TOP NEWS

Trisha: ತಮಿಳುನಾಡು ರಾಜಕೀಯದಲ್ಲಿ ವಿಜಯ್ ‘ದರ್ಬಾರ್’: ಗೆಲುವಿನ ಸಂಭ್ರಮದ ನಡುವೆ ತ್ರಿಶಾ ಜೊತೆಗಿನ ಮದುವೆ ವದಂತಿಗಳ ಹವಾ!

Will trisha Krishnan and vijay get married soon

ಚೆನ್ನೈ: ತಮಿಳುನಾಡು ಚುನಾವಣಾ ಕಣದಲ್ಲಿ 108ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆದ್ದಿರುವ ದಳಪತಿ ವಿಜಯ್ ಅವರ ‘ಟಿವಿಕೆ’ ಪಕ್ಷ, ಅಧಿಕಾರ ಹಿಡಿಯುವ ಅಂಚಿನಲ್ಲಿದೆ. ಶಾಸಕರಾಗಿ ಆಯ್ಕೆಯಾಗಿರುವ ವಿಜಯ್ ಶೀಘ್ರದಲ್ಲೇ ಮುಖ್ಯಮಂತ್ರಿಯಾಗುವ ಸಾಧ್ಯತೆಗಳಿದ್ದು, ಸರ್ಕಾರ ರಚನೆಗೆ ಬೇಕಾದ ಉಳಿದ 10 ಶಾಸಕರ ಬೆಂಬಲ ಪಡೆಯುವ ಕಸರತ್ತು ಆರಂಭವಾಗಿದೆ. ಈ ರಾಜಕೀಯ ಸಂಚಲನದ ನಡುವೆಯೇ, ನಟ ವಿಜಯ್ ಹಾಗೂ ನಟಿ ತ್ರಿಶಾ (Trisha) ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿವೆ.

ತಿರುಪತಿ ಭೇಟಿ ಮತ್ತು ಮದುವೆ ಸುದ್ದಿಗೆ ಪುಷ್ಟಿ: ನಟಿ ತ್ರಿಶಾ ಅವರು ತಮ್ಮ ಜನ್ಮದಿನದ ಅಂಗವಾಗಿ ಇತ್ತೀಚೆಗೆ ತಿರುಪತಿಗೆ ಭೇಟಿ ನೀಡಿದ್ದರು. ಇದು ವಿಜಯ್ ಅವರ ಚುನಾವಣಾ ಗೆಲುವಿಗಾಗಿ ಅವರು ಹೊತ್ತಿದ್ದ ಹರಕೆ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೇ, ಫಲಿತಾಂಶ ಪ್ರಕಟವಾಗುತ್ತಿದ್ದಂತೆ ತ್ರಿಶಾ ಅವರು ವಿಜಯ್ ನಿವಾಸಕ್ಕೆ ಭೇಟಿ ನೀಡಿದ್ದು ಕುತೂಹಲ ಮೂಡಿಸಿದೆ. ಹಲವು ಸೆಲೆಬ್ರಿಟಿಗಳು ತ್ರಿಶಾಗೆ ಹುಟ್ಟುಹಬ್ಬದ ಶುಭಾಶಯ ಕೋರುವಾಗ “ನಿಮಗೆ ಈ ಬಾರಿ ಅತ್ಯಂತ ವಿಶೇಷವಾದ ಉಡುಗೊರೆ ಲಭಿಸಿದೆ” ಎಂದು ಮಾರ್ಮಿಕವಾಗಿ ಕಮೆಂಟ್ ಮಾಡಿರುವುದು ಇಬ್ಬರ ನಡುವಿನ ಬಾಂಧವ್ಯದ ಸುದ್ದಿಗೆ ಮತ್ತಷ್ಟು ರೆಕ್ಕೆಪುಕ್ಕ ನೀಡಿದೆ.

ಚಿತ್ರರಂಗದಿಂದ ದೂರ ಉಳಿಯಲು ನಿರ್ಧರಿಸಿದರೇ ತ್ರಿಶಾ? ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ತ್ರಿಶಾ, ಸದ್ಯ ಸೂರ್ಯ ಅಭಿನಯದ ‘ಕರುಪ್’ ಚಿತ್ರದ ನಂತರ ಹೊಸದಾಗಿ ಯಾವುದೇ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಅಜಿತ್ ಅವರ ‘ವಿದಾಮುಯರ್ಚಿ’ ಹಾಗೂ ಕಮಲ್ ಹಾಸನ್ ಅವರ ‘ಥಗ್ ಲೈಫ್’ ಅಂತಹ ದೊಡ್ಡ ಪ್ರಾಜೆಕ್ಟ್‌ಗಳ ನಂತರ ನಟಿ ಚಿತ್ರರಂಗದಿಂದ ಬಿಡುವು ಪಡೆಯುತ್ತಿರುವುದು ಅವರ ಮದುವೆಯ ತಯಾರಿಗಾಗಿಯೇ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ. ವಿಜಯ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಈ ಜೋಡಿ ಮದುವೆಯಾಗಲಿದ್ದಾರೆ ಎಂಬುದು ಈ ಚರ್ಚೆಯ ಸಾರಾಂಶ.

ಕುಟುಂಬದವರಿಂದಲೇ ಸಿಕ್ಕಿತೇ ಸುಳಿವು? ವಿಜಯ್ ಮತ್ತು ತ್ರಿಶಾ ಮದುವೆಯ ಕುರಿತಾದ ವಿಡಿಯೋವೊಂದಕ್ಕೆ ತ್ರಿಶಾ ಅವರ ತಾಯಿ ಲೈಕ್ ಮಾಡಿರುವುದು ಅಭಿಮಾನಿಗಳ ಗಮನ ಸೆಳೆದಿದೆ. ಸದ್ಯಕ್ಕೆ ಈ ವಿಷಯದ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲವಾದರೂ, ತ್ರಿಶಾ ಯಾವುದೇ ಹೊಸ ಸಿನೆಮಾಗಳಿಗೆ ಸಹಿ ಹಾಕದಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ದಳಪತಿ ವಿಜಯ್ ಅವರು ಸಿಎಂ ಪಟ್ಟ ಅಲಂಕರಿಸಿದ ನಂತರ ಈ ಸ್ಟಾರ್ ಜೋಡಿ ಸಪ್ತಪದಿ ತುಳಿಯಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಮದುವೆ ಆಗದೇ ಇರೋದೇಕೆ ಶಕ್ತಿಮಾನ್‌? ಇಲ್ಲಿದೆ ರಹಸ್ಯ

Leave a Reply

Your email address will not be published. Required fields are marked *