Pralhad Joshi: ಇಂಧನ ಉತ್ಪಾದನೆಯಲ್ಲಿ ಭಾರತ ಮೂರನೇ ಅತಿ ದೊಡ್ಡ ರಾಷ್ಟ್ರ

India is 3rd largest country In fuel production says Pralhad Joshi

ನವದೆಹಲಿ: ಸೌರಶಕ್ತಿ, ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಭಾರತ ಮೂರನೇ ಅತಿ ದೊಡ್ಡ ರಾಷ್ಟ್ರವಾಗಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದ್ದಾರೆ.

23 ಲಕ್ಷ ಸೌರಶಕ್ತಿ ನೀರಾವರಿ ಪಂಪ್‌

2030ರ ವೇಳೆಗೆ 500 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಗುರಿಯತ್ತ ಸಾಗಿರುವ ಭಾರತದ ಇಂಧನ ಉತ್ಪಾದನೆ ಅಭೂತಪೂರ್ವ ವೇಗ ಪಡೆಯುತ್ತಿದೆ ಎಂದಿದ್ದಾರೆ. ಪ್ರಧಾನಮಂತ್ರಿ ಸೂರ್ಯಘರ್ ಮತ್ತು ಪಿಎಂ-ಕುಸುಮ್ ಯೋಜನೆಯಡಿಯಲ್ಲಿ 23 ಲಕ್ಷ ಸೌರಶಕ್ತಿ ನೀರಾವರಿ ಪಂಪ್‌ಗಳಾಗಿ ಪರಿವರ್ತನೆಗೊಂಡಿವೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತ ಪರಿವರ್ತನಾತ್ಮಕ ಪ್ರಗತಿಯನ್ನು ಸಾಧಿಸುತ್ತಿದೆ ಎಂದು ಶ್ಲಾಘಿಸಿದ್ದಾರೆ.

ಆತ್ಮನಿರ್ಭರ ಭಾರತಕ್ಕೆ ಒತ್ತು

ರಸಗೊಬ್ಬರ ಉದ್ಯಮದಲ್ಲಿ ಬಳಸುವ ಶೇಕಡ 28ರಷ್ಟು ಅಮೋನಿಯಾವನ್ನು ಹಸಿರು ಅಮೋನಿಯಾದೊಂದಿಗೆ ಬದಲಾಯಿಸಲು ತಯಾರಿ ನಡೆದಿದೆ. ಇದು ಆಮದು ಅವಲಂಬನೆಯನ್ನು ಪರಿಹರಿಸಿ, ಆತ್ಮನಿರ್ಭರ ಭಾರತವನ್ನು ಬಲಪಡಿಸುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: ಕೃಷಿ ಉತ್ಪಾದನೆ ಹೆಚ್ಚಿಸಲು ನಿರಂತರ ಕ್ರಮ: ಶಿವರಾಜ್‌ ಸಿಂಗ್‌ ಚೌಹಾಣ್‌

Leave a Reply

Your email address will not be published. Required fields are marked *