TOP NEWS

Gold Price: ಚಿನ್ನ, ಬೆಳ್ಳಿ ದರದಲ್ಲಿ ಭಾರೀ ಕುಸಿತ: ಯುದ್ಧದ ಕಾಲದ ಗರಿಷ್ಠ ಮಟ್ಟದಿಂದ ಕೆಳಗಿಳಿದ ಹಳದಿ ಲೋಹದ ಬೆಲೆ

Gold Price Drop Sharply From War-Time Highs Relief for Jewellery Buyers

ಬೆಂಗಳೂರು: ಬಂಗಾರ (Gold Price) ಕೊಳ್ಳಬೇಕು ಎಂದು ಕಾಯುತ್ತಿದ್ದವರಿಗೆ ಹಾಗೂ ಆಭರಣ ಪ್ರಿಯರಿಗೆ ಈಗ ಸ್ವಲ್ಪ ಸಮಾಧಾನ ತರುವ ಬೆಳವಣಿಗೆ ನಡೆದಿದೆ. ಮಾರುಕಟ್ಟೆಯಲ್ಲಿ ಚಿನ್ನದ ದರ ಸಾಕಷ್ಟು ಇಳಿಕೆಯಾಗಿದ್ದು, ಖರೀದಿದಾರರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಯುದ್ಧದ ವೇಳೆ ಪ್ರತಿ 10 ಗ್ರಾಂ ಚಿನ್ನದ ಬೆಲೆ ಬರೋಬ್ಬರಿ 1,80,000 ರೂಪಾಯಿಗಳ ದಾಖಲೆ ಗಡಿಯನ್ನು ಮುಟ್ಟಿತ್ತು. ಆದರೆ, ಸದ್ಯ ಆ ದರದಲ್ಲಿ ಗಮನಾರ್ಹ ಇಳಿಕೆಯಾಗಿರುವುದು ಜನರಿಗೆ ಕೊಂಚ ನಿರಾಳತೆ ನೀಡಿದೆ. ಅತ್ತ ಚಿನ್ನದ ಬೆಲೆ ತಗ್ಗಿರುವುದರ ಜೊತೆಗೆ ಬೆಳ್ಳಿಯ ದರವೂ ಶೇಕಡಾ 65ರಷ್ಟು ಕುಸಿತ ಕಂಡಿರುವುದು ಮಾರುಕಟ್ಟೆಯಲ್ಲಿ ದೊಡ್ಡ ಸುದ್ದಿಯಾಗಿದೆ.

ಹಣದುಬ್ಬರ ಏರಿಕೆ ಮತ್ತು (Gold Price) ಬಡ್ಡಿದರಗಳ ಲೆಕ್ಕಾಚಾರ

ಚಿನ್ನ ಮತ್ತು ಬೆಳ್ಳಿಯ ಬೆಲೆ ಹೀಗೆ ದಿಢೀರ್ ಇಳಿಯಲು ಜಾಗತಿಕ ಮಟ್ಟದ ಆರ್ಥಿಕ ವಿದ್ಯಮಾನಗಳೇ ಮುಖ್ಯ ಕಾರಣ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅದರಲ್ಲೂ ಅಮೆರಿಕದಲ್ಲಿ ಹಣದುಬ್ಬರ ಹೆಚ್ಚಾಗುತ್ತಿರುವುದು ಚಿನ್ನದ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರಿದೆ ಎಂದು ತಜ್ಞರು ಹೇಳಿದ್ದಾರೆ. ದೇಶದ ಆರ್ಥಿಕತೆಯಲ್ಲಿ ಹಣದುಬ್ಬರ ಮಿತಿ ಮೀರಿದಾಗ ಅದನ್ನು ಹತೋಟಿಗೆ ತರಲು ಬಡ್ಡಿದರಗಳ ಮೇಲೆ ಒತ್ತಡ ಉಂಟಾಗುತ್ತದೆ ಮತ್ತು ಅದಕ್ಕೆ ತಕ್ಕಂತೆ ಹೂಡಿಕೆ ಮಾರುಕಟ್ಟೆಗಳೂ ಬದಲಾಗುತ್ತವೆ.

ಬಾಂಡ್‌ಗಳತ್ತ ಹೂಡಿಕೆದಾರರ ಚಿತ್ತ

ಬಡ್ಡಿದರಗಳು ಏರುಮುಖವಾದಂತೆ ಹೂಡಿಕೆದಾರರ ನಿರ್ಧಾರಗಳೂ ಬದಲಾಗುತ್ತವೆ. ಚಿನ್ನವು ಯಾವುದೇ ನಿಗದಿತ ಬಡ್ಡಿ ಅಥವಾ ಲಾಭಾಂಶವನ್ನು ನೀಡದ ಆಸ್ತಿಯಾಗಿರುವುದರಿಂದ, ಬಡ್ಡಿದರ ಹೆಚ್ಚಾದಾಗ ಹೂಡಿಕೆದಾರರು ಚಿನ್ನದಲ್ಲಿರುವ ಹಣವನ್ನು ಹಿಂದಕ್ಕೆ ಪಡೆಯಲು ಮುಂದಾಗುತ್ತಾರೆ. ಚಿನ್ನವನ್ನು ಮಾರಾಟ ಮಾಡಿ, ನಿಶ್ಚಿತ ಹಾಗೂ ಸುರಕ್ಷಿತ ಆದಾಯ ತಂದುಕೊಡುವ ಬಾಂಡ್‌ಗಳಲ್ಲಿ ಹೂಡಿಕೆ ಮಾಡಲು ಹೆಚ್ಚಿನ ಆಸಕ್ತಿ ತೋರಿಸುತ್ತಾರೆ. ಹೂಡಿಕೆದಾರರು ಬಾಂಡ್‌ಗಳ ಕಡೆಗೆ ಹೆಚ್ಚು ಗಮನ ಹರಿಸುವುದರಿಂದ ಚಿನ್ನಕ್ಕೆ ಬೇಡಿಕೆ ಕುಗ್ಗುತ್ತದೆ ಮತ್ತು ಇದರ ಪರಿಣಾಮವಾಗಿ ಚಿನ್ನದ ಬೆಲೆಯೂ ಇಳಿಯುತ್ತದೆ ಎಂದು ತಜ್ಞರು ವಿವರಿಸಿದ್ದಾರೆ.

ಒಟ್ಟಾರೆಯಾಗಿ, ಯುದ್ಧದ ಸಂದರ್ಭದಲ್ಲಿ ಗಗನಮುಖಿಯಾಗಿದ್ದ ಚಿನ್ನದ ಬೆಲೆ ಈಗ ಇಳಿಕೆಯ ಹಾದಿಯಲ್ಲಿ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ದರಗಳು ಇನ್ನಷ್ಟು ಇಳಿಯಲಿವೆಯೇ ಅಥವಾ ಮತ್ತೆ ಏರಿಕೆಯಾಗಲಿವೆಯೇ ಎಂಬ ಕುತೂಹಲ ಗ್ರಾಹಕರು ಮತ್ತು ಹೂಡಿಕೆದಾರರಲ್ಲಿ ಮನೆಮಾಡಿದೆ.

ಇದನ್ನೂ ಓದಿ: MDR ಶುಲ್ಕ ಹೇರಿಕೆಗೆ ಮತ್ತೆ ಬ್ರೇಕ್: 2027ರ ವಿಧಾನಸಭಾ ಚುನಾವಣೆ ಮುಗಿಯುವವರೆಗೆ ವಿಳಂಬ?

Leave a Reply

Your email address will not be published. Required fields are marked *