾ ‘ಜೆರ್ಸಿ’ ಖ್ಯಾತಿಯ ನಿರ್ದೇಶಕ ಗೌತಮ್ ತಿನ್ನನೂರಿ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಈ ಚಿತ್ರದಲ್ಲಿ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಪಾತ್ರವನ್ನು ನಿರ್ವಹಿಸಲು ರಶ್ಮಿಕಾ ಮಂದಣ್ಣ ಅವರನ್ನು ಅಂತಿಮಗೊಳಿಸಲಾಗಿದೆ ಎನ್ನಲಾಗಿದೆ. ಇದಕ್ಕಾಗಿಯೇ ಇತ್ತೀಚೆಗೆ ರಶ್ಮಿಕಾ ಅವರ ನಿವಾಸದಲ್ಲೇ ಒಂದು ರಹಸ್ಯ ಲುಕ್ ಟೆಸ್ಟ್ (Look Test) ಕೂಡ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಚಿತ್ರತಂಡದಿಂದ ಇನ್ನು ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.
ವಾಸ್ತವವಾಗಿ, ಈ ಬಯೋಪಿಕ್‌ನ ನಾಯಕಿ ಯಾರು ಎಂಬ ವಿಷಯದ ಸುತ್ತ ಸುದೀರ್ಘ ಕಾಲದಿಂದ ಭಾರಿ ಲೆಕ್ಕಾಚಾರಗಳು ನಡೆಯುತ್ತಿವೆ. ಆರಂಭದಲ್ಲಿ ಈ ಪಾತ್ರಕ್ಕೆ ನಟಿ ಸಾಯಿ ಪಲ್ಲವಿ ಅವರನ್ನು ಆಯ್ಕೆ ಮಾಡಲಾಗಿತ್ತು ಎಂಬ ವರದಿಗಳಿದ್ದವು. ಸಾಯಿ ಪಲ್ಲವಿ ಅವರು ಈಗಾಗಲೇ ಚಿತ್ರಕ್ಕೆ ಸಹಿ ಹಾಕಿದ್ದು, ಕರ್ನಾಟಿಕ್ ಕ್ಲಾಸಿಕಲ್ ಸಂಗೀತದ ತರಬೇತಿಯನ್ನೂ ಪಡೆಯುತ್ತಿದ್ದಾರೆ ಎಂದು ಬಾಲಿವುಡ್ ಮಾಧ್ಯಮಗಳು ವರದಿ ಮಾಡಿದ್ದವು. ನಿರ್ದೇಶಕರು ಈ ವಿಷಯದ ಬಗ್ಗೆ ಸಂಶೋಧನೆ ನಡೆಸುತ್ತಿದ್ದರೆ, ಸಾಯಿ ಪಲ್ಲವಿ ಅವರು ಸುಬ್ಬುಲಕ್ಷ್ಮಿ ಅವರ ಹಳೆಯ ವೀಡಿಯೋಗಳನ್ನು ನೋಡಿ ಅವರ ಹಾವಭಾವಗಳನ್ನು ಕಲಿಯುತ್ತಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿದ್ದವು.
ಆದರೆ, ಕೆಲ ದಿನಗಳ ನಂತರ ಈ ಪ್ರಾಜೆಕ್ಟ್‌ನಲ್ಲಿ ದೊಡ್ಡ ಬದಲಾವಣೆಯಾಗಿದ್ದು, ಸಾಯಿ ಪಲ್ಲವಿ ಜಾಗಕ್ಕೆ ಸಪ್ತ ಸಾಗರದಾಚೆ ಎಲ್ಲೋ ಖ್ಯಾತಿಯ ಕನ್ನಡದ ನಟಿ ರುಕ್ಮಿಣಿ ವಸಂತ್ ಅವರ ಹೆಸರು ಕೇಳಿಬಂದಿತ್ತು. ಜೂನಿಯರ್ ಎನ್‌ಟಿಆರ್ ಜೊತೆ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಸಜ್ಜಾಗುತ್ತಿರುವ ರುಕ್ಮಿಣಿ ಅವರನ್ನೇ ಈ ಗಾಯಕಿ ಪಾತ್ರಕ್ಕೆ ಕರೆತರಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಈಗ ದಿಢೀರನೆ ರಶ್ಮಿಕಾ ಮಂದಣ್ಣ ಅವರ ಹೆಸರು ಜೋರಾಗಿ ಕೇಳಿಬರುತ್ತಿರುವುದರಿಂದ ಪ್ರೇಕ್ಷಕರಲ್ಲಿ ಗೊಂದಲ ಹಾಗೂ ಕುತೂಹಲ ಎರಡೂ ಹೆಚ್ಚಾಗಿದೆ.
ಎಂ.ಎಸ್. ಸುಬ್ಬುಲಕ್ಷ್ಮಿ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಭಾರತದ ಅತ್ಯುನ್ನತ ಮ್ಯೂಸಿಕ್ ಐಕಾನ್ ಆಗಿದ್ದಾರೆ. ಇಂತಹ ಶ್ರೇಷ್ಠ ಗಾಯಕಿಯ ಪಾತ್ರವನ್ನು ಯಾರು ನಿಭಾಯಿಸಲಿದ್ದಾರೆ ಎಂಬುದು ಇಡೀ ದೇಶದ ಗಮನ ಸೆಳೆದಿದೆ. ಮತ್ತೊಂದೆಡೆ, ರಶ್ಮಿಕಾ ಮಂದಣ್ಣ ಅವರು ತಮ್ಮ ಮುಂಬರುವ ಚಿತ್ರ ‘ಕಾಕ್‌ಟೈಲ್ 2’ ಸಿನಿಮಾದ ಟ್ರೈಲರ್‌ಗೆ ಸಿಗುತ್ತಿರುವ ಭರ್ಜರಿ ರೆಸ್ಪಾನ್ಸ್‌ನಿಂದಾಗಿ ಸಖತ್ ಖುಷಿಯಲ್ಲಿದ್ದಾರೆ. ತಮ್ಮ ಸಿನಿಮಾಗೆ ಅಪಾರ ಪ್ರೀತಿ ತೋರುತ್ತಿರುವ ಅಭಿಮಾನಿಗಳಿಗೆ ಅವರು ಸೋಷಿಯಲ್ ಮೀಡಿಯಾ ಮೂಲಕ ಧನ್ಯವಾದ ಅರ್ಪಿಸಿದ್ದಾರೆ. ಸದ್ಯಕ್ಕೆ ಸುಬ್ಬುಲಕ್ಷ್ಮಿ ಬಯೋಪಿಕ್ ಜೊತೆ ಹಲವು ಸ್ಟಾರ್ ನಟಿಯರ ಹೆಸರುಗಳು ತಳುಕು ಹಾಕಿಕೊಳ್ಳುತ್ತಿದ್ದು, ನಿರ್ಮಾಪಕರು ಯಾರ ಹೆಸರನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ ಎಂದು ಚಿತ್ರರಂಗ ಕಾಯುತ್ತಿದೆ.
ಇದನ್ನೂ ಓದಿ: ನಟಿ ಜಾನ್ವಿ ಕಪೂರ್ ಖಾಸಗಿ ಚಾಟ್ ವೈರಲ್: ರಾಮ್ ಚರಣ್ ನಟನೆಯ ‘ಪೆದ್ದಿ’ ಚಿತ್ರೀಕರಣದ ವೇಳೆ ತಕರಾರು?
