ಬೆಂಗಳೂರು: ಕಲಬುರಗಿಯಲ್ಲಿ ನಡೆಯುತ್ತಿರುವ ಐಟಿಎಫ್ ಡಬ್ಲ್ಯು-35 (ITF W-35) ಮಹಿಳಾ ಟೆನಿಸ್ (Tennis) ಟೂರ್ನಿಯಲ್ಲಿಂದು ನಡೆದ ಮಹಿಳಾ ಡಬಲ್ಸ್ ವಿಭಾಗದ ಫೈನಲ್ನಲ್ಲಿ ವೈಷ್ಣವಿ ಅಡ್ಕರ್ ಮತ್ತು ಅಂಕಿತಾ ರೈನಾ ಜೋಡಿ ಗೆಲುವು ಸಾಧಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
2-0 ಸೆಟ್ಗಳ ಅಂತರದಿಂದ ಗೆಲುವು
ಉತ್ತಮ ಪ್ರದರ್ಶನ ನೀಡಿದ ಈ ಜೋಡಿಯು ಕರ್ನಾಟಕದ ಸೋಹಾ ಸಾದಿಕ್ ಮತ್ತು ಆಕಾಂಕ್ಷಾ ದಿಲೀಪ್ ನಿಟ್ಟೂರು ಜೋಡಿಯನ್ನು 2-0 ಸೆಟ್ಗಳ ಅಂತರದಿಂದ ಪರಾಭವಗೊಳಿಸಿತು. ಇನ್ನು ಸಿಂಗಲ್ಸ್ ವಿಭಾಗದಲ್ಲೂ ವೈಷ್ಣವಿ ಅಡ್ಕರ್ ಹಾಗೂ ಅಂಕಿತಾ ರೈನಾ ಫೈನಲ್ ಪ್ರವೇಶಿಸಿದ್ದಾರೆ.
ಇಂದು ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ವೈಷ್ಣವಿ ಅಡ್ಕರ್ ಅವರು ಗಿಂಬೆರೆ ಜೆ. ಅವರನ್ನು 2-0 ಅಂತರದಿಂದ ಸೋಲಿಸಿದರೆ, ಅಂಕಿತಾ ರೈನಾ ಅವರು ನಾಕ್ಲೊಟಿ ಅವರನ್ನು 2-1 ಅಂತರದಿಂದ ಪರಾಭವಗೊಳಿಸಿದರು. ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯವು ನಾಳೆ ನಡೆಯಲಿದೆ.
ಇದನ್ನೂ ಓದಿ: ಐಟಿಎಫ್ ಏಷ್ಯಾ ಚಾಂಪಿಯನ್ಶಿಪ್ಗೆ ಕರ್ನಾಟಕದ ಆಟಗಾರರು ಆಯ್ಕೆ
