ಅಮೆರಿಕ: ಪನಾಮದ (Panama) ಪ್ರಮುಖ ಸಾರಿಗೆ ಮಾರ್ಗವಾದ ‘ಬ್ರಿಡ್ಜ್ ಆಫ್ ದಿ ಅಮೆರಿಕಾಸ್’ ಸೇತುವೆಯ ಬಳಿ ಇರುವ ಬಲ್ಬೋವಾ ತೈಲ ಟ್ಯಾಂಕ್ ಘಟಕದಲ್ಲಿ ಸೋಮವಾರ ಸಂಜೆ ಭೀಕರ ಬೆಂಕಿ ಅವಘಡ ಸಂಭವಿಸಿದೆ. ಬೆಂಕಿ ಹರಡಿದ ಬೆನ್ನಲ್ಲೇ ತೈಲ ಟ್ಯಾಂಕರ್‌ಗಳು ಅತಿ ದೊಡ್ಡ ಶಬ್ದದೊಂದಿಗೆ ಸ್ಫೋಟಗೊಂಡಿದ್ದು, ದುರಂತದಲ್ಲಿ ಹಲವರು ಗಾಯಗೊಂಡಿದ್ದಾರೆ. ಓರ್ವ ವ್ಯಕ್ತಿ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಎದುರಾಗಿದೆ.
ವಿಡಿಯೋ ವೈರಲ್
ಈ ಸ್ಫೋಟದ ಭೀಕರತೆ ಎಷ್ಟಿತ್ತೆಂದರೆ, ಬೆಂಕಿಯ ಜ್ವಾಲೆಗಳು ರಸ್ತೆಯ ಮೇಲೆಯೇ ಆವರಿಸಿದ್ದವು. ಇದನ್ನು ಕಂಡ ವಾಹನ ಸವಾರರು ಜೀವ ಉಳಿಸಿಕೊಳ್ಳಲು ವಾಹನಗಳನ್ನು ಬಿಟ್ಟು ಓಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಸುರಕ್ಷತೆಯ ದೃಷ್ಟಿಯಿಂದ 1,654 ಮೀಟರ್ ಉದ್ದದ ಈ ಬೃಹತ್ ಸೇತುವೆಯನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದಾರೆ.
Shocking video. A tanker blast near the Bridge of the Americas in Panama City led to a major fire that spread to at least two additional storage units at the Balboa tank facility. Several people are reportedly injured in the fire. pic.twitter.com/mwqg7Uce6u
— Aditya Raj Kaul (@AdityaRajKaul) April 7, 2026
ಜಾಗತಿಕ ತೈಲ ಮಾರುಕಟ್ಟೆಗೆ ಆತಂಕ ಈ ಸೇತುವೆಯು ಪನಾಮ ಕಾಲುವೆಯ ಪೆಸಿಫಿಕ್ ಪ್ರವೇಶ ದ್ವಾರದಲ್ಲಿದ್ದು, ವಿಶ್ವದ ವ್ಯಾಪಾರ ವಹಿವಾಟಿಗೆ ಇದು ಅತ್ಯಂತ ಮುಖ್ಯವಾದ ಮಾರ್ಗವಾಗಿದೆ. ಇತ್ತೀಚಿನ ಇರಾನ್ ಸಂಘರ್ಷದ ಕಾರಣದಿಂದಾಗಿ ಅಮೆರಿಕದ ಕಚ್ಚಾ ತೈಲವನ್ನು ಏಷ್ಯಾ ದೇಶಗಳಿಗೆ ಸಾಗಿಸಲು ಹೆಚ್ಚಿನವರು ಇದೇ ಮಾರ್ಗವನ್ನು ಅವಲಂಬಿಸಿದ್ದರು. ಈಗ ಸಂಭವಿಸಿರುವ ಈ ಅವಘಡ ಜಾಗತಿಕ ತೈಲ ಪೂರೈಕೆಯ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕ ಮೂಡಿಸಿದೆ.
ಸದ್ಯ ಸ್ಫೋಟಗೊಂಡ ಜಾಗದಲ್ಲಿ ಬೆಂಕಿ ನಂದಿಸುವ ಕಾರ್ಯಾಚರಣೆ ಚುರುಕಾಗಿ ನಡೆಯುತ್ತಿದೆ. ಸೇತುವೆಯ ರಚನೆಗೆ ಯಾವುದೇ ಹಾನಿಯಾಗಿದೆಯೇ ಎಂಬುದನ್ನು ತಜ್ಞರ ತಂಡ ಪರಿಶೀಲಿಸುತ್ತಿದೆ. ಸೇತುವೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಖಚಿತವಾದ ನಂತರವಷ್ಟೇ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಅಲ್ಲಿನ ಲೋಕೋಪಯೋಗಿ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: ಎಲ್‌ಡಿಎಫ್- ಯುಡಿಎಫ್ ಒಂದೇ ನಾಣ್ಯದ ಎರಡು ಮುಖಗಳು: ಮೋದಿ
